ಉತ್ತರಪ್ರಭ ಸುದ್ದಿ
ಲಕ್ಷ್ಮೇಶ್ವರ: ಪಟ್ಟಣದ ನಾಲ್ಕನೇ ವಾರ್ಡನಲ್ಲಿ ರಸ್ತೆ ದುರಸ್ಥಿ ಮತ್ತು ನೀರಿನ ಹಾಹಾಕಾರ ಎದ್ದು ಕಾಣುತ್ತಿದೆ. ಮುಖ್ಯವಾಗಿ ರಸ್ತೆ ಸರಿಯಾದ ರೀತಿಯಲ್ಲಿ ಇಲ್ಲ. ಹೌದು ಲಕ್ಷ್ಮೇಶ್ವರ ಪಟ್ಟಣದ ಪುರಸಭೆಗೆ ಸಂಬಂಧಿಸಿದ ಈ ವಾರ್ಡನಲ್ಲಿ ಒಂದು ಸಾವಿರ ಮತದಾರರು ಇದ್ದು 1500 ಜನಸಂಖ್ಯೆ ಇದೆ. ಆದರೆ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ಮರೆಯಾಗಿ ಹೋಗಿವೆ. ಸರಿಯಾದ ರಸ್ತೆ, ಕುಡಿಯಲು ಶುದ್ಧ ನೀರು ಇತ್ಯಾದಿ ಅಗತ್ಯ ಸೌಲಭ್ಯಗಳಿಲ್ಲದೆ ಜನರು ಬಸವಳಿದು ಹೋಗಿದ್ದಾರೆ.
ಒಂದು ಕಚ್ಚಾ ರಸ್ತೆಯಿದ್ದು ಹಾಸಿಕಲ್ಲ ಹಾಕಿದ್ದು , ಕಲ್ಲುಗಳು ಅಡ್ಡಾದಿಡ್ಡಿ ಹಾಕಿಬಿಟ್ಟಿದ್ದಿದ್ದಾರೆ ಆದ್ದರಿಂದ ಅಲ್ಲಿ ಚಿಕ್ಕಮಕ್ಕಳು, ವಯಸ್ಕರು ಬಿದ್ದಿದ್ದು ತುಂಬಾ ಗಾಯಗಳಾಗಿರುತ್ತವೆ ಆದರೂ ಅದರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತಿದೆ. ಈ ರಸ್ತೆಯ ಕಾಮಗಾರಿ ಪ್ರಾರಂಭ ಮಾಡುತ್ತೆವೆ ಎಂದು 1 ವರ್ಷ ಕಳೆದರೂ ಇನ್ನೂ ಯಾರು ಕಾಮಗಾರಿ ಮಾಡಲಿಕೆ ಬರುತ್ತಿಲ್ಲ. ಗ್ರಾಮಸ್ಥರಾದ ಹುಸೇನಸಾಬ ಸಂಶಿ, ಹಾಮತ್ತ ರೋಷನಖಾನವಾಲೆ, ನೇಷಾದ ಪುಲ್ಲಿ, ವಾರ್ಡನಲ್ಲಿ ನೀರಿನ ತೊಂದರೆ ಇದ್ದು ನೀರಿನ ನಲ್ಲಿಗಳು ನಿರ್ಮಿಸಿಕೊಡಬೇಕೆಂಬ ಗ್ರಾಮಸ್ಥರ ಮನವಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ.
ನೀರಿನ ಹಾಹಾಕಾರ ಉಂಟಾಗಿದೆ. ಕೂಡಲೇ ಪುರಸಭೆ ಆಡಳಿತ ಮಂಡಳಿ ಎಚ್ಚೆತ್ತು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಈ ರಸ್ತೆಯಲ್ಲಿರುವ ಕಲ್ಲುಗಳು ಅಡ್ಡಾದಿಡ್ಡಿ ಇದ್ದು ಇಲ್ಲಿ ತುಂಬಾ ಜನ ಬಿದ್ದು ಗಂಭೀರ ಗಾಯ ಮಾಡಿಕೊಂಡಿದ್ದರೆ, ಒಬ್ಬ ಮುದಕ ಇಲ್ಲಿ ಬಿದ್ದು ಒಂದು ತಿಂಗಳು ಕಾಲ ಚೆತರಿಸಿಕೊಳ್ಳದೇ ಜೀವನ ಕಳೆದು ಕೊಂಡಿದ್ದಾರೆ ಆದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.– ಶಫೀಕ ಬಿಜಾಪೂರ, ಆದಮ ಕಿತ್ತೂರ. ವಾರ್ಡ ನಿವಾಸಿಗಳು.
ಇಗಾಲೇ ಈ ಕಾಮಗಾರಿ ಮಂಜೂರು ಆಗಿದ್ದು ಟೆಂಡರ್ ಹತ್ತದಲ್ಲಿ, ಟೆಂಡರ್ ಕರೆಯಬೇಕಿತ್ತು ಆದರೆ ನೀತಿಸಂಹಿತೆ ಜಾರಿ ಹಿನ್ನೆಲೆ ಆಗಿಲ್ಲ ವಿಧಾನ ಪರಿಷತ್ ಚುನಾವಣೆ ಮುಕ್ತಾಯ ಆದ ತಕ್ಷಣವೇ ರಸ್ತೆ ಕಾಮಗಾರಿ ಮಾಡಲಾಗುವುದು.– ಮುಸ್ತಾಕ ಅಹ್ಮದ್ ಶಿರಹಟ್ಟಿ, ಪುರಸಭೆ ಸದಸ್ಯರು 4 ನೇ ವಾರ್ಡ.
