ಕೊರೋನಾ ಕಾವ್ಯ-3

ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಅರುಣಕುಮಾರ ಮ ನರಗುಂದ. ಇವರು ವೃತ್ತಿಯಲ್ಲಿ ಹಿರೇಕೆರೂರಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರ. ವೃತ್ತಿ ನ್ಯಾಯಾಂಗ ಇಲಾಖೆ ಆದರೆ ಸಾಹಿತ್ಯ ಕೃಷಿ ಇವರ ಪ್ರವೃತ್ತಿ. ಚುಟುಕು ಸಾಹಿತ್ಯ ಪರಿಷತ್ತಿನ ರಾಣೀಬೆನ್ನೂರು ತಾಲೂಕು ಅಧ್ಯಕ್ಷರಾಗಿದ್ದಾರೆ. ಹನಿ ಹನಿ ಇಬ್ಬನಿ ಬಳಗದ ಮೂಲಕವೂ ಇವರು ಹಲವಾರು ಸಾಹಿತ್ತಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಮನಸುತ ಎನ್ನವ ಕಥಾಸಂಕಲನ ಹೊರ ತಂದಿದ್ದು, ಮಲ್ಲಿಗೆ, ಕಥಾಸಂಗಮ ಹಲವಾರು ಪತ್ರಿಕೆ ಗಳಲ್ಲಿ ಲೇಖನಗಳು, ಕವನಗಳು ಪ್ರಕಟವಾಗಿವೆ. 6 ಸಂಪಾದಿತ ಕವನ ಸಂಕಲನಗಳು ಹೊರ ಬಂದಿವೆ. 2018 ರಲ್ಲಿ ಮಿರ್ಜಿ ಅಷ್ಣಾಜಿರಾಯ ಕಾವ್ಯಶ್ರೀ ಪ್ರಶಸ್ತಿ ದೊರೆತಿದೆ. ಟಿಂಪೂ ಪುರಾಣ ಎಂಬ ನಾಟಕ ಆಕಾಶವಾಣಿ ಧಾರವಾಡದಲ್ಲಿ ಪ್ರಸಾರವಾಗಿದೆ. ಜೊತೆಗೆ ಇವರು ಹವ್ಯಾಸಿ ಕಲಾವಿದರೂ ಕೂಡ ಹೌದು.

ಮುಜುಕೋ ಪ್ಯಾರ್ ನ ಕರೋನ

ಇತಿಹಾಸದಿಂದಲೂ ಭಾರತದ ಮೇಲೆ

ಬ್ರಿಟಿಷರಿಂದ ದಾಳಿ, ಹಾವಳಿ ನಡೆದೆ ಇತ್ತು

ಅವರನ್ನು ಎದುರಿಸಿ ನಮ್ಮ ದೇಶ,

ಜಲ, ನೆಲವನ್ನು ಉಳಿಸಿದವರು ವೀರಯೋಧರು ||

ಮುಂದುವರೆದು ಸಾಗಿತ್ತು ಸ್ವಾತಂತ್ರ್ಯ ಸಂಗ್ರಾಮ

ಚಳುವಳಿಗಳು, ದಂಗೆಗಳು ಬುಗಿಲೆದ್ದರೂ

ಜಗ್ಗದೆ, ಬಗ್ಗದೆ ಎದುರಿಸಿದ ನಾಯಕರು

ಬ್ರಿಟಿಷರಿಂದ ಭಲಿಷ್ಟ ಭಾರತವ ಸ್ವತಂತ್ರಗೊಳಿಸಿದರು ||

ಅಂದು ಪ್ಲೇಗ್, ಹಂದಿಜ್ವರ, ಹಕ್ಕಿಜ್ವರ

ನಮ್ಮ ಭಾರತಕ್ಕೆ ಬಂದಿದ್ದರೂ ಸಹಾ

ಅವುಗಳನ್ನು ಎದುರಿಸಿ ಬದುಕುಳಿಸಿದ್ದು

ನಮ್ಮ ಯೋಗ, ಧ್ಯಾನ, ಹೋಮ,ಗಿಡ ಮೂಲಿಕೆ ಔಷಧಿಗಳು ||

ಇಂದು ಭಾರತಕ್ಕೆ ಬಂದಿದೆ ಕೊರೊನಾ ಭೀತಿ

ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವದು ಅಪಾಯ

ಒಬ್ಬರಿಗೊಬ್ಬರು ದೂರದಲ್ಲಿರುವುದೇ ಉಪಾಯ

ಕಾರಣ ಎಲ್ಲರು ಮನೆಯಲ್ಲಿರಿ,ಅರೋಗ್ಯವಂತರಾಗಿರಿ

ಎನ್ನುವದೇ ವೇದವಾಕ್ಯ ||

ಹಿಂದಿಭಾಷೆಯಲ್ಲಿ ಒಂದು ಮಾತು ಇತ್ತು

ಮುಜಕೋ ಪ್ಯಾರ್ ಕರೋನಾ

ಆದರೆ ಈಗದಕ್ಕೆ ಬದಲಾದ ಮಾತಿದೆ

ಮುಜಕೋ ಪ್ಯಾರ್ ನ ಕರೋನಾ ||

ಅರುಣಕುಮಾರ ಮ ನರಗುಂದ(ಮನಸುತ), ರಾಣೀಬೆನ್ನೂರು.

Leave a Reply

Your email address will not be published. Required fields are marked *

You May Also Like

ಕೊರೋನಾ ಸಂಕಷ್ಟ ವಲಸಿಗರ ವಿಚಾರದಲ್ಲೂ ರಾಜಕಾರಣ..!

ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ.

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾದಂತಾಗಿದೆ.