ಬೆಂಗಳೂರು: ಇಂದು ರಾಜ್ಯದಲ್ಲಿ 75 ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕು ತಗುಲಿದವರ ಸಂಖ್ಯೆ 2493 ಆಗಿದೆ. ಇದರಲ್ಲಿ ಈಗಾಗಲೇ ಇವತ್ತಿನ 28 ಪ್ರಕರಣ ಸೇರಿ ಒಟ್ಟು 809 ಕೇಸ್ ಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ರಾಜ್ಯದಲ್ಲಿ 1635 ಪ್ರಕರಣಗಳು ಸಕ್ರೀಯವಾಗಿವೆ. ಈವರೆಗೆ ಒಟ್ಟು ಕೋವಿಡ್19 ನಿಂದಾಗಿ 47 ಜನ ಸಾವನ್ನಪ್ಪಿದ್ದಾರೆ. ಇವತ್ತಿನ ಆರೋಗ್ಯ ಇಲಾಖೆಯ ಹೆಲ್ಥ್ ಬುಲಿಟಿನ್ ನ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಒಟ್ಟು ಸೋಂಕಿತ ಪ್ರಕರಣಗಳಲ್ಲಿ 59 ಪ್ರಕರಣಗಳು ಮಹಾರಾಷ್ಟ್ರದಿಂದ ಮರಳಿದವರಲ್ಲೇ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಕೊರೋನಾದ ಮಹಾ ನಂಟು ರಾಜ್ಯದಲ್ಲೂ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಲೇ ಸಾಗಿದೆ.  

ವಿವಿಧ ಜಿಲ್ಲೆಯಲ್ಲಿನ ಮಾಹಿತಿ

ಬೆಂಗಳೂರು ನಗರ-07

ವಿಜಯಪುರ-01

ಕಲಬುರಗಿ-03

ರಾಯಚೂರು-01

ದಕ್ಷಿಣಕನ್ನಡ-06

ಉಡುಪಿ-28

ಹಾಸನ-13

ಚಿಕ್ಕಮಗಳೂರು-01

ಚಿತ್ರದುರ್ಗ-07

ಯಾದಗಿರಿ-07

Leave a Reply

Your email address will not be published. Required fields are marked *

You May Also Like

ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಡಿಕೆಶಿ ವಿರೋಧ

ಬೆಂಗಳೂರು: 2003ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್…

ರಾಜ್ಯದಲ್ಲಿ ಕೊವೀಡ್ ಕರ್ಫ್ಯೂ : ಏನಿರುತ್ತೆ…? ಏನಿರಲ್ಲ…?

ನಾಳೆ ಸಂಜೆಯಿಂದ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್‌ಡೌನ್‌’ ಮಾಡಲಾಗುವುದರ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

ಶಾಸಕರೇ, ಆದರಳ್ಳಿ ಗ್ರಾಮದ ಬಗ್ಗೆ ಇಷ್ಟೇಕೆ ನಿರಾಸಕ್ತಿ?

ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ಗದಗ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಆರ್ಭಟ

ಗದಗ:ಭಾನುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,05,325 ಮಾದರಿ ಸಂಗ್ರಹಿಸಿದ್ದು, 6,78,688 ನಕಾರಾತ್ಮಕವಾಗಿವೆ. ಶನಿವಾರದ 117 ಪ್ರಕರಣ…