ಉತ್ತರಪ್ರಭ ಸುದ್ದಿ

ಲಕ್ಷ್ಮೇಶ್ವರ: ಪಟ್ಟಣದ ನಾಲ್ಕನೇ ವಾರ್ಡನಲ್ಲಿ ರಸ್ತೆ ದುರಸ್ಥಿ ಮತ್ತು ನೀರಿನ ಹಾಹಾಕಾರ ಎದ್ದು ಕಾಣುತ್ತಿದೆ. ಮುಖ್ಯವಾಗಿ ರಸ್ತೆ ಸರಿಯಾದ ರೀತಿಯಲ್ಲಿ ಇಲ್ಲ. ಹೌದು ಲಕ್ಷ್ಮೇಶ್ವರ ಪಟ್ಟಣದ ಪುರಸಭೆಗೆ ಸಂಬಂಧಿಸಿದ ಈ ವಾರ್ಡನಲ್ಲಿ ಒಂದು ಸಾವಿರ ಮತದಾರರು ಇದ್ದು 1500 ಜನಸಂಖ್ಯೆ ಇದೆ. ಆದರೆ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ಮರೆಯಾಗಿ ಹೋಗಿವೆ. ಸರಿಯಾದ ರಸ್ತೆ, ಕುಡಿಯಲು ಶುದ್ಧ ನೀರು ಇತ್ಯಾದಿ ಅಗತ್ಯ ಸೌಲಭ್ಯಗಳಿಲ್ಲದೆ ಜನರು ಬಸವಳಿದು ಹೋಗಿದ್ದಾರೆ.

ಒಂದು ಕಚ್ಚಾ ರಸ್ತೆಯಿದ್ದು ಹಾಸಿಕಲ್ಲ‌ ಹಾಕಿದ್ದು , ಕಲ್ಲುಗಳು ಅಡ್ಡಾದಿಡ್ಡಿ ಹಾಕಿಬಿಟ್ಟಿದ್ದಿದ್ದಾರೆ ಆದ್ದರಿಂದ ಅಲ್ಲಿ ಚಿಕ್ಕಮಕ್ಕಳು, ವಯಸ್ಕರು ಬಿದ್ದಿದ್ದು ತುಂಬಾ ಗಾಯಗಳಾಗಿರುತ್ತವೆ ಆದರೂ ಅದರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತಿದೆ. ಈ ರಸ್ತೆಯ ಕಾಮಗಾರಿ ಪ್ರಾರಂಭ ಮಾಡುತ್ತೆವೆ ಎಂದು 1 ವರ್ಷ ಕಳೆದರೂ ಇನ್ನೂ ಯಾರು ಕಾಮಗಾರಿ ಮಾಡಲಿಕೆ ಬರುತ್ತಿಲ್ಲ. ಗ್ರಾಮಸ್ಥರಾದ ಹುಸೇನಸಾಬ ಸಂಶಿ, ಹಾಮತ್ತ ರೋಷನಖಾನವಾಲೆ, ನೇಷಾದ ಪುಲ್ಲಿ, ವಾರ್ಡನಲ್ಲಿ ನೀರಿನ ತೊಂದರೆ ಇದ್ದು ನೀರಿನ ನಲ್ಲಿಗಳು ನಿರ್ಮಿಸಿಕೊಡಬೇಕೆಂಬ ಗ್ರಾಮಸ್ಥರ ಮನವಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ.

ನೀರಿನ ಹಾಹಾಕಾರ ಉಂಟಾಗಿದೆ. ಕೂಡಲೇ ಪುರಸಭೆ ಆಡಳಿತ ಮಂಡಳಿ ಎಚ್ಚೆತ್ತು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.


ಈ ರಸ್ತೆಯಲ್ಲಿರುವ ಕಲ್ಲುಗಳು ಅಡ್ಡಾದಿಡ್ಡಿ ಇದ್ದು ಇಲ್ಲಿ ತುಂಬಾ ಜನ ಬಿದ್ದು ಗಂಭೀರ ಗಾಯ ಮಾಡಿಕೊಂಡಿದ್ದರೆ, ಒಬ್ಬ ಮುದಕ ಇಲ್ಲಿ ಬಿದ್ದು ಒಂದು ತಿಂಗಳು ಕಾಲ ಚೆತರಿಸಿಕೊಳ್ಳದೇ ಜೀವನ ಕಳೆದು ಕೊಂಡಿದ್ದಾರೆ ಆದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.

ಶಫೀಕ ಬಿಜಾಪೂರ, ಆದಮ ಕಿತ್ತೂರ. ವಾರ್ಡ ನಿವಾಸಿಗಳು.


ಇಗಾಲೇ ಈ ಕಾಮಗಾರಿ ಮಂಜೂರು ಆಗಿದ್ದು ಟೆಂಡರ್ ಹತ್ತದಲ್ಲಿ, ಟೆಂಡರ್ ಕರೆಯಬೇಕಿತ್ತು ಆದರೆ ನೀತಿಸಂಹಿತೆ ಜಾರಿ ಹಿನ್ನೆಲೆ ಆಗಿಲ್ಲ ವಿಧಾನ ಪರಿಷತ್ ಚುನಾವಣೆ ಮುಕ್ತಾಯ ಆದ ತಕ್ಷಣವೇ ರಸ್ತೆ ಕಾಮಗಾರಿ ಮಾಡಲಾಗುವುದು.

ಮುಸ್ತಾಕ ಅಹ್ಮದ್ ಶಿರಹಟ್ಟಿ, ಪುರಸಭೆ ಸದಸ್ಯರು 4 ನೇ ವಾರ್ಡ.

Leave a Reply

Your email address will not be published. Required fields are marked *

You May Also Like

ಗದಗ ನಗರ ಸಭೆ ಮತ ಎಣಿಕೆ ಮುಕ್ತಾಯ :15 ಕಾಂಗ್ರೇಸ್,18 ಬಿಜೆಪಿ 2 ಪಕ್ಷೇತರರು

ಗದಗ: ನಗರ ಸಭೆ ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 15 ಕಾಂಗ್ರೇಸ್  18  ಬಿಜೆಪಿ …

ಗದಗ ಜಿಲ್ಲೆಯಲ್ಲಿಂದು ಸಿಕ್ಕ ಸಿಕ್ಕಲ್ಲಿ ಸೋಂಕಿನ ಸಂಚಾರ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯಲ್ಲಿಂದು ಸಿಕ್ಕ ಸಿಕ್ಕಲ್ಲಿ ಸೋಂಕಿನ ಸಂಚಾರ: ಯಾವ ಊರಲ್ಲಿ ಎಷ್ಟು?

ಶೋಷಿತ ಸಮುದಾಯಗಳು ಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಿ

ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಇದಕ್ಕೆ ನಮ್ಮ ವಿರೋಧ ಖಂಡಿತಾ ಇಲ್ಲ. ಶೋಷಿತ ಸಮುದಾಯಗಳು ಮೀಸಲಾತಿ ಪಡೆಯುವುದು ಅವುಗಳ ಸಂವಿಧಾನಬದ್ಧ ಹಕ್ಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಸ್ತೆ ಗುಂಡಿಯಲ್ಲಿ ಸಿಲುಕಿದ ಬಸ್, 2 ಗಂಟೆ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ..!

ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಹಾಳಾಗಿದ್ದು ಅಪಘಾಕ್ಕೆ ಆಹ್ವಾನ ನೀಡುತ್ತಿವೆ. ಬುಧವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟ್ರಾಕ್ಟರ್‌ವೊಂದು ರಸ್ತೆಯಲ್ಲಿ ಆಳವಾಗಿದ್ದ ಗುಂಡಿಯಲ್ಲಿ ಸಿಲುಕಿ ಸ್ವಲ್ಪದರಲ್ಲೆ ಅಪಾಯದಿಂದ ಪಾರಾಗಿವೆ.