ವರದಿ: ವಿಠಲ ಕೆಳೂತ್
ಮಸ್ಕಿ:ಪಟ್ಟಣದ 20ನೇ ವಾರ್ಡಿನ ಶುದ್ದ ಕುಡಿಯುವ ನೀರಿನ ಘಟಕ ಕಳಪೆ ಕಾಮಗಾರಿಯಿಂದ ಕೂಡಿದ್ದು, ತನಿಖೆ ಕೈಗೊಂಡು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ನಾರಾಯಣಗೌಡ ಬಣದ ಕರವೇ ಅಧ್ಯಕ್ಷ ದುರಗರಾಜ ವಟಗಲ್ಲ ಆರೋಪಿಸಿದರು.


ಪಟ್ಟಣದ ಗಾಂಧಿನಗರದಲ್ಲಿ ಬೆಳಿಗ್ಗೆ ಕೆಲ ಕಾಲ ಪ್ರತಿಭಟನೆ ನಡೆಸಿ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಅಕ್ರೋಶ ಹೊರ ಹಾಕಿದರು.
ಬಳಿಕ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ 20ಲಕ್ಷ ರೂಪಾಯಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ಮಗಿದು 3ವರ್ಷಗಳು ಗತಿಸಿವೆ, ಪ್ಲಾಂಟ್ ಆರಂಭಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಕ್ಯಾರೆ ಎನ್ನುತ್ತಿಲ್ಲ. ಘಟಕ ಆರಂಭಿಸದೇ ಇರುವುದರಿಂದ ಬಡವಾಣೆಯ ಜನರಿಗೆ ನೀರಿನ ಬವಣೆ ಉಂಟಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಹಿನ್ನಲೆಯಲ್ಲಿ ಘಟಕ ಆರಂಭವಾಗಿಲ್ಲ. ಆರಂಭಿಸಲು ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಶುದ್ದ ಕುಡಿಯುವ ಘಟಕ ಆರಂಭಿಸಬೇಕೆಂದು ಒತ್ತಾಯಿಸಿದರು. ಲಿಂಗಸ್ಗೂರಿನ ಆರ್ ಡಬ್ಲೂ, ಎಸ್ ಎಸ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ, ಅಸ್ಮಾ ನೂರ ಅಮ್ಮದ್, ಮಾಜಿ ಜಿಪಂ ಮಹಾದೇವಿ, ಬಸವರಾಜ, ರಾಘು, ಶಿವು ಜಾಕಿ, ಲಕ್ಣ್ಮಣ, ಸಚಿನ ಸೇರಿದಂತೆ ಇನ್ನಿತರಿದ್ದರು