ಗದಗ:PPG SC/ST ವಸತಿ ನಿಲಯ ಗದಗದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶ್ರೀ S.M ಹೇಬ್ಬಳ್ಳಿ ರವರು ಶ್ರೀ ಸೇವಾಲಾಲ್ ಮಹಾರಾಜರಿಗೆ ಪುಷ್ಪ ನಮನ ಸಲ್ಲಿಸಿ, ಸಂತರ ಜೀವನ ಚರಿತ್ರೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಲು ಶಿಕ್ಷಣವೊಂದೇ ಮಾರ್ಗ ಹಾಗಾಗಿ ಸೇವಾಲಾಲರ ಆದರ್ಶಗಳನ್ನು ಪಾಲಿಸಿ ತಾವುಗಳು ದೇಶದ ಹೆಮ್ಮೆಯ ಪ್ರಜೆಗಳಾಗ ಬೇಕೆಂದು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ppg ಬಿಎಡ್ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಸತಿ ನಿಲಯದ ಪಾಲಕರಾದ ಶ್ರೀಮತಿ ಸುಜಾತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಗದಗ
ದಲ್ಲಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಎರೆಯುವ ಮೂಲಕ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಬಂಜಾರ ಸಮಾಜದ ಮುಖಂಡರಾದ ಶ್ರೀ ರವಿಕಾಂತ್ ಅಂಗಡಿಯವರು ಸೇವಾಲಾಲರ ಆದರ್ಶಗಳನ್ನು ವಿದ್ಯಾರ್ಥಿಗಳು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹಾಗೆ ನಾವು ಒಳ್ಳೆಯ ಶಿಕ್ಷಣವನ್ನು ಪಡೆದು ಸತತ ಪರಿಶ್ರಮದಿಂದ ಸಾಧನೆಯ ದಡ ಸೇರಬೇಕೆಂದು ಹೇಳಿದರು. ಅತಿಥಿಗಳಾದ ಪಾಂಡು ಚವಾಣ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಸತಿನಿಲಯದ ನೀಲಯ ಪಾಲಕರಾದ ಶ್ರೀಮತಿ ಸುಜಾತಾ ರವರು ಹಿಂದುಳಿದ ಸಮುದಾಯಗಳಲ್ಲಿ ಬಂಜಾರ ಸಮುದಾಯು ಕೂಡಾ ಒಂದಾಗಿದ್ದು ವಿದ್ಯಾರ್ಥಿಗಳು ಓದಿನ ಮೂಲಕ ಉದ್ಯೋಗವನ್ನು ಪಡೆದು ಈ ಸಮಾಜವನ್ನು ಸುಧಾರಿಸಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿನಿಯರು ಹಾಗೂ ಅತಿಥಿಗಳಾದ ಶ್ರೀ ನೀಲು ರಾಥೋಡ್ ಅವರು ಉಪಸ್ಥಿತರಿದ್ದರು.





ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಬೆಟಿಗೇರಿ ಯಲ್ಲಿ ಸೇವಾಲಾಲ್ ಮಹಾರಾಜರ ಜಯಂತಿಯನ್ನು ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ಶ್ರೀ S.M. ಹೆಬ್ಬಳ್ಳಿ, ನಿಲಯ ಪಾಲಕರಾದ ಶ್ರೀಮತಿ ಸುಜಾತಾ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಬೆಟಿಗೇರಿ-2 ದಲ್ಲಿ ಸೇವಾಲಾಲ್ ಮಹಾರಾಜರ ಜಯಂತಿಯನ್ನು ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ಶ್ರೀ S.M. ಹೆಬ್ಬಳ್ಳಿ, ಬಂಜಾರ ಸಮಾಜದ ಮುಖಂಡರಾದ ಶ್ರೀ ರವಿಕಾಂತ್ ಅಂಗಡಿ, ಶ್ರೀ ನೀಲು ರಾಥೋಡ್, ಶ್ರೀ ಪಾಂಡು ಚವಾಣ್ , ನಿಲಯ ಪಾಲಕರಾದ ಶ್ರೀಮತಿ ಸುಜಾತಾ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಸರ್ಕಾರಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ ಗದಗ ದಲ್ಲಿ ಸೇವಾಲಾಲ್ ಮಹಾರಾಜರ ಜಯಂತಿಯನ್ನು ವಿಶೇಷ ಪೂಜೆ ಸಲ್ಲಿಸುವ, ಹಾಗೂ ಭೋಗ ಹಚ್ಚುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಶ್ರೀ ಭೀಮ್ ಸಿಂಗ್ ರಾಥೋಡ ರವರು ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆ ಮತ್ತು ಸಮಾಜಕ್ಕೆ ನೀಡಿದ ಮಾರ್ಗದರ್ಶನ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕ್ ಅಧಿಕಾರಿಗಳಾದ ಶ್ರೀ ಎಸ್ ಎಂ ಹೆಬ್ಬಳ್ಳಿ, ಗೋಪಾಲ್ ಪೂಜಾರ ಹಾಗೂ ಬಂಜಾರ ಸಮಾಜದ ಹಿರಿಯರು, ಸೇವಾಲಾಲ್ ನಗರದ ನಾಯಕ, ಡಾವ, ಕಾರಬಾರಿ ಮತ್ತು ನೌಕರಸ್ಥರು ಹಾಗೂ ನಿಲಯ ಪಾಲಕರಾದ ಶ್ರೀ ರಂಗಪ್ಪ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಇನ್ನುಳಿದ ವಸತಿ ನಿಲಯಗಳಲ್ಲಿ ಸಹಿತ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಿಲಯಪಾಲಕರ ನೇತೃತ್ವದಲ್ಲಿ ಜಯಂತಿಯನ್ನು ಆಚರಿಸಲಾಯಿತು.