ಗದಗ:ಸಾಲಕ್ಕೆ ಹೆದರಿ ಗದಗ ತಾಲೂಕಿನ ಬೆಳದಡಿ ತಾಂಡಾದ ರೈತ ವೆಂಕಟೇಶ ಶಿವಪ್ಪ ಚವ್ಹಾಣ ವಯಸ್ಸು:32 ಆತ್ಮಹತ್ಯೆಗೆ ಯತ್ನ ಹುಬ್ಬಳ್ಳಿಯ ಕೆ ಎಮ್ ಸಿ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವು. ವೆಂಕಟೇಶ ಶಿವಪ್ಪ ಚವ್ಹಾಣ 3ಎಕರೆ ಹೊಲವನ್ನು ಹೊಂದಿದ್ದು, ಬ್ಯಾಂಕಿನಲ್ಲಿ ಸೇರಿದಂತೆ ವಿವಿಧ ಕಡೆ ಹೊಲಕ್ಕಾಗಿ ಸಾಲವನ್ನು ಮಾಡಿದ್ದು ಹೊಲದಲ್ಲಿ ಸರಿಯಾಗಿ ಬೆಳೆ ಬರದ ಕಾರಣ ಸಾಲ ತೀರಿಸೋದು ಹೇಗೆ? ಎಂಬ ಚಿಂತೆಯಿಂದ ದಿನಾಂಕ:21.01.2022ರಂದು ತನ್ನ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಕುಟುಂಬಸ್ಥರು ಗದಗನ ಜಿಲ್ಲಾ ಆಸ್ಪತ್ರೆಗೆ ದಾಖಲ ಮಾಡಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಚಿರಾಯು ಆಸ್ಪತ್ರೆಗೆ ದಾಖಲಾಗಿದ್ದರು ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸಾವನ್ನಪ್ಪಿದ ರೈತ ವೆಂಕಟೇಶ ಶಿವಪ್ಪ ಚವ್ಹಾಣ


ಸಾವನ್ನಪ್ಪಿದ ರೈತನಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದು ಅದರಲ್ಲಿ ಮೂವರ ಹೆಣ್ಣುಮಕ್ಕಳು ಮತ್ತು ಒರ್ವ್ ಪುತ್ರನಿದ್ದು ಅತಿ ಕಡುಬಡತನದಿಂದ ಜೀವನ ಸಾಗಿಸುತ್ತಿದ್ದ ಕುಟುಂಬ. ಕುಟುಂದ ಆಧಾರ ಸ್ಥಂಭವಾಗಿದ್ದ ರೈತ ವೆಂಕಟೇಶನನ್ನು ಕಳೆದುಕೊಂಡ ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟಿದೆ. ಅದರಲ್ಲಿ ಚಿಕ್ಕ ಮಕ್ಕಳು ಅಪ್ಪನನ್ನು ನೆನೆದು ಅಳುತ್ತಿರುವ ದ್ರಶ್ಯ ಎಲ್ಲರ ಮನಕಲಕುವಂತೆ ಮಾಡಿದೆ.
ಈ ಕುರಿತು ಗದಗ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಯನ್ನು ಪೋಲಿಸರು ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನಿಯಮಕ್ಕೆ ಆಕ್ಷೇಪಣೆ

ಶಿಕ್ಷಕರ ವರ್ಗಾವಣಾ ಕಾಯ್ದೆಯನ್ನು ಸಂಪೂರ್ಣ ಶಿಕ್ಷಕ ಸ್ನೇಹಿ ವರ್ಗಾವಣಾ ಕಾಯ್ದೆಯಾಗಿ ರೂಪಗೊಳ್ಳಬೇಕಾದರೆ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಅಂತಿಮ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಪ್ರಕಟಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಕುರಿತು ಇಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ರಾಷ್ಟ್ರೀಯ ಹೆದ್ದಾರಿ ಗುಂಡಿಯಲ್ಲಿ ವಾಹನ ಸವಾರರು ಬಿದ್ದು ನರಳಾಟ

ವರದಿ: ವಿಠಲ ಕೆಳೂತ್ ಮಸ್ಕಿ: ಲಿಂಗಸ್ಗೂರು-ಮಸ್ಕಿ ‌ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಗೆ ಬಿದ್ದು ವಾಹನ…

ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ..!

ಅಲ್ವಿದಾ ನಿಸಾರ್ ಅಹ್ಮದ್ ಚಾಚಾ. ನಿಮ್ಮ ಪದ್ಯಗಳ ಸಂತೆಯಲ್ಲಿ ನಾವು ನಿತ್ಯ ಕಳೆದುಹೋಗುತ್ತೇವೆ. ನರಸಿಂಹರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ ನೀವು ಅಂದು ನಿಂತಿದ್ದ ಜಾಗದಲ್ಲೇ ನಿಂತಿರುತ್ತೀರಿ ಎಂದು ಭಾವಿಸುತ್ತೇನೆ. ಹೋಗಿ ಬನ್ನಿ.

ಆಲಮಟ್ಟಿ ಡ್ಯಾಂ : c ಕ್ಯುಸೆಕ್ ನೀರು ಹೊರಕ್ಕೆ ಗುಲಾಬಚಂದ ಜಾಧವ

ಆಲಮಟ್ಟಿ: ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹೊರ ಹರಿವು ಆರಂಭಗೊಂಡಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ,ರಾಜ್ಯದ…