
ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ ಕೈಗೊಂಡ ಸಂರ‍್ಭದಲ್ಲಿ ವಿಷಪ್ರಾಷನಕ್ಕೆ ಪ್ರಯತ್ನಿಸಿದ ಘಟನೆ ಜರುಗಿತ್ತು. ಈ ಘಟನೆಯಲ್ಲಿ ಜಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರೋಜ ಪಾಟೀಲ ಅವರ ಆರೋಗ್ಯವನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ವಿಚಾರಿಸಿ ಕುಟುಂಬಸ್ಥರಿಗೆ ಧರ‍್ಯ ತುಂಬಿದರು. ಹಾಗೂ ಜಿಮ್ಸ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದರು.
ಇದೇ ಸಂರ‍್ಭದಲ್ಲಿ ಸಂತ್ರಸ್ಥೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಐವತ್ತು ಸಾವಿರ ರೂ. ಗಳ ಪರಿಹಾರ ಚೆಕನ್ನು ವಿತರಿಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನರ‍್ದೇಶಕ ಪ್ರಶಾಂತ ವರಗಪ್ಪನವರ ಹಾಜರಿದ್ದರು.