ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ 12ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.
ನಮ್ಮ ನಗರದ ಸೂಡಿ ಕ್ರಾಸಿನಲ್ಲಿ ಹೂ ಮಾರಿಕೊಂಡು ಉಪಜೀವನ ಮಾಡುತ್ತಿರುವ ಮೂಕಪ್ಪ, ಬಡತನ ಎಂದರೆ ಏನೆಂಬುದನ್ನು ಅರಿತು ಬಡತನದ ಬೆಗೆಯಲ್ಲಿ ಬೆಂದು ಬೆಳದ ವ್ಯಕ್ತಿ. ತಾನು ಅಲ್ಪ ಸ್ವಲ್ಪ ದುಡಿದ ದುಡಿಮೆಯ ಫಲದಲ್ಲಿ ಕರೋನ ವಾರಿಯರ್ಸ್ ಗೆ ಒಂದು ದಿನ ಊಟೋಪಚಾರ ಮಾಡಿಸಿದರೆ, ಇನ್ನೊಂದು ಗುಡಿಸಲುಗಳಲ್ಲಿರುವ ಚನ್ನದಾಸರ ಕುಟುಂಬಗಳಿಗೆ ಪಹಾರ ನೀಡಿದ್ದರು.
ಅಷ್ಟೇ ಅಲ್ಲದೇ ಭಾನುವಾರ ತಾಡಪತ್ರೆ ಹೊಲೆದು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಿರುವುದು ಕಂಡು ಬಂದಿತು. ಯಾವುದೇ ಪ್ರಚಾರ ಹಂಗಿಲ್ಲದೇ ನಿಷ್ಕಲ್ಮಶ ಮನಸ್ಸಿನಿಂದ ಈ ಸೇವಾ ಕಾರ್ಯದ ಮೂಲಕ ಮೂಕಪ್ಪ ಮಾದರಿಯಾಗಿದ್ದಾರೆ. ಕೈಲಾದಷ್ಟು ಸಹಾಯ ಮಾಡುತ್ತಿರುವ ಮೂಕಪ್ಪ ಅವರೇನು ದೊಡ್ಡ ಶ್ರೀಮಂತರಲ್ಲ. ಹೂವು ಮಾರಿ ಜೀವನ ಸಾಗಿಸುವ ಕುಟುಂಬ ವರದ್ದು. ಆದರೆ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರಾದ ಮೂಕಪ್ಪ ಅವರಿಗೆ ಜೀವನದಲ್ಲಿ ಬಡತನವೇ ಬಹುದೊಡ್ಡ ಪಾಠ ಕಲಿಸಿದೆ. ಈ ಕಾರಣಕ್ಕಾಗಿ ಕೊರೊನಾದ ಸಂಕಷ್ಟದಲ್ಲಿ ಕೈಲಾದಷ್ಟಾದರೂ ಸ್ಪಂದಿಸಬೇಕು ಎನ್ನುವ ಕಾರ್ಯಕ್ಕೆ ಅಣಿಯಾಗಿದ್ದಾರೆ. ಮೂಕಪ್ಪ ಅವರ ಬಡವರ ಹಸಿವು ನಿಗಿಸುವ ಕಾರ್ಯ ವೈಖರಿ ಸಾರ್ವಜನಿಕರು ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಒಟ್ಟಿನಲ್ಲಿ ದುಡಿಯುವ ಕೈ ಕಟ್ಟಿ ಹಾಕಿದ ಕರೋನ ಮಹಾಮಾರಿಯ ಹೊಡೆತಕ್ಕೆ ಎಷ್ಟೋ ಬಡ ಜೀವಿಗಳು ನಲುಗಿ ಹೋಗಿರುತ್ತವೆ. ಮದ್ಯೆ ಮೂಕಪ್ಪ ಹೂಗಾರ ತಮಗೆ ಯಾವುದೇ ಪ್ರಚಾರ ಬೇಡ. ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ ದು ಹೇಳಿದ್ದಾರೆ. ಇಂದು ಕೊರೊನಾ ವಿಚಾರ ಅದೆಷ್ಟೋ ಜನರಿಗೆ ಪ್ರಚಾರದ ದಾಳವಾಗಿರುವ ಸಂದರ್ಭದಲ್ಲಿ ಮೂಕಪ್ಪ ಅವರ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಕಾರ್ಉ ನಿಜಕ್ಕೂ ಮೆಚ್ಚುವಂತಹದ್ದು.


ಅವರ ಖುಷಿಯಲ್ಲಿ ತನ್ನ ಖುಷಿ ಕಂಡುಕೊಳ್ಳುವ ಮೂಕಪ್ಪ ದುಡಿಯುವ ಕೈ ಕಟ್ಟಿ ಹಾಕಿರುವ ಕರೋನ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಗುರುತಿಸಿ ಬಡತನದ ಹಸಿವು ಅರಿತ ಮೂಕಪ್ಪ ಹೂಗಾರ ತಾನು ದುಡಿದ ಅಲ್ಪ ಸ್ವಲ್ಪ ದುಡಿಮೆಯಿಂದ ಬಂದಂತಹ ಹಣದಲ್ಲಿ ದಿನಸಿ ಸಾಮಾನುಗಳನ್ನು ನೀಡಿ ಅವರ ಖುಷಿಯಲ್ಲಿ ತಾನು ಖುಷಿ ಕಂಡುಕೊಳ್ಳುತ್ತಾನೆ.

ಗಂಗಯ್ಯ ಗುಮಟಿ, ಸ್ಥಳೀಯರು


ಪ್ರಚಾರಕ್ಕಾಗಿ ಮಾಡುತ್ತಿಲ್ಲ ನಮಗೆ ಬಡತನದ ಹಸಿವು ಯಾವ ರೀತಿ ಇದೆ ಎಂಬ ಅನುಭವವಿದೆ. ದುಡಿಮೆ ಇಲ್ಲದೇ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ಅಂತವರಿಗೆ ನಾವು ವ್ಯಾಪಾರ ಮಾಡಿ ಬಂದಂತಹ ಅಲ್ಪ ಲಾಭದಲ್ಲಿ ಆಹಾರ ಹಾಗೂ ದಿನಸಿ ಸಾಮಾನುಗಳನ್ನು ನೀಡುತ್ತಿದ್ದೇನೆ. ನನಗೆ ಯಾವುದೇ ಪ್ರಚಾರ ಬೇಡ. ನಾನು ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ.

-ಮೂಕಪ್ಪ ಹೂಗಾರ, ಸ್ಥಳೀಯರು

Leave a Reply

Your email address will not be published. Required fields are marked *

You May Also Like

ಕ್ಷುಲ್ಲಕ ಕಾರಣಕ್ಕೆ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ಆರೋಪಿ ಪರಶುರಾಮ ಗೋಣೆಪ್ಪ ಗುಡದರ ಈತನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವವಾಧಿ ಶಿಕ್ಷೆ ಹಾಗೂ 5000 ದಂಡ ವಿಧಿಸಿದೆ.

ಲಾಕ್ ಡೌನ್: ಡಿಸಿಗಳೊಂದಿಗೆ ಸಿಎಂ ಸಂವಾದ

ಬೆಂಗಳೂರು : ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಲಾಕ್ ಡೌನ್ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ…

ಜೂ.1ರ ನಂತರದ ಮತ್ತೆ ಕಠಿಣ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಗದಗ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೋವಿಡ್-19 ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದಿಂದ ಜಾರಿ ಮಾಡಿದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಟಾನ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಹಾರಯಿಕೆಯ ಕವಿ ಮತ್ತು ಸಾಹಿತಿ : ಪ್ರೊ.ವಸಂತ ಕುಷ್ಟಗಿಯವರು..!

ಪ್ರೊ.ವಸಂತ ಕುಷ್ಟಗಿಯವರು ತೀರಿದ್ದಾರೆ. ಅವರ ಸಾವಿಗೆ ಕಂಬನಿ ಮಿಡಿಯುತ್ತ ಈ ನೆನಪು ಮಾಡಿಕೊಳ್ಳೋಣ. ಸದ್ಯ ಕಲಬುರ್ಗಿ ನಿವಾಸಿಯಾಗಿದ್ದ ಕವಿ ಮತ್ತು ಸಾಹಿತಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕರಾಗಿದ್ದರು.