ಶಿರಹಟ್ಟಿ: ಪುಣ್ಯಾಶ್ರಮದ ಗುರುಬಂಧುಗಳಾದ ಸಾಸರವಾಡ ಗ್ರಾಮದ ಮಲ್ಲನಗೌಡ ಪಾಟೀಲರು ಉತ್ತಮ ಸಂಗೀತ ಕಲಾವಿದರಾಗಿದ್ದರು. ಜೊತೆಗೆ ಸಾತ್ವಿಕ ಗುಣವುಳ್ಳವರಾಗಿದ್ದರು. ಅವರು ಸರಳತೆ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಪುಣ್ಯಸ್ಮರಣೆಯ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.

ಅವರು ತಾಲೂಕಿನ ಸಾಸರವಾಡ ಗ್ರಾಮದಲ್ಲಿ ದಿ. ಮಲ್ಲನಗೌಡ ಫ ಪಾಟೀಲ ಅವರ ದ್ವೀತಿಯ ಪುಣ್ಯಸ್ಮರಣೆ ಹಾಗೂ ಪೂಜ್ಯ ಕಲ್ಲಯ್ಯಜ್ಜನವರ, ತುಲಾಭಾರ ಕಾರ್ಯಕ್ರಮದ ಸಾಣಿಧ್ಯ ವಹಿಸಿ ಆಶಿರ್ವಚನ ನೀಡಿದರು.

ತಂದೆಯವರ ಪುಣ್ಯಸ್ಮರಣೆ ನೆಪದಲ್ಲಿ ಸಾಧಕರಿಗೆ ಪ್ರೋತ್ಸಾಹ ನೀಡುವ ಮೂಲಕ ಜನಪರ ಹಾಗೂ ಸೇವಾಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ ಎಂದರು.

ತಂದೆಗೆ ತಕ್ಕ ಮಕ್ಕಳಾದ ಫಕ್ಕೀರಗೌಡ ಮತ್ತು ನೀಲನಗೌಡ ಪಾಟೀಲ ಹಾಗೂ ಮನೆತನದ ಈ ಕಾರ್ಯ ಇತರರಿಗೆ ಮಾದರಿಯಾಗಿದೆ. ತುಂಗಭದ್ರಾ ನದಿ ಹರಿದು ಶ್ರೀ ಗಡ್ಡಿಬಸವೇಶ್ವರ ದೇವರು ನೆಲೆಸಿರುವ ಸಾಸರವಾಡ ಗ್ರಾಮವು ಮುಂದೆ ದೊಡ್ಡ ಸುಕ್ಷೇತ್ರವಾಗುತ್ತದೆ. ಶ್ರೀ ಗಡ್ಡಿಬಸವೇಶ್ವರ ಭಕ್ತಿ ಗೀತೆಗಳನ್ನು ಅದ್ಬುತವಾದ ಸಾಹಿತ್ಯದೊಂದಿಗೆ ರಚಿಸಿ ನಾಡಿನಾದ್ಯಂತ ಕ್ಷೇತ್ರದ ಮಹಿಮೆಯನ್ನು ತಿಳಿಸಿಕೊಡುತ್ತಿರುವ ಮಲ್ಲನಗೌಡರ ಪುತ್ರ ನೀಲನಗೌಡ ಪಾಟೀಲರ ಸಾಹಿತ್ಯ ಸೇವೆ ಮೆಚ್ಚುವಂತದ್ದು ಎಂದರು.

ಈ ವೇಳೆ ಗಡ್ಡಿಬಸವೇಶ್ವರ ಭಕ್ತಿ ಗೀತೆಗಳ ಧ್ವನಿ ಸುರುಳಿಯನ್ನು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಬಿಡುಗಡೆಗೊಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಶರಣಪ್ಪ ಕುಬಸದ, ಮಂಜುಳಾ ಫ ಕೊಪ್ಪದ, ಶಿವಬಸವ ಬಣಕಾರ, ಗೌರಮ್ಮ ಮರಡಿ  ನುಡಿ ನಮನ ಗೀತೆ ಪ್ರಸ್ತುತಪಡಿಸಿದರು. ಗ್ರಾಮದ ಯುವಕರಿಂದ ಸಮಾಳ‌ನಂದಿಕೋಲು ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ಅಂದಾನಗೌಡ ತಿ ಪಾಟೀಲ, ಚನ್ನವೀರಶಾಸ್ತ್ರಿ ಕುಲಕರ್ಣಿ, ಬಸವಲಿಂಗಶಾಸ್ತ್ರಿ ಹಾಲಗಿ ಮರೋಳ, ಎಂ.ಸಿ.ಸೂರಣಗಿಮಠ, ಶಾಂತಪ್ಪ ಬಳ್ಳಾರಿ, ಚನವೀರಯ್ಯ ಮುದಗಲ್ ಮಠ,ಶಿವಪುತ್ರಯ್ಯ ದಿವಾನ, ಗುಡ್ಡಪ್ಪ ಬಾರಕೇರ, ಶಂಕ್ರಪ್ಪ ಕಮ್ಮಾರ, ಅಡಿವೆಪ್ಪ ತಳ್ಳಳ್ಳಿ, ಬಸವರಾಜ ಚ ಬಂಡಿ, ಬಸವರಾಜ ಹಾಲಗಿ, ಭಾಗ್ಯಶ್ರೀ ಬಾಬಣ್ಣ ಮುಂತಾದವರಿದ್ದರು.

ಪ್ರಾಸ್ತಾವಿಕ ನುಡಿಯನ್ನು ಎಸ್.ಎಸ್.ಪಾಟೀಲ ಮಾತನಾಡಿದರು. ನಿರೂಪಣೆಯನ್ನು ಡಿ.ಎಸ್.ರಿತ್ತಿ, ಶ್ರೀಧರಗೌಡ ಎಸ್ ಪಾಟೀಲ ನೆರವೇರಿಸಿದರು.

Leave a Reply

Your email address will not be published. Required fields are marked *

You May Also Like

ಕೇಲೂರ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಬೇಟಿ: ಸಮಾಜ ಕಲ್ಯಾಣ ಇಲಾಖೆಯಿಂದ 4ಲಕ್ಷದ ಚೆಕ್ ವಿತರಣೆ

ಉತ್ತರಪ್ರಭ ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು…

ಮದ್ಯಾಹ್ನದ ಬಿಸಿಊಟದ ಬದಲು ವಿದ್ಯಾರ್ಥಿಗಳ ಖಾತೆಗೆ ಸರ್ಕಾರದ ಹಣ

ನವದೆಹಲಿ: ಮಕ್ಕಳ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡಲು ಸಹಾಯ ಮಾಡುವ ಸಲುವಾಗಿ, ಮಧ್ಯಾಹ್ನದ ಊಟ ಯೋಜನೆಯಡಿ ಮಕ್ಕಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಆರ್ಥಿಕ ಸಹಾಯವನ್ನು ಕಳುಹಿಸಲಾಗುವುದು. ಸರ್ಕಾರದ ಈ ಯೋಜನೆಯಿಂದ ಸುಮಾರು 11.8 ಕೋಟಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.

ಪಿಯುಸಿ2: ಗದಗ ಜಿಲ್ಲಾ ಮಟ್ಟದ ರ‌್ಯಾಂಕ್ ವಿವರ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 9532 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ 6005 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಳೆದ ವರ್ಷ ಜಿಲ್ಲೆಯ ಪರೀಕ್ಷಾ ಫಲಿತಾಂಶ ಶೇ. 57.76 ರಷ್ಟಾಗಿ ಜಿಲ್ಲೆಯು 26 ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯು ಶೇ. 63 ರಷ್ಟು ಫಲಿತಾಂಶ ಪಡೆಯುವ ಮೂಲಕ 22 ನೇ ಸ್ಥಾನ ಪಡೆದುಕೊಂಡಿದೆ.