ದಾವಣಗೆರೆ: ಅಂತರ್ ರಾಜ್ಯ ಕಾರ್ಮಿಕರು ತಮ್ಮ ರಾಜ್ಯಗಲಿಗೆ ಹೋಗಲು ಸರ್ಕಾರ ಸೇವಾ ಸಿಂಧುನಲ್ಲಿ ಆನ್ಲೈನ್ ಅರ್ಜಿ ಹಾಕಲು ಪರದಾಡುವಂತಾಗಿದೆ.

ದಾವಣಗೆರೆಯಲ್ಲಿಂದು ಬೆಳಿಗ್ಗೆಯಿಂದಲೇ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಗಳು ತನ್ನ ತವರಿಗೆ ಹೋಗಲು ಹರಸಾಹಸ ಪಡುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ಅತಂತ್ರವಾಗಿರುವ ಇವರು, ಹೊರ ರಾಜ್ಯಗಳಿಗೆ ತೆರಳಲು ಹಾಗೂ ರಾಜ್ಯದೊಳಗಿನ ತಮ್ಮ ತವರಿಗೆ ಮರಳಲು ರಾಜ್ಯ ಸರಕಾರ ಸೇವಾಸಿಂಧು ಆನ್ಲೈನ್ ಮೂಲಕ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ನಗರದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ, ಮಹಾನಗರಪಾಲಿಕೆ, ತಹಸೀಲ್ದಾರ್ ಕಚೇರಿ ಸೇರಿದಂತೆ ಹರಿಹರ ನಗರಸಭೆ,  ಚನ್ನಗಿರಿ ಪುರಸಭೆ. ಹೊನ್ನಾಳಿ ಮತ್ತು ಜಗಳೂರಿನ ಪಟ್ಟಣ ಪಂಚಾಯ್ತಿಗಳ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ. ಆದರೆ ಭಾಷಾ ಸಮಸ್ಯೆ, ಅಕ್ಷರ ಬಾರದೇ ಇರುವುದು ಇವರಿಗೆ ತಲೆ ನೋವಾಗಿದೆ. ಅಲ್ಲದೇ ನಗರದಲ್ಲಿನ ಸೇವಾಕೇಂದ್ರಗಳು ಬಂದ್ ಆಗಿದ್ದರೂ,  ಅವುಗಳ ತಲಾಷೆಯಲ್ಲಿ ಅನ್ಯರಾಜ್ಯದವರು ಇದ್ದಾರೆ. ಇನ್ನೊಂದೆಡೆ ದಾವಣಗೆರೆಯಲ್ಲಿ ಸೋಂಕಿತ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ನಾನಾ ಕಾರಣಗಳನ್ನು ಹೇಳಿ ಹೊರ ಜಿಲ್ಲೆಗೂ ಹೋಗುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಹೇಗೆ ಅಪ್ಲೀಕೇಶನ್ ಹಾಕಬೇಕೆಂದು ತಿಳಿಯುತ್ತಿಲ್ಲ. ಈ ನಡುವೆ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆಯಲ್ಲಿ ಜನರು ಸಾಲಿನಲ್ಲಿ ನಿಲ್ಲಲಾಗದೆ ತಮ್ಮ ಚಪ್ಪಲಿಗಳನ್ನು ಗುರುತಿಗಾಗಿ ಇಡುತ್ತಿರುವುದು ದೃಶ್ಯ ಕಂಡು ಬಂದವು.

Leave a Reply

Your email address will not be published. Required fields are marked *

You May Also Like

ಸಾರ್ವಜನಿಕರ ಗಮನಕ್ಕೆ

ಬೆಟಗೇರಿ ನಗರಸಭೆ ವ್ಯಾಪ್ತಿಯ ಖಸಾಯಿ ಖಾನೆಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಾ.11 ರಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ, ಜಾನುವಾರುಗಳ ವಧೆ ಮಾಡುವುದನ್ನು ನಿಷೇಧಿಸಲಾಗಿದೆ.

ಕೆಸಿಸಿ ಬ್ಯಾಂಕ್ ಗೆ ಪುಲಕೇಶಿ ಉಪನಾಳ ನಾಮನಿರ್ದೇಶನ

ಲಕ್ಷ್ಮೇಶ್ವರ: ಇಲ್ಲಿನ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿ ಅಧ್ಯಕ್ಷರಾದ ಪುಲಿಕೇಶಿ ಗೂಳಪ್ಪ ಉಪನಾಳ…

ಕಳ್ಳತನ ಪ್ರಕರಣ ಇಬ್ಬರ ಬಂಧನ.

ಜಿಲ್ಲೆಯಲ್ಲಿ ಈಚೆಗೆ ನಡೆದ ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 5.18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ