ಉತ್ತರಪ್ರಭ

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಗ್ರಾಮದ ರೈಸ್ ಟೆಕ್ನಾಲಜಿ ಪಾರ್ಕ ಬಳಿ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಈ ಘಟನೆಯಲ್ಲಿ ಯಮನೂರಪ್ಪ ಸಿಂಧನೂರು (55), ಅಂಬಮ್ಮ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದ್ಯಾಮಮ್ಮ (60) ಶೇಶಪ್ಪ ಬಂಡಿ (40) ಇವರಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿ ತಾಲೂಕಿನ ಶಿರವಾರ ಗ್ರಾಮಕ್ಕೆ ಮದುವೆ ನಿಶ್ಚಯ ಮಾಡಲು ಹೊರಟಿದ್ದ ಟ್ರ್ಯಾಕ್ಟರ್ ಆಯ ತಪ್ಪಿ ಪಲ್ಟಿಯಾಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಗಾಯಾಳುಗಳನ್ನು ಕಾರಟಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಾರಿಗೆ ಸಂಸ್ಥೆಯ ಬಸ್ ಪಲ್ಟಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸವೊಂದರ ವೀಲ್ ಜೇಂಟ್ ಕಟ್ ಆಗಿರುವ ಪರಿಣಾಮ, ಬಸ್ ಪಲ್ಟಿಯಾಗಿ…

ಗದಗನಲ್ಲಿ ಎಸಿಬಿ ದಾಳಿ ಬಿಜೆಪಿ ಯುವ ಮುಖಂಡ ಬಂಧನ

ಗದಗ: ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ…

ಹೆಂಡತಿಯನ್ನು ಅಮಾನುಷ್ಯವಾಗಿ ಮಚ್ಚಿನಿಂದ ಹಲ್ಲೇ ಮಾಡಿದ ಆರೋಪಿಯ ಬಂಧನ

ಉತ್ತರಪ್ರಭ ಗದಗ: ಮಾರ್ಚ 11ರಂದು ಗದಗ ನಗರದ ಲಾಯನ್ಸ್ ಸ್ಕೂಲ್ ಸಮೀಪದ ಆಟದ ಮೈದಾನ ಒಂದರಲ್ಲಿ…