ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ, ಸಾಹಿತ್ಯ, ಕಲೆ,ಸಂಸ್ಕೃತಿ ಮತ್ತುಜನಪದಗಳ ರಕ್ಷಣೆ,ಪ್ರಸಾರ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕ.ಸಾ.ಪದ ನಿಬಂಧನೆ ಸಂಖ್ಯೆ ೧೧(ಓ)ರಂತೆ ಸಂಘ-ಸಂಸ್ಥೆಗಳ ಪ್ರತಿನಿಧಿ ಯಾಗಿ ಸಾಂಸ್ಕೃತಿ ಚಿಂತಕರಾದ ನಬಿಸಾಬ ಕುಷ್ಟಗಿ ಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಗೆ ಸಂಘ-ಸಂಸ್ಥೆಗಳ ಪ್ರತಿನಿಧಿ ಯಾಗಿ ನೇಮಕ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನಾಡೋಜ ಡಾ. ಮಹೇಶ್ ಜೋಶಿಯವರ ಪರವಾಗಿ ಇವರು ಪ್ರಚಾರ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಅವರ ಮಾರ್ಗದರ್ಶನದಲ್ಲಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದರು.
ಇವರು ನಡೆದು ಬಂದ ದಾರಿ..
ಪ್ರಸ್ತುತ ಸಮೃದ್ಧಿ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ಈ ಹಿಂದೆ ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿದ್ದಾಗ ಉತ್ತರ ಕರ್ನಾಟಕದ ಕಾರ್ಯಕ್ರಮ ಸಮನ್ವಯಕಾರಕನಾಗಿ,ಕರ್ನಾಟಕ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ(ಪೆವಾರ್ಡ್-ಕೆ) ರಾಜ್ಯ ಸಮಿತಿ ಸದಸ್ಯರಾಗಿ, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕರಾಗಿ,ಸಮುದಾಯ ಸಂಘಟನೆ ಅಧ್ಯಕ್ಷರಾಗಿ, ಸಾಣೇಹಳ್ಳಿಯ ಶಿವಸಂಚಾರದ ಕಲಾವಿದರಾಗಿ ಕೊಪ್ಪಳ ಜಿಲ್ಲಾ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ,ಕರ್ನಾಟಕ ರಂಗ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಬಸವ ಸಮಿತಿ ಸದಸ್ಯರಾಗಿ ಸಮೂಹ ಸಂಸ್ಥೆ, ಲೋಕ ಶಿಕ್ಷಣ ಸಮಿತಿ, ಮೈರಾಡ,ಸುರಕ್ಷಾ ಸಂಸ್ಥೆಗಳಲ್ಲಿ ಸಂಯೋಜಕರಾಗಿ,ಸೇವೆ ಸಲ್ಲಿಸಿದ್ದಾರೆ.

ಇವರು ಸಂಘಟನೆ, ಸಮಾಜ ಸೇವೆ,ರಂಗಕರ್ಮಿಯಾಗಿ ಕಲಾವಿದರಾಗಿ,ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ರಾಜ್ಯ,ದೇಶ-ವಿದೇಶಗಳಲ್ಲಿ ಪಾಲ್ಗೊಂಡಿದ್ದಾರೆ.
ಇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾಡಿನ ನೆಲ ಜಲ ಸಾಂಸ್ಕೃತಿ,ಭಾಷೆ, ಕಲೆ,ಜನಪದ ಇವುಗಳ ರಕ್ಷಣೆಗಾಗಿ ಸೇವೆ ಮಾಡಲು ವಿಶ್ವಾಸ ವಿಟ್ಟು ಅವಕಾಶ ಕಲ್ಪಿಸಿದಂತಹ ನಾಡೋಜ ಡಾ. ಮಹೇಶ್ ಜೋಶಿಯವರು,ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರಿಗೆ ಹಾಗೂ ಕಸಾಪದ ಆಜೀವ ಸದಸ್ಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.