ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ಎರೆ ಬೂದಿಹಾಳ ರಸ್ತೆ ಕಾಮಗಾರಿಗೆ ರವಿವಾರ ಶಾಸಕ ರಾಮಣ್ಣ ಲಮಾಣಿ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ರಾಮಣ್ಣ, ಗೊಜನೂರು ಭಾಗದ ರೈತರ ಸಾವಿರಾರು ಜಮೀನುಗಳು ಈ ರಸ್ತೆಯಲ್ಲಿಯೇ ಇದ್ದು ಮಳೆಗಾಲದಲ್ಲಿ ರೈತರು ತ್ರೀವ ತೊಂದರೆ ಅನುಭವಿಸುತ್ತಿದ್ದರು. ಅನೇಕ ವರ್ಷಗಳಿಂದ ಈ ರಸ್ತೆಯ ನಿರ್ಮಾಣದ ಬೇಡಿಕೆ ಕನಸಾಗಿ ಉಳಿದಿತ್ತು. ಈ ರಸ್ತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5.65 ಕಿಮಿ ರಸ್ತೆಯನ್ನು ಸುಧಾರಣಾ ಮಾಡಿ 5.32 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಕಾರ್ಯ ಕೈಗೊಳಲಾಗುತ್ತಿದೆ. ಗ್ರಾಮಸ್ಥರ ಬಹು ದಿನದ ಬೇಡಿಕೆಗೆ ಸ್ಪಂದಿಸಿದ ಆತ್ಮಸಂತೃಪ್ತಿ ನನಗಿದೆ ಎಂದರು.

ಇನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ರೈತ ಸಂಪರ್ಕ ರಸ್ತೆಗಳನ್ನು ಸುಧಾರಣೆಗಾಗಿ ಶ್ರೀಘವೇ ಸಾಕಷ್ಟು ಅನುದಾನ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಎಸ್.ಪಿ.ಪಾಟೀಲ್, ಶಿವನಗೌಡ್ರು ಪಾಟೀಲ್, ನಾಗಪ್ಪಶೆಟ್ಟರ ವಡಕಣ್ಣವರ, ವಿರುಪಾಕ್ಷ ಪಾಟೀಲ್, ಶಂಭು ಸೊರಟೂರ, ಶೇಖಣ್ಣ ಸೊರಟೂರ, ಗುತ್ತಿಗೆದಾರ ರವೀಂದ್ರ ರೆಡ್ಡಿ ಬಾಪುಗೌಡ ಪಾಟೀಲ್, ರಮೇಶ ದನದಮನಿ, ದುಂಡೇಶ ಕೊಟಗಿ, ಫಕ್ಕೀರೇಶ ರಟ್ಟೆಹಳ್ಳಿ, ಗಂಗಾಧರ ಮೆಣಸಿನಕಾಯಿ, ಸಿ.ಪಿ.ಮಾಡಳ್ಳಿ, ಮಲ್ಲೇಶಪ್ಪ ಲಮಾಣಿ, ವಿರುಪಾಕ್ಷಪ್ಪ ಅಣ್ಣಿಗೇರಿ, ಹನಮಂತಗೌಡ ಪಾಟೀಲ್, ಕುಮಾರ ಗಾವಿ, ಗೀತಾ ಪುರದ, ದ್ಯಾಮವ್ವ ಮೆಣಸಿನಕಾಯಿ, ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ ಎಸ್.ಎಚ್.ಶ್ರೀನಿವಾಸ, ಸಹಾಯಕ ಕಾರ್ಯನಿರ್ವಾಹಕ ಎಂ.ಎಸ್.ದಿವಟರ್, ಸಹಾಯಕ ಇಂಜನೀಯರ್ ಅಬ್ದುಲ್ ಚಂದ್ರಗೌಡ ಪಾಟೀಲ್ ಇದ್ದರು.

Leave a Reply

Your email address will not be published. Required fields are marked *

You May Also Like

ತರಬೇತಿಗೆ ಅರ್ಜಿ ಆಹ್ವಾನ

ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಸ್ಥೆಯಾದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ( ಸಿಡಾಕ) ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಚೇರಿ ಗದಗ ಇವರ ಸಹಯೋಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಅಬ್ಯರ್ಥಿಗಳಿಗೆ 30 ದಿನಗಳ ಉಚಿತ ಬ್ಯೂಟಿಷಿಯನ್ ಹಾಗೂ ಕಾಸ್ಮೆಟಾಲಜಿ ಕೌಶಲ್ಯಾಧಾರಿತ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

24 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಯಾವ ಶಾಸಕರಿಗೆ ಯಾವ ನಿಗಮ?

ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಒಂದು ವರ್ಷ. ವರ್ಷ ತುಂಬಿದ ಈ ಸಂದರ್ಭದಲ್ಲಿ ಸರ್ಕಾರ ವಿವಿಧ 24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶಿಸಿದೆ.