ಹೊಳೆಯಾಲೂರು: ಮಲಪ್ರಭಾ ನದಿಯಲ್ಲಿ ನಿನ್ನೆಯಷ್ಟೆ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿಯೇ ಮೊಸಳೆ ಕಂಡು ಬಂದಿತ್ತು.  

ನಿನ್ನೆ ಏಕಾಏಕಿ ಬೃಹತ್ ಮೊಸಳೆ ಗ್ರಾಮಸ್ಥರ ಕಣ್ಣೆಗೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆಯಿಂದ ಅಧಿಕಾರಿಗಳು ಪರಿಶೀಲನೆ ಕಾರ್ಯ ನಡೆಸಿದರು. ಹಲವು ಗಂಟೆಗಳ ಕಾಲ ಪರಿಶೀಲಿಸಿದರೂ ಮೊಸಳೆ ಪತ್ತೆಯಾಗಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಗ್ರಾಮಸ್ಥರಿಂದ ಮೊಸಳೆ ಪತ್ತೆ ಕಾರ್ಯ ನಡೆಯಿತು.  ಮೊಸಳೆಯು ಮತ್ತೊಮ್ಮೆ ಪತ್ತೆಯಾದರೆ ಅದನ್ನು ಹಿಡಿಯುತ್ತೇವೆ ಎಂದು ಅಧಿಕಾರಿಗಳು ಹೇಳಿದರು.  

ಆದರೆ, ಹೊಳೆ ಆಲೂರು ಗ್ರಾಮದಲ್ಲಿ ಮಾತ್ರ ಆತಂಕ ಮುಂದುವರೆದಿದೆ. ಮಲಪ್ರಭ ತೀರದಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದ್ದರಿಂದಾಗಿ ಈ ಮೊಸಳೆ ಬಂದಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಸಿಡಿ ಹುಡುಗಿ ಕಿಡ್ನಾಪ್ ಕೇಸ್ : ಪ್ರಕರಣ ವರ್ಗಾವಣೆ

ಮಾಜಿ ಸಚಿನ ರಮೇಶ ಜಾರಕಿಹೋಳಿ ಅವರ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡ ಹುಡುಗಿ ಕಿಡ್ನಾಪ್ ಕೇಸ್ ಈಗ ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

ಗದಗ ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 88…

ಅಗಸ್ಟ್ 5 ರಂದು ಸಂಕಲ್ಪ ಯಾತ್ರೆಗೆ ಆಲಮಟ್ಟಿಯಲ್ಲಿ ಚಾಲನೆ

ಉತ್ತರಪ್ರಭಆಲಮಟ್ಟಿ : ದೇಶ, ನಾಡು ಕಟ್ಟುವಗೊಸ್ಕರ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮಹನೀಯರ ಸ್ಮರಣೆಗಾಗಿ…

ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರರ 'ಅಮೃತಮತಿ' ಆಯ್ಕೆ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ…