ಶಿರಹಟ್ಟಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಬೆಂಗಳೂರು, ತಾಲೂಕ ಘಟಕ ಶಿರಹಟ್ಟಿ ಹಾಗೂ ಬಂಜಾರ ನೌಕರರ ಸಂಘ ಶಿರಹಟ್ಟಿ ವತಿಯಿಂದ ಬಂಜಾರ ಚರಿತ್ರೆ ಹಾಗೂ ಬಂಜಾರ ಚಿಂತನ ಕಾರ್ಯಕ್ರಮ ಶ್ರೀ ಸಿ.ಎಸ್ ಲಮಾಣಿ ಇವರ ಮಹಾಮನೆಯಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಸಂತ ಸೇವಾಲಾಲರ ವಿಚಾರಧಾರೆಗಳನ್ನು ಕುರಿತು ಡಬಾಲಿ ಪಿ.ಯು ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಬಂಜಾರ ಸಮಾಜದ ಏಳಿಗೆಗೆ ಹಾಗೂ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಸಂತ ಸೇವಾಲಾಲರು ಸ್ಮರಣೀಯರಾಗಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಅತ್ಯವಶ್ಯಕವಾಗಿ ಬೇಕೇ ಬೇಕು. ಅಕ್ಷರ ಜ್ಞಾನ ಪಡೆದ ವ್ಯಕ್ತಿ ಮತ್ತೊಬ್ಬರ ಕಲಿಕೆಗೆ ಪ್ರೇರಣೆಯಾಗಬೇಕು. ಇದರಿಂದ ಮಾತ್ರ ಮನುಕುಲದ ಸರ್ವ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಇಡೀ ಮಾನವ ಕುಲ ಒಂದೇ ಎನ್ನುವ ಸಮಾನತೆಯ ದೃಷ್ಟಿಕೋನದಲ್ಲಿ ಸಹೋದರತ್ವ ಮನೋಭಾವನೆಯಿಂದ ಪರಸ್ಪರ ಬಾಂಧವ್ಯದಿಂದ ಬದುಕಬೇಕು ಹಾಗೂ ಸಚ್ಚರಿತ್ರೆ ವಂತರಾಗಿ ಸಮಾಜಕ್ಕೆ ಮಾದರಿಯಾಗಿರಬೇಕು ಎನ್ನುವ ಸಂತ ಸೇವಾಲಾಲರ ಚಿಂತನೆಗಳನ್ನು ಕುರಿತು ಉಪನ್ಯಾಸ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಂಜಾರ ಸಮಾಜದ ತಾಲೂಕ ಅಧ್ಯಕ್ಷರಾಗಿರುವ ಶ್ರೀ ಎಂ.ಕೆ ಲಮಾಣಿ ಅವರು ಮಾತನಾಡುತ್ತಾ ಬದಲಾದ ಕಾಲಘಟ್ಟದಲ್ಲಿ ಲಂಬಾಣಿ ಜನಾಂಗ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ. ಅದಕ್ಕಾಗಿ ಇಂತಹ ಬಂಜಾರ ಚಿಂತನ ಕಾರ್ಯಕ್ರಮಗಳು ಈ ಜನಾಂಗದ ಏಳಿಗೆಯನ್ನು ಮಾಡುವಲ್ಲಿ ಜಾಗೃತಿಯನ್ನು ಉಂಟು ಮಾಡುತ್ತವೆ. ಸಂತ ಸೇವಾಲಾಲರು ಇಡೀ ಮಾನವ ಜನಾಂಗಕ್ಕೆ ಮಾದರಿಯಾಗಿ ಭವಿಷ್ಯವಾಣಿಯನ್ನು ಸಹ ನುಡಿದಿರುವುದು ಅವರ ದಿವ್ಯ ತೆಗೆ ಸಾಕ್ಷಿಯಾಗಿದೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕೆ ಎ.ಬಳಿಗೇರ್ ಅವರು ಮಾತನಾಡುತ್ತಾ ಗುರು ಹಿರಿಯರನ್ನು ಗೌರವಿಸುವುದು ಹಿಂದಿನಿಂದಲೂ ಬಂದಂತಹ ಪೂಜನೀಯ ಭಾವನೆಯಾಗಿದ್ದು ಇಂದಿನ ಯುವ ಪೀಳಿಗೆ ಸಂತ ಸೇವಾಲಾಲರ ನೀಡಿರುವ ಆದರ್ಶಗಳನ್ನು ತತ್ವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಹಾದಿಯಲ್ಲಿ ಸಾಗಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯರಾದ, ಡಬಾಲಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಎನ್ ಆರ್ ಕುಲಕರ್ಣಿಯವರು ಮಾತನಾಡುತ್ತಾ ಬಂಜಾರ ಸಮುದಾಯವು ಹಿಂದಿಗಿಂತಲೂ ಇಂದು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದಿವೆ. ಸಂತ ಸೇವಾಲಾಲ್ ಅವರ ಅಪಾರ ಪರಿಶ್ರಮದಿಂದ ಈ ಜನಾಂಗವನ್ನು ಶಿಕ್ಷಣದ ಮೂಲಕ ಸುಧಾರಣೆ ಕಾಣಲು ತಮ್ಮದೇ ಆದ ಚಿಂತನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಮಹನೀಯರು ನುಡಿದಿರುವ ಭವಿಷ್ಯ ವಾಣಿ ಜೀವನದ ಪಂಚಸೂತ್ರಗಳು ಪ್ರತಿಯೊಬ್ಬರ ಬದುಕಿನಲ್ಲೂ ಅನ್ವಯಿಸುತ್ತವೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ವೆಂಕಟೇಶ ಅರ್ಕಸಾಲಿ ಅವರು ನಿರೂಪಿಸಿದರು. ಮೋಹನ್ ಮಾಂಡ್ರೆ ಸ್ವಾಗತಿಸಿದರು, ಎಸ್ ಎಸ್ ಲಮಾಣಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಬಿ ಎಸ್ ಹಿರೇಮಠ, ಗುರುರಾಜ ಸರ್ಜಾಪುರ, ಡಾ. ವೆಂಕಟೇಶ್ ರಾಥೋಡ, ವಿ.ಎಂ ಲಮಾಣಿ ಎಚ್ಎಮ್ ದೇವಗಿರಿ, ಎಂ ಎ ಮಕಾಂದಾರ್, ಪಲ್ಲೆದ, ಬಡ ಬೀಮಪ್ಪ ನವರ, ಸುನಿಲ್ ಲಮಾಣಿ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಭಾಷಣ ನಿಲ್ಲಿಸಿ, ಕೆಲಸ ಮಾಡಿ: ಸಿದ್ದರಾಮಯ್ಯ

ಬೆಂಗಳೂರು: ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ @PMOIndia ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ…

ಅನರ್ಹ ಮತ್ತು ನಕಲಿ ಪಡಿತರ ಚೀಟಿ ರದ್ದುಪಡಿಸಲು ಕ್ರಮ: ಮುಖ್ಯಮಂತ್ರಿ ಸೂಚನೆ

ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ಟ್ರಾಕ್ಟರ್, ಇತರೆ ವಾಹನ ಹೊಂದಿರುವವರು ತಮ್ಮ ಕಾರ್ಡುಗಳನ್ನು ಕೂಡಲೇ ಹಿಂತಿರುಗಿಸಿ, ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗದಗ ಜಿಮ್ಸ್ ಯಡವಟ್ಟು : ಕೊರೊನಾ ಸೋಂಕಿತರ ಲೀಸ್ಟ್ ಲೀಕ್ ಔಟ್…?

ಕೊರೊನಾ ಗೈಡ್ ಲೈನ್ ಪ್ರಕಾರ ಸೋಂಕಿತರ ಹೆಸರನ್ನು ಬಹಿರಂಗಗೊಳಿಸಬಾರದು. ಆದರೆ ಇಂದು ಬೆಳಿಗ್ಗೆಯಿಂದಲೇ ಸೋಂಕಿತರ ಹೆಸರು ಇರುವ ಲೀಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲ ನಿಡಗುಂದಿ ಭಾಗದವರು- ಕಾಶಿಗೆ ಹೋಗಿಬಂದವರೇ ಈಗ ರಾಮೇಶ್ವರಕ್ಕೆ ಹೊರಟಿದ್ದರು

ಆಲಮಟ್ಟಿ : ಅವರೆಲ್ಲರೂ ಕಾಶಿಗೆ ಹೋಗಿ ಬಂದಿದ್ದರು. ಕಾಶಿ ದರ್ಶನ ಬಳಿಕ ರಾಮೇಶ್ವರ ದರುಶನಕ್ಕೆ ಶೃದ್ಧಾಭಕ್ತಿ…