ಗದಗ: ಈ ಘಟನೆ ನಡೆಯಬಾರದಿತ್ತು. ಘಟನೆಗೆ ಸಂಬಂಧಿಸಿದಂತೆ ಈ ರೀತಿ ಮುಂದೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ. ನನ್ನಿಂದ ತಪ್ಪಾಗಿದೆ ಎಂದು ಗಜೇಂದ್ರಗಡ ತಹಶೀಲ್ದಾರ್ ಅಶೋಕ್ ಕಲಘಟಗಿ ಉತ್ತರಪ್ರಭಕ್ಕೆ ತಪ್ಪೊಪ್ಪಿಕೊಂಡಿದ್ದಾರೆ.

ಗಜೇಂದ್ರಗಡ ತಾಲೂಕಿನ ನರೇಗಲ್ಲ್ ಹೋಬಳಿಯಲ್ಲಿ ಗುರುವಾರ ಮಾದ್ಯಮ ಪ್ರತಿನಿಧಿಯ ಮೇಲೆ ತಹಶೀಲ್ದಾರ ದರ್ಪ ತೋರಿದ ಆರೋಪ ಕೇಳಿ ಬಂದಿತ್ತು.

ಜನಸಾಮಾನ್ಯರು ಆಧಾರ ಕೇಂದ್ರದಿಂದ ಸಮಸ್ಯೆ ಅನುಭವಿಸುತ್ತಿರುವ ಕುರಿತು ತಹಶೀಲ್ದಾರರ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳುವಾಗ ವರದಿಗಾರನ ಕೈಯಲ್ಲಿದ್ದ ಮೊಬೈಲ್ ಕಸಿಯಲು ಪ್ರಯತ್ನಿಸಿದ್ದಲ್ಲದೆ. ನಿನಗೆ ವಿಡಿಯೋ ಹಾಗು ಫೋಟೊ ತೆಗೆಯಲು ಅನುಮತಿ ನೀಡಿದವರು ಯಾರು? ನಿನ್ನನ್ನು ಡಿಸ್ಮಿಸ್ ಮಾಡ್ತಿನಿ ಎಂದು ಆವಾಜ್ ಹಾಕಿದ್ದರು.

ಈ ಬಗ್ಗೆ ಉತ್ತರಪ್ರಭ ಪತ್ರಿಕೆ ಹಾಗು ಸುದ್ದಿ ತಾಣದಲ್ಲಿ ವರದಿ ಬಿತ್ತರಿಸಿತ್ತು. ಜೊತೆಗೆ ರೈಸ್ ಆಪ್ ಗದಗ ಕೂಡ ಸುದ್ದಿ ಬಿತ್ತರಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತಹಶೀಲ್ದಾರ ವರ್ತನೆ ವ್ಯಾಪಕ ಖಂಡನೆಗೂ ಕಾರಣವಾಗಿತ್ತು. ಇನ್ನು ರೋಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೆಳೆಯರು ಘಟನೆ ಖಂಡಿಸಿ ಕ್ರಮಕ್ಕೆ ಆಗ್ರಹಿಸಿ ರೋಣ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಮಾದ್ಯಮ ಗೆಳೆಯರ ಈ ಕಾರ್ಯ ನಿಜಕ್ಕೂ ಆತ್ಮಸ್ಥೈರ್ಯ ತುಂಬುವಂಥದ್ದು. ಇ‌ನ್ನು ಮುಖ್ಯವಾಗಿ ಘಟನೆ ಬಗ್ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿ ಪತ್ರಕರ್ತರೆ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳುವ ಮೂಲಕ ನೈತಿಕ ಬಲ ತುಂಬಿದರು. ನಿಜಕ್ಕೂ ಜನಪರವಾಗಿ, ಜನರ ಧ್ವನಿಯಾಗುವತ್ತು ಪ್ರಯತ್ನಿಸುತ್ತಿರುವ ಉತ್ತರಪ್ರಭ ತಂಡಕ್ಕೆ ಸಂಘಟನೆಗಳು, ಮಾದ್ಯಮದ ಸಹೋದ್ಯೋಗಿ ಮಿತ್ರರು, ಪ್ರಮುಖರು,  ಹೋರಾಟಗಾರರು, ರೈತರು, ಜನಸಾಮಾನ್ಯರು ನೀಡಿದ ನೈತಿಕ ಬೆಂಬಲ ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ.

1 comment
Leave a Reply

Your email address will not be published. Required fields are marked *

You May Also Like

ದಿನಾಂಕ 27-12-2021 ರಂದು ವೇತನ ಸಹಿತ ರಜೆಯನ್ನು ಘೋಷಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ

ಉತ್ತರಪ್ರಭ ಸುದ್ದಿ ಗದಗ: ರಾಜ್ಯದಲ್ಲಿ 58 ಸ್ಥಳಿಯ ಸಂಸ್ಥೆಗಳಿಗೆ ಹಾಗೂ ಅವಧಿ ಮುಕ್ತಾಯವಾದ ಮತ್ತು ಖಾಲಿ…

ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಸೂಚನೆ: ಡಿಸಿ ಎಂ.ಸುಂದರೇಶ್ ಬಾಬು

ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆಗಳ ಗಡಿ ಗುರುತಿಸಿ, ಅತಿಕ್ರಮಣವಾದ ಕೆರೆಗಳನ್ನು ನವೆಂಬರ್ ತಿಂಗಳ ಅಂತ್ಯದೊಳಗಾಗಿ ತೆರವುಗೊಳಿಸಿ ಉದ್ಯಾನವನ (ಪ್ಲಾಂಟೇಷನ್) ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಪಿಡಿಒಗಳಿಗೆ ಸೂಚನೆ ನೀಡಿದರು.

ಗದಗ ಜಿಲ್ಲೆಯಲ್ಲಿ ಮತ್ತೆ ಮೂಡಿವೆ ಬಲ್ದೋಟ ಹೆಜ್ಜೆ.! : ಕಪ್ಪತ್ತಗುಡ್ಡಕ್ಕೆ ಕನ್ನಹಾಕಲು ನಡೆದಿದೆಯಾ ಯತ್ನ..?

ಇನ್ನೇನು ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಜೊತೆಗೆ ವನ್ಯಧಾಮ ಆಯಿತಲ್ಲ ಬಲ್ದೋಟ ಕಾಟ ತಪ್ಪಿತು ಅಂತ ಗದಗ ಜಿಲ್ಲೆಯ ಪರಿಸರ ಪ್ರೇಮಿಗಳು ಹಾಗೂ ಜೀವಪರ ಮನಸುಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಮತ್ತೆ ಜಿಲ್ಲೆಯಲ್ಲಿ ಬಲ್ದೋಟ ಹೆಜ್ಜೆ ಮೂಡಿವೆ.

ಕೊರೊನಾ ಸಂಕಷ್ಟ – ರಾಜ್ಯದಲ್ಲಿ ಮತ್ತೆ ಕರ್ಫ್ಯೂ ಜಾರಿಗೊಳಿಸಿದ ಸರ್ಕಾರ!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಂಕಷ್ಟ ಮುಂದುವರೆದ ಹಿನ್ನೆಲೆಯಲ್ಲಿ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಈ…