ಉತ್ತರಪ್ರಭ

ಯಾದಗಿರ: ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಈ ಶ್ರಮ್ ಕಾರ್ಡನ್ನು ಉಚಿತವಾಗಿ ನೊಂದಾಣಿ ಮಾಡಿಕೊಡಲಾಗುವುದು ಎಂದು ನೆರವು ಕಟ್ಟಡ ಮತ್ತು ಅಸಂಘಟಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿಯಾದ ಪ್ರಕಾಶಪ್ಪ ಹೇಮನೂರ್ ಅವರು ಪತ್ರಿಕಾ ಪ್ರಕಟಣೆಯ ತಿಳಿಸಿದರು.
ಈ ಶ್ರಮ ಕಾರ್ಡ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಆಕಾಂಕ್ಷಿ ಸಾವು ಅಥವಾ ಸಂಪೂರ್ಣ ಅಂಗವಿಕಲತೆಯನ್ನು ಹೊಂದಿದರೆ 2ಲಕ್ಷ ರೂ., ಭಾಗಶಃ ಅಂಗವಿಕಲಕ್ಕೆ 1ಲಕ್ಷ ರೂ. ಪರಿಹಾರವನ್ನು ಪಡೆಯಬಹುದಾಗಿದೆ ಜೊತೆಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ವಸತಿ ಕಾರ್ಮಿಕರ ಉದ್ಯೋಗವಕಾಶ ಸಹಾಯವಾಗಲಿದೆ ಆದಕಾರಣ ಉಚಿತ ಸೌಲಭ್ಯವನ್ನು ಪಡೆದುಕೊಳ್ಳಬೇಕು ಹಾಗೆ ನಮ್ಮ ಸಂಘಟನೆಯ ಶಾಖೆಗಳಾದ ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್, ವಡಗೇರಾ, ಇನ್ನು ಮುಂತಾದ ಭಾಗದಲ್ಲಿ ನಮ್ಮ ಶಾಖೆಗಳು ನಿಮ್ಮ ಸಹಾಯಕ್ಕೆ ಸದಾ ಸಿದ್ದವಾಗಿರುತ್ತವೆ ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆಯ ಕಾರ್ಮಿಕರ ಇಲಾಖೆಯಲ್ಲಿ ತಾಲೂಕು ಕಾರ್ಮಿಕ ನಿರೀಕ್ಷಕರ ಕೊರತೆ ಇದ್ದು ಕಾರ್ಮಿಕರ ಪರದಾಡುವಂತಾಗಿದೆ ಯಾದಗಿರಿ, ಶೊರಾಪುರ್, ಹುಣಸಿಗಿ ಮೂರು ತಾಲೂಕಿನಲ್ಲೂ ಒಬ್ಬರೇ ನಿರೀಕ್ಷಕರು. ಅದೇ ರೀತಿ ಶಹಪುರ್, ವಡಿಗೇರಾ ಎರಡು ತಾಲೂಕಿಗೂ ಒಬ್ಬರೇ ಕಾರ್ಮಿಕ ನಿರೀಕ್ಷಕರು ಇದ್ದು ಕಾರ್ಮಿಕರ ಸಮಸ್ಯೆಗಳು ಹೆಚ್ಚಾಗಿದ್ದು ಗೋಳುಗಳನ್ನು ಕೇಳುವವರು ಯಾರು ಇಲ್ಲದಂತಾಗಿದೆ, ಇದರ ಮದ್ಯೆ ಮಧ್ಯವರ್ತಿ(ಬ್ರೋಕರ್)ಗಳ ಹಾವಳಿ ಜಾಸ್ತಿ ಆಗಿದ್ದು ಕಾರ್ಮಿಕರಿಗೆ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ ಇದರ ಬಗ್ಗೆ ಮಾನ್ಯ ಕಾರ್ಮಿಕ ಅಧಿಕಾರಿಗಳು ಶೀಘ್ರದಲ್ಲಿ ಎಲ್ಲಾ ತಾಲೂಕು ನಿರೀಕ್ಷಕರನ್ನು ನೇಮಕ ಮಾಡುವುದರ ಮೂಲಕ ಕಾರ್ಮಿಕರು ಇಲಾಖೆ ಹತ್ತಿರ ಮತ್ತೆ ಮತ್ತೆ ಹೆಚ್ಚು ಅಲೆದಾಡುವುದನ್ನು ತಪ್ಪಸಬೇಕಾಗಿ ವಿನಂತಿ.


ಅದೇ ರೀತಿ ನಮ್ಮ ಕಲ್ಯಾಣ ಕರ್ನಾಟಕ ಭಾಗದ ತುಂಬಾ ಜನರು ವಲಸೆ ಹೋಗುತ್ತಿದ್ದಾರೆ ನಮ್ಮ ಕಾರ್ಮಿಕರಿಗೆ ಇಲ್ಲೇ ಉಳಿದು ಕೊಳ್ಳಲು ಉದ್ಯೋಗಗಳನ್ನು ಸೃಷ್ಠಿಸಿ ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಿಯ ಕಾರ್ಮಿಕರನ್ನು ಉಳಿಸಿಕೊಳ್ಳಬೇಕಾಗಿ ಪತ್ರಿಕಾಗೋಷ್ಠಿಯ ಮೂಲಕ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಂಜಾರ ಭಾಷೆ, ಸಂಸ್ಕೃತಿ ಉಳುವಿಗಾಗಿ ಸಮನ್ವಯ ಮಹಾಸಭೆ

ಉತ್ತರಪ್ರಭ ಸುದ್ದಿ ವಿಜಯಪುರ: ಜಿಲ್ಲೆಯ ಕೋಲ್ಹಾರ ತಾಲೂಕಿನ ಕೂಡಗಿ ತಾಂಡಾದ ಸದಾ ಸಮಾಜದ ಬಗ್ಗೆ ಚಿಂತಿಸುವ…

ಅಂಬಾಭವಾನಿ ಜಾತ್ರಾ ಉತ್ಸವ ಸಡಗರ ಸಂಭ್ರಮ ಕೃಷ್ಣೆ ತಟದಲ್ಲಿ ಕುಂಭ ಮೆರವಣಿಗೆ ಕಲರವ

ಚಿತ್ರ ವರದಿ : ಗುಲಾಬಚಂದ ಆರ್.ಜಾಧವಆಲಮಟ್ಟಿ :(ವಿಜಯಪುರ ಜಿಲ್ಲೆ) ಬೆಳ್ಳಂ ಬೆಳಿಗ್ಗೆ ತಂಪಾಗಿ ಸೂಸಿ ಬರುತ್ತಿದ್ದ…

ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಗದಗ: ಶ್ರೀ ವೆಂಕಟೇಶ್ವರ ಪ್ರೌಡ್ ಶಾಲೆ ಬೇಳಧಡಿ ಯಲ್ಲಿ ಸನ್ 1995-1996 ನೇ ಸಾಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ…