ವರದಿ: ವಿಠಲ ಕೆಳೂತ್


ಮಸ್ಕಿ: ದೇವನಾಂಪ್ರಿಯ ಅಶೋಕ ಮೋಟಾರ ರಿವೈಂಡಿಗ್ ಕಾರ್ಮಿಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸರ್ವ ಸದಸ್ಯರ ಒಮ್ಮತ್ತದಿಂದ ಹುಸೇನಸಾಬ ಇಲಕಲ್ಲ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕರಿಯಪ್ಪ(ಉಪಾಧ್ಯಕ್ಷ) ಮಲ್ಲಿಕಾರ್ಜುನ(ಗೌರವಧ್ಯಕ್ಷ) ಶಂಕರಸಿಂಗ್(ಪ್ರಧಾನ ಕಾರ್ಯದರ್ಶಿ) ಚಂದು ಮುರಾರಿ(ಜಂಟಿ ಕಾರ್ಯದರ್ಶಿ) ಚಂದ್ರಸ್ವಾಮಿ(ಖಜಾಂಚಿ) ಇರ್ಫಾನ್( ಜಂಟಿ ಖಜಾಂಚಿ) ಕಾರ್ಯಕಾರಣಿ ಸದಸ್ಯರನ್ನಾಗಿ ಮೆಹಬೂಬ್ ಸಾಬ, ಮಾಲಸಾಬ ಗಾದಿ, ಸದ್ದಾಂ ಜಂಡಕಟ್ಟೆ, ಮೌಲಸಾಬ ಛತ್ತಿ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ನೂತನವಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷ ಹುಸೇನಸಾಬ ಇಲಕಲ್ಲ ಅವರು ಮಾತನಾಡಿ, ರಾಜ್ಯದಲ್ಲಿನ ಮೋಟಾರ ರಿವೈಂಡಿಗ್ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಭದ್ರತೆ ಇಲ್ಲ. ಸರಕಾರದಿಂದ ಯಾವುದೇ ರೀತಿ ಸೌಲಭ್ಯ ಸಿಗುತ್ತಿಲ್ಲ.‌ ಹೀಗಾಗಿ ನಾವೆಲ್ಲರೂ ಒಗ್ಗಟ್ಟು ಆಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ರಿವೈಂಡಿಗ್ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ,ಕಾರ್ಯಕಾರಿ ಸದಸ್ಯ ಈಶ್ವರಪ್ಪ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

You May Also Like

ಸೋಕ್ ಪಿಟ್ ಕಾಮಗಾರಿ ಶೀಘ್ರ ಯಶಸ್ವಿಗೊಳಿಸಿ

ಸೋಕ್ ಪಿಟ್ ಮತ್ತು ಪೌಷ್ಟಿಕ ತೋಟ ನಿರ್ಮಾಣ ಗುರಿಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿ ಶೀಘ್ರದಲ್ಲೇ ತಲುಪಲು ಪ್ರಯತ್ನಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ಕಲ್ಲೇಶ ಅವರು ಹೇಳಿದರು.

ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿ: ಡಾ.ಬಸವಲಿಂಗ ಸ್ವಾಮೀಜಿ

ವೇದ ಪರಂಪರೆ, ವೈದಿಕ ಪರಂಪರೆ ಮತ್ತು ಆಚಾರ್ಯ ಪರಂಪರೆಗಳಿಗಿಂತಲೂ ಬಸವ ಪರಂಪರೆ ಶ್ರೇಷ್ಠವಾದುದು. ಎಲ್ಲರ ಬದುಕಿಗೆ ಅನುಗುಣವಾದ ಪರಂಪರೆ ಇದು. ಈ ನಿಟ್ಟಿನಲ್ಲಿ ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿಯಾಗಿದೆ

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…