ಮುಳಗುಂದ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಎಂದೆ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು ಶನಿವಾರ ನಿಧನರಾದ ಹಿನ್ನೆಲೆ ಇಲ್ಲಿನ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾವಚಿತ್ರಕ್ಕೆ ಪುಷ್ಪ ನಮನ, ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಧರ್ಮಗುರು ಲಾಲಶಾಪೀರ ಮಕಾಂದಾರ ಮಾತನಾಡಿ, ಇಬ್ರಾಹಿಂ ಸುತಾರ ಅವರ ನಾಡಿನೆಲ್ಲಡೆ ಪ್ರವಚನ ನೀಡುವ ಮೂಲಕ ಭಾವೈಕ್ಯತೆಯ ಹರಿಕಾರರಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ, ಎರಡುಭಾರಿ ಮುಳಗುಂದಕ್ಕೂ ಭೇಟಿಕೊಟ್ಟಿದ್ದರು. ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ದಾವುದ ಜಮಾಲಸಾಬನವರ, ಹಮೀದ್ ಮುಜಾವರ, ಗೂಳಪ್ಪ ಮಜ್ಜಿಗುಡ್ಡ, ಅಜರುದ್ದಿನ ಲಾಡಸಾಬನವರ, ಗಿರೀಶ ಫಿರಂಗಿ,ರಿಯಾಜ ಮುಲ್ಲಾ,ಶರಣಪ್ಪ ಕಮಾಜಿ,ಶರಣಪ್ಪ ಮಳ್ಳಿ,ಮುನ್ನಾ ಢಾಲಾಯತ ಹಾಗೂ ಬ್ಯಾಂಕ್ ನಿರ್ದೇಶಕರು ಇದ್ದರು.

Leave a Reply

Your email address will not be published. Required fields are marked *

You May Also Like

ಕಸ್ತೂರಿ ರಂಗನ್ ವರದಿ: ಭಿನ್ನಾಭಿಪ್ರಾಯ ದಾಖಲಿಸಿದ ಬಿ.ಎಸ್.ವೈ.

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಕಸ್ತೂರಿರಂಗನ್ ವರದಿ ಜಾರಿ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ…

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

ಗದಗನಲ್ಲಿ ಹೀಗಿದೆ ವಿಕೆಂಡ್ ಕರ್ಪ್ಯೂ..!

ವೀಕೆಂಡ್ ಕಫ್ಯೂ೯ ಹಿನ್ನೆಲೆಯಲ್ಲಿ ಗದುಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಬ್ದವಾಗಿದೆ.

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ:ಶಾಸಕ ಬಂಡಿ

ಮನಸೊರೆಗೊಂಡ ಮಲ್ಲಕಂಬ ಪ್ರದರ್ಶನ ಉತ್ತರಪ್ರಭ ನರೆಗಲ್ಲ: ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ…