ಉತ್ತರಪ್ರಭ ಸುದ್ದಿ

ಲಕ್ಷ್ಮೇಶ್ವರ: ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜಿನ 2021-22 ನೇ ಸಾಲಿನ ವಾರ್ಷಿಕ ಕ್ರೀಡಾ ಚಟುವಟಿಕೆಯನ್ನು ಸಮೀರ್ ಹರ್ಷವರ್ಧನ ಅಗಡಿ ಅವರು ಕ್ರಿಕೆಟ್ ಆಟ ಆಡುವದರ ಮೂಲಕ ಉದ್ಘಾಟಿಸಿದರು ಈ ವೇಳೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮೀರ್ ಹರ್ಷವರ್ಧನ ಅಗಡಿ ಕ್ರೀಡೆ ಅನ್ನೋದು ವಿದ್ಯಾರ್ಥಿ ಹಂತದಲ್ಲಿ ಬಹಳ ಮುಖ್ಯವಾದದ್ದು ಪಠ್ಯೇತರ ಚಟುವಟಿಕೆ ಜೊತೆಗೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ದೈಹಿಕ ಶಕ್ತಿ ಮಾನಸಿಕ ಶಕ್ತಿ ಆರೋಗ್ಯದಿಂದ ಇರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ್ ವಿ ಅಗಡಿ, ಉಪಾಧ್ಯಕ್ಷೆ ಗೀತಾ ಅಗಡಿ, ನಿರ್ದೇಶಕ ಪ್ರೇಮಾನಂದ್ ಶೆಟ್ಟಿ, ಪ್ರಾಚಾರ್ಯ ಉದಯಕುಮಾರ್ ಹಂಪಣ್ಣವರ, ಆಡಳಿತಾಧಿಕಾರಿ ಡಾ, ಶ್ರೀನಿವಾಸ ರಜಪೂತ್, ಪ್ರಾಧ್ಯಾಪಕ ಸೋಮಶೇಖರ್ ಕೆರಿಮನಿ, ದೈಹಿಕ ಶಿಕ್ಷಕ ಎಸ್, ಎಫ್, ಕೊಡ್ಲಿ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ನಿಧನ ; ಶ್ರೀ ಲಕ್ಷ್ಮಣ ತುಳಜಪ್ಪ ಚವ್ಹಾಣ(73)

ಉತ್ತರಪ್ರಭ ಸುದ್ದಿ:ದಿ. ಶ್ರೀ ಲಕ್ಷ್ಮಣ ತುಳಜಪ್ಪ ಚವ್ಹಾಣ(73) ನಿವೃತ್ತ ಸುಪ್ರಿಡೆಂಟ್, ಭೂ ಮತ್ತು ಗಣಿ ಇಲಾಖೆ,…

ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ: ರವಿಕಾಂತ ಅಂಗಡಿ

ಉತ್ತರಪ್ರಭಬೆಳ್ಳಟ್ಟಿ: ಶಿರಹಟ್ಟಿ ತಾಲೂಕಿನ ಬೆಳ್ಳಟಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷಾ ಒಂದು…

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…

ನರೇಗಲ್, ಹೊಳೆಯಾಲೂರು ಹೋಬಳಿ: ರೈತರಿಂದ ತಾಡಪತ್ರಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆಯಿಂದ ನರೇಗಲ್ ಹಾಗೂ ಹೊಳೆಆಲೂರ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಲಾಟರಿ ಮುಖಾಂತರ ತಾಡಪತ್ರಿಗಳನ್ನು ವಿತರಿಸಲು ಅರ್ಜಿ ಕರೆಯಲಾಗಿದೆ.