ಉತ್ತರಪ್ರಭ ಸುದ್ದಿ
ಶಿರಹಟ್ಟಿ: ಜನೆವರಿ 26 ರಂದು ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವದು ತೀವ್ರ ಖಂಡನೀಯವಾದುದು ಎಂದು ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಕಾಂತ ಈಳಗೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರಭದೊಂದಿಗೆ ಮಾತನಾಡಿದ ಅವರು “ವಿದ್ಯೆಯಿಂದ ಸ್ವತಂತ್ರರಾಗಿ” “ಸಂಘಟನೆಯಿಂದ ಬಲಯುತರಾಗಿ” ಎಂಬ ಸಂದೇಶವನ್ನು ಸಾರಿದಂತಹ ಸಂತ ಮಾನವತಾವಾದಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವ ಚಿತ್ರವಿರುವ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಸಮಾಜದಲ್ಲಿ ಸಮಾನತೆಯನ್ನು ಎತ್ತಿಹಿಡಿದು, ಜಾತಿ, ಮತ ಭೇಧಗಳನ್ನು ಧಿಕ್ಕರಿಸಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು, ಒಂದೇ, ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಸಾರಿ ಸಮಾಜಕ್ಕೆ ಬೆಳಕು ಮೂಡಿಸಿದವರು. ಗುರುಗಳ ಕೊಟ್ಯಾಂತರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಅಗೌರವ ತೋರಿಸಿರುವುದು ವಿಷಾದನೀಯ.

ಪ್ರತಿ ವರ್ಷವೂ ಗಣರಾಜ್ಯೋತ್ಸವ ಪರೇಡ್ ನಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿಕಾರರ ಸ್ಥಬ್ದ ಚಿತ್ರವನ್ನು ಅಳವಡಿಸುವುದು ಸರ್ಕಾರದ ರೂಢಿಯಲ್ಲಿದೆ. ಕೇಂದ್ರ ಸರಕಾರದ ಸಮೀತಿ ಈ ಬಗ್ಗೆ ಪುನರ್ಪರಿಶೀಲನೆ ಮಾಡಿ ಗುರುದೇವರ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇರುವಂತೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಶಿರಹಟ್ಟಿ ತಾಲೂಕು ಆರ್ಯ ಈಡಿಗ ಸಂಘ ಒತ್ತಾಯಿಸುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

You May Also Like

ಕ ಸಾ ಪ ಜಿಲ್ಲಾಧ್ಯಕ್ಷರಾಗಿ ಶ್ರೀ ವಿವೇಕಾನಂದಗೌಡ ಆಯ್ಕೆ

ಗದಗ: ಇಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬಹುನೀರಿಕ್ಷಿತ ಅಭ್ಯರ್ಥಿಯಾದ ಶ್ರೀ ವಿವೇಕಾನಂದಗೌಡ ಪಾಟೀಲ ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಅಭ್ಯರ್ಥಿಗಳಲ್ಲಿ ಮಾಜಿ ಅಧ್ಯಕ್ಷರಾಗಿದ್ದ ಡಾ. ಶರಣು ಗೋಗೆರಿಯವರನ್ನು ಸೋಲಿಸಿ ಗೆದ್ದಿರುವುದು ಸಾಹಿತ್ಯ ಆಸಕ್ತರಲ್ಲಿ ಸಂತಸವನ್ನುಂಟು ಮಾಡಿದೆ.

ರಕ್ತದಾನ ಮಾಡಿ ಜೀವ ಉಳಿಸಿ

ಆರೋಗ್ಯವಂತ ಯುವಕ ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕೆಂದು ಐಎಂಎ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಆರ್.ಟಿ. ಪವಾಡಶೆಟ್ಟರ್ ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಕೈ ಸೇರಲು ಮುಹೂರ್ತ ಫಿಕ್ಸ್!

ಪಕ್ಷೇತರರಾಗಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಾಸಕ ಶರತ್ ಬಚ್ಚೇಗೌಡ, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ದಿನಾಂಕ ಫಿಕ್ಸ್ ಆಗಿದೆ. ಇದೇ ತಿಂಗಳ 25ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಬುಲೆಟ್ ಕೊಟ್ರ ತಾಳಿ ಕಟ್ತಿನಿ ಅಂತ ಪಟ್ಟು ಹಿಡಿದ ವರನಿಗೆ ಏನಾತು ನೋಡ್ರಿ.

ಉತ್ತರಪ್ರದೇಶ್: ಪ್ರತಿಯೊಬ್ಬ ಹೆಣ್ ಮಕ್ಕಳು ಮನ್ಯಾಗ್ ತಂದಿ-ತಾಯಿ ಸಾಲಾಸೂಲಾ ಮಾಡಿ ಮದ್ವಿ ಮಾಡಿ, ಅಳಿಯಾ ಕೇಳೋವಷ್ಟು ವರದಕ್ಷಿಣೆ ಕೊಟ್ಟು ಮಗಳನ್ ಗಂನ್ ಮನಿಗೆ ಕಳಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿ ಹೋಗುತ್ತ. ಷ್ ಅಪ್ಪಾ ಅಂತ ಮಗಳ್ ಮದ್ವಿ ಆದ್ರ ಸಾಕು ತಂದಿ-ತಾಯಿ ನಿಟ್ಟುಸಿರು ಬಿಡ್ತಾರಾ? ಆದರೆ ಇಲ್ಲೊಬ್ಬ ಹುಡುಗಿ ವರದಕ್ಷಣಿ ಅಂತ ನಂಗ್ ಬುಲೇಟ್ ಬೇಕಾಬೇಕು ಅಂತ ಪಟ್ಟು ಹಿಡಿದ ವರನಿಗೆ ತಕ್ಕ ಪಾಠಾ ಕಲಿಸ್ಯಾಳ.