ವರದಿ : ಗುಲಾಬಚಂದ ಆರ್.ಜಾಧವ, ಆಲಮಟ್ಟಿ


ಆಲಮಟ್ಟಿ : ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಂಘದ ನಿಯೋಗ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.


ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಕಾರ ಸೂಕ್ತ ನ್ಯಾಯ ಒದಗಿಸಬೇಕೆಂಬುದು ಸಂಘದ ಪ್ರಮುಖ ಬೇಡಿಕೆಗಳಲ್ಲೊಂದಾಗಿದೆ.
6 ರಿಂದ 8 ಕ್ಕೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿದ್ದು ಈಗಾಗಲೇ 15000 ಶಿಕ್ಷಕರನ್ನು ನೇಮಿಸಿಕೊಳ್ಳಲು ಸರಕಾರ ಮುಂದಾಗಿ ತನ್ನ ನಿಧಾ೯ರ ಪ್ರಕಟಿಸಿದೆ. ಆ ನಿಟ್ಟಿನಲ್ಲಿ ಕರಡು ನೇಮಕಾತಿ ನಿಯಮಗಳನ್ನು ಸಹ ರೂಪಿಸಿದೆ. ಅಲ್ಲದೇ ಅದಕ್ಕೆ ಏನಾದರೂ ಅಕ್ಷೇಪಣೆಗಳಿದ್ದಲ್ಲಿ ತಿಳಿಸುವಂತೆ ಕೋರಿದೆ. ಇದು ಸ್ವಾಗತಾರ್ಹ. ಸರಕಾರದ ನೇಮಕಾತಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಗಳನ್ನು ಸಂಘ ಪ್ರಾಂಜಲ್ಯ ಮನದಿಂದ ಸಮ್ಮತಿಸಿದೆ. ಆದರೆ ಸೇವಾನಿರತ ಪದವೀಧರ ಶಿಕ್ಷಕರಿಗೆ ಈ ನೇಮಕಾತಿಯಲ್ಲಿ ಪರಿಗಣಿಸಬೇಕು. ಅವರಿಗೆ ಮೊದಲ ಆದ್ಯತೆ ನೀಡಿ ನ್ಯಾಯ ಕಲ್ಪಿಸಿಕೊಡಬೇಕೆಂದು ಆಗ್ರಹಪಡಿಸಿದೆ.


ಏನಿದು ನ್ಯಾಯಯುತ ಬೇಡಿಕೆ ? ರಾಜ್ಯದಲ್ಲಿ ಕಳೆದ ಇಪ್ಪತ್ತು, ಇಪ್ಪತೈದು ವರ್ಷಗಳಿಂದ ಸುಮಾರು 75000 ಸಾವಿರಕ್ಕೂ ಹೆಚ್ಚು ಅರ್ಹ ಪದವೀಧರ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕಾಗಿ ನಿರಂತರ ಶ್ರಮಿಸುತ್ತಿದ್ದಾರೆ. 6 ರಿಂದ 8 ನೇ ತರಗತಿ ಮಕ್ಕಳಿಗೆ ವಿಜ್ಞಾನ, ಗಣಿತ,ಸಮಾಜ,ಇಂಗ್ಲಿಷ್ ಸೇರಿ ನಾನಾ ವಿಷಯಗಳ ಬೋಧನಾ ಪಾಠ ಪ್ರವಚನ ನಡೆಸುತ್ತಿದ್ದಾರೆ. ಅವರನ್ನು ಪ್ರಸ್ತುತ ನೇಮಕಾತಿಯಲ್ಲಿ 6 ರಿಂದ 8 ಕ್ಕೆ ಪರಿಗಣಿಸಿ ಈ ಸೇವಾನಿರತ ಪದವೀಧರ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸಬೇಕು ಎಂಬುದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಕ್ಕೊತ್ತಾಯ. ಈ ಬಗ್ಗೆ ನಿರಂತರ ಹೋರಾಟವೂ ಮಾಡುತ್ತಾ ಬಂದಿದೆ ಇನ್ನೂ ಸಾಗುತ್ತಲೇ ಇದೆ !
ಈಗಾಗಲೇ ಎರಡು ಬಾರಿ ನೇಮಕಾತಿ ಪ್ರಕ್ರಿಯೆ ನಡೆದರೂ ಈ ಆರ್ಹ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಪ್ರಯೋಜನವಾಗಿಲ್ಲ. 75000 ಸಾವಿರ ಶಿಕ್ಷಕರು ಸೌಲಭ್ಯದಿಂದ ವಂಚಿತರಾಗಿ ನಿರಾಸೆಭಾವ ತಾಳಿದ್ದಾರೆ ಎಂಬುದು ಶಿಕ್ಷಕರ ವಾಸ್ತವಿಕ ನೈಜ ಪರಿಸ್ಥಿತಿ ತೆರೆದಿಟ್ಚಿದೆ ಸಂಘ ! ಸಂಘದ ಈ ಹಿತಕರ ಸ್ಪಂದನಾತ್ಮಕ ಹೇಳಿಕೆ ಈಡೇರಿಕೆಯ ಆಶಾಭಾವದಿಂದ ಕಾದು ನೋಡುತ್ತಿದ್ದಾರೆ ರಾಜ್ಯದಲ್ಲಿನ ಸಾವಿರಾರು ಜನ ಪ್ರಾಥಮಿಕ ಶಾಲಾ ಆರ್ಹ ಪದವೀಧರ ಶಿಕ್ಷಕರು !


6 ರಿಂದ 8 ಕ್ಕೆ 15000 ಹುದ್ದೆಗಳನ್ನು ಈಗ ನೇಮಕ ಪ್ರಕ್ರಿಯೆ ಮಾಡುವ ಪೂರ್ವದಲ್ಲಿ ಸರಕಾರ ಈ ಅಂಶಗಳನ್ನು ಗಣನೆಗೆ ತಗೆದುಕೊಳ್ಳಬೇಕು. ಜೊತೆಗೆ ಪದವೀಧರ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಕಾರ ಮಾಡಲು ಉದ್ದೇಶಿಸಿರುವ ಪರೀಕ್ಷೆ ರದ್ದುಗೊಳಿಸಬೇಕು. ಪರೀಕ್ಷೆ ಮಾಡಬೇಕೆನ್ನುವ ನಿಧಾ೯ರ ಕೈ ಬಿಡಬೇಕು. ಯಾವುದಾದರೂ ಸೃಜನಾತ್ಮಕ ತರಬೇತಿ ಕೊಡುವ ಮೂಲಕ ಸೇವಾ ಜೇಷ್ಠತೆಯೊಂದಿಗೆ ಈ ಆರ್ಹತೆಯುಳ್ಳ ಶಿಕ್ಷಕರಿಗೆ 6 ರಿಂದ 8 ನೇ ತರಗತಿಗೆ ಪರಿಗಣಿಸಿ ಸೂಕ್ತ ಆಥಿ೯ಕ ಸೌಲಭ್ಯ ಭದ್ರತೆ ಒದಗಿಸಬೇಕು. ಕೂಡಲೇ ಈ ಬಗ್ಗೆ ಆಡಳಿತಾತ್ಮಕ ಆದೇಶ ಸರಕಾರ ಹೊರಡಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ವಿವಿಧ ರೀತಿಯಲ್ಲಿ ಅನೇಕ ಹೋರಾಟ ಮಾಡಲಾಗಿದೆ. ವಿಶೇಷವಾಗಿ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವರಿಗೆ ಭೇಟಿಯಾಗಿ ಗಮನ ಹರಿಸಿದಾಗ ಅಂದು ಬೇಡಿಕೆ ಪರಿಶೀಲಿಸುವದಾಗಿ ತಿಳಿಸಿದ್ದರು. ಅದನ್ನು ಮತ್ತೊಮ್ಮೆ ಬೆಂಗಳೂರಿನಲ್ಲಿ ಸಚಿವರ ಗಮನಕ್ಕೆ ಈಗ ತರಲಾಗಿದೆ. ತಮ್ಮ ಸಂಘದ ಹಲವಾರು ಬೇಡಿಕೆಗಳಿಗೆ ಸ್ಪಂದಿಸಿ ಈಡೇರಿಸಬೇಕೆಂದು ಪುನಃ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ, ಆಯುಕ್ತ ಡಾ,ವಿಶಾಲ್ ಆರ್. ಪ್ರಾಥಮಿಕ ಶಿಕ್ಷಣ ನಿದೇ೯ಶಕ ಪ್ರಸನ್ನಕುಮಾರ ಅವರುಗಳನ್ನು ಪ್ರತ್ಯೇಕವಾಗಿ ಈ ಸಂಬಂಧ ಭೇಟಿಯಾಗಿ ಚಚಿ೯ಸಿ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ. ಸಚಿವರು,ಅಧಿಕಾರಿಗಳು ಸಕಾರಾತ್ಮಕವಾಗಿ ಆಲಿಸಿ ಸ್ಪಂದಿಸಿದ್ದಾರೆ ಎಂದು ಶಂಭುಲಿಂಗನಗೌಡ ಪಾಟೀಲ, ಚಂದ್ರಶೇಖರ್ ನುಗ್ಗಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಶಿಕ್ಷಕರ ವಗಾ೯ವಣೆ ಕಾಯ್ದೆಯಲ್ಲಿರುವ ಅಂಶಗಳನ್ನು ತಿದ್ದುಪಡಿ ಮಾಡಿ ಶಿಕ್ಷಕರಿಗೆ ಪರಸ್ಪರ ವಗಾ೯ವಣೆಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಬಯಸುವ ಜಿಲ್ಲೆಗೆ ಒಂದು ಬಾರಿ ವಗಾ೯ವಣೆಗೆ ಅನುವು ಮಾಡಿಕೊಡಬೇಕು, ಸಿಆರ್ ಪಿ,ಬಿಆರ್ ಪಿ ಅವಧಿ ಮುಗಿಸಿರುವವರಿಗೆ ತಾಲೂಕಿನಲ್ಲಿ ಸ್ಥಳ ನಿಯುಕ್ತಿಗೊಳಿಸುವಂತೆ, ಡಿಬಿಟಿ ಸಮಸ್ಯೆಗಳನ್ನು ಚಚಿ೯ಸಿ ಪರಿಹಾರ ಒದಗಿಸುವಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಶಿಕ್ಷಣ ಸಚಿವ,ಅಧಿಕಾರಿಗಳಿಗೆ ಸಂಘ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ತುಮಕೂರು, ಯಾದಗಿರಿ ಜಿಲ್ಲೆಯ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಶಿವಮೂತಿ೯, ರಾಘವೇಂದ್ರ, ರಾಜ್ಯ ಸಂಘದ ಉಪಾಧ್ಯಕ್ಷ ಕೆ.ನಾಗೇಶ್, ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು ಇದ್ದರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ತಿಳಿಸಿದ್ದಾರೆ.
ಪೋಟೋ ಫೈಲ್ : ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಆರ್ಹ ಶಿಕ್ಷಕರಿಗೆ 6 ರಿಂದ 8 ನೇ ತರಗತಿಗೆ ಪರಿಗಣಿಸಿ ಆಥಿ೯ಕ ಸೌಲಭ್ಯದ ನ್ಯಾಯ ಒದಗಿಸಿಕೊಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಬೆಂಗಳೂರಿನಲ್ಲಿ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *

You May Also Like

ನಾಳೆ ಸಂಪುಟ ಸಭೆ: ಹಲವು ನಿರೀಕ್ಷೆ ಮೂಡಿಸಿದ ಸಭೆ

ಸಾಕಷ್ಟು ಜನರು ತೀವ್ರ ತೊಂದರೆಗೀಡಾಗಿದ್ದಾರೆ. ಸರ್ಕಾರ ತಮ್ಮ ಸಂಕಷ್ಟಕ್ಕೆ ನೆರವಾಗಬಹುದು ಎಂದು ಬಹುತೇಕರು ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಗಳ ಲೆಕ್ಕಾಚಾರದಲ್ಲೆ ತೊಡಗಿದ್ದಾರೆ.

ಮದುವೆ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳು ನಿಷೇಧಿಸಿದ ಜಿಲ್ಲಾಡಳಿತ

ಬಾಗಲಕೋಟೆ:ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಮದುವೆ ತುರ್ತು ನಡೆಸಲೇ ಬೇಕಿದ್ದರೆ…

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಭೂ ಕಂಪನ ಅನುಭವ

ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ  ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ  ಸೇರಿದಂತೆ ಮಂಡ್ಯದಲ್ಲಿಯೂ…

ಮಕ್ಕಳಿಗೆ ಸನ್ಮಾರ್ಗದ ದಾರಿ ತೋರಿ- ತೋಂಟದ ಶ್ರೀ

ಶಿಕ್ಷಕರು ತಮ್ಮಲ್ಲಿನ ಅನುಭವದ ಪಾಠ ಕೌಶಲ್ಯ ಹದಗೊಳಿಸಿಕೊಂಡು ವಿದ್ಯಾರ್ಥಿಗಳಿಗೆ ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಬೇಕು ಎಂದು ಗದುಗಿನ ತೋಂಟದ ಡಾ. ಸಿದ್ದರಾಮ ಸ್ವಾಮೀಜಿಯವರ ಹೇಳಿದರು.