ಮುಂಡರಗಿ: ಪರಿಸರ ಕಾಳಜಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಾವು ಬೆಳೆಸುವ ಗಿಡಿಮರಗಳು ನಮ್ಮನ್ನು ಜೀವನ ಪೂರ್ತಿ ಸಲಹುತ್ತವೆ. ಜೊತೆಗೆ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವ ದೊಡ್ಡ ಕಾಣಿಕೆಯಾಗಿದೆ ಎಂದು ಪರಿಸರ ಪ್ರೇಮಿ ಪ್ರೊ.ವಿ.ಎಫ್.ಅಂಗಡಿ ಹೇಳಿದರು.

ಅವರು ಪಟ್ಟಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಯೊಬ್ಬರು ಒಂದೊಂದು ಗಿಡ ಬೆಳೆಸಿದರೆ ಪರಿಸರಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಪ್ಪತ್ತಗುಡ್ಡದಲ್ಲಿ ಈಗಿರುವ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವ ಜೊತೆಗೆ ಬೆಳೆಸುವ ಕಾರ್ಯವಾಗಬೇಕು. ಜನಜಾಗೃತಿ ಹಾಗೂ ಕಾಳಜಿಯಿಂದ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.

ಆರ್.ಎಫ್.ಓ ಪ್ರದೀಪ ಎಸ್ ಪವಾರ್ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು. ಅರಣ್ಯ ಇಲಾಖೆಗೆ ಯುವಕರ ಸಹಕಾರ ಕೂಡ ಅತ್ಯವಶ್ಯಕವಾಗಿದೆ. ಇದರಿಂದ ಪರಿಸರಕ್ಕೆ ಪೂರಕವಾದ ಇನ್ನು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಉಪ ವಲಯ ಅರಣ್ಯಾಧಿಕಾರಿ ಎ.ಎಫ್.ಶೇಖ್, ಮೈಲಾರಪ್ಪ ಮಡಿವಾಳರ ಸೇರಿದಂತೆ ಅರಣ್ಯ ರಕ್ಷಕರು, ಇತರರು ಉಪಸ್ಥಿತರಿದ್ದರು.

Leave a Reply

Your email address will not be published.

You May Also Like

ಉತ್ತರಪ್ರಭ ಫಲಶೃತಿ: ಕಟ್ಟಿಗೆ ಅಡ್ಡೆ ಮಾಲಿಕರಿಗೆ ಮೂರು ದಿನದ ಗಡುವು ಕೊಟ್ಟ ತಹಸೀಲ್ದಾರ್!

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಟ್ಟಿಗೆ ಅಡ್ಡೆಗಳಿಗೆ ಇಂದು ತಹಶೀಲ್ದಾರ್ ಯಲ್ಲಪ್ಪ ಗೋನೆಣ್ಣವರ್ ಭೇಟಿ ನೀಡಿದರು.ತಹಶೀಲ್ದಾರ,…

ರಾಜ್ಯದಲ್ಲಿಂದು ಕೊರೊನಾ ಮರಣ ಮೃದಂಗ: ಒಂದೇ ದಿನಕ್ಕೆ 42 ಸಾವು, 1839 ಸೋಂಕಿತರು!

ಬೆಂಗಳೂರು: ರಾಜ್ಯದಲ್ಲಿಂದು 1839 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಗದಗ ಜಿಲ್ಲೆಯಲ್ಲಿ ಮತ್ತೆ ಮೂಡಿವೆ ಬಲ್ದೋಟ ಹೆಜ್ಜೆ.! : ಕಪ್ಪತ್ತಗುಡ್ಡಕ್ಕೆ ಕನ್ನಹಾಕಲು ನಡೆದಿದೆಯಾ ಯತ್ನ..?

ಇನ್ನೇನು ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಜೊತೆಗೆ ವನ್ಯಧಾಮ ಆಯಿತಲ್ಲ ಬಲ್ದೋಟ ಕಾಟ ತಪ್ಪಿತು ಅಂತ ಗದಗ ಜಿಲ್ಲೆಯ ಪರಿಸರ ಪ್ರೇಮಿಗಳು ಹಾಗೂ ಜೀವಪರ ಮನಸುಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಮತ್ತೆ ಜಿಲ್ಲೆಯಲ್ಲಿ ಬಲ್ದೋಟ ಹೆಜ್ಜೆ ಮೂಡಿವೆ.