ಬೆಂಗಳೂರು : ಜಗತ್ತಿನಾದ್ಯಂತ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದು ತೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೇ, ದಿನದಿಂದ ದಿನಕ್ಕೆ ಸೋಂಕಿನ ಲಕ್ಷಣಗಳು ಕೂಡ ಬದಲಾಗುತ್ತಿವೆ. ಜ್ವರ, ತಲೆ ನೋವು, ಗಂಟಲು ನೋವು, ಮೈಕೈ ನೋವು, ಉಸಿರಾಟದ ಸಮಸ್ಯೆ ಸಾಮಾನ್ಯವಾಗಿ ಕೊರೊನಾದ ಮೊದಲ ಲಕ್ಷಣ ಎನ್ನಲಾಗಿತ್ತು. ಸದ್ಯ ಇದಕ್ಕೆ ಹೊಸ ಹೊಸ ಲಕ್ಷಣಗಳು ಕಂಡು ಬರುತ್ತಿವೆ.

ಈ ವೈರಸ್ ದೇಹ ಹೊಕ್ಕು ಶರೀರದಲ್ಲಿನ ವಿವಿಧ ಅಂಗಗಳಿಗೆ ತೀವ್ರ ಹಾನಿ ಮಾಡುತ್ತಿದೆ. ಮೆದುಳು, ಹೃದಯ, ಶ್ವಾಸಕೋಶಗಳು ಈ ವೈರಸ್ ನಿಂದ ತೀವ್ರವಾಗಿ ಹಾನಿಯಾಗುತ್ತಿವೆ. ಸದ್ಯ ಮಹಾಮಾರಿಗೆ ಔಷಧಿ ಕಂಡು ಹಿಡಿಯುವ ಪ್ರಯತ್ನ ಇಡೀ ವಿಶ್ವದಲ್ಲಿಯೇ ನಡೆಯುತ್ತಿದೆ. ಸಮರೋಪಾದಿಯಲ್ಲಿ ವಿಜ್ಞಾನಿಗಳು ಔಷಧಿ ಕಂಡು ಹಿಡಿಯುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ ಈ ವೈರಸ್ ನ ಮತ್ತಷ್ಟು ಆಯಾಮಗಳನ್ನು ಪತ್ತೆ ಹಚ್ಚಲು ವಿಜ್ಞಾನಿಗಳು, ಸಂಶೋಧಕರು ಶ್ರಮಿಸುತ್ತಿದ್ದಾರೆ.

ಈಗಾಗಲೇ ಬಂದ ಪ್ರಾಥಮಿಕ ಮಾಹಿತಿಯಂತೆ, ಕೊರೊನಾದಿಂದ ಮನುಷ್ಯನ ಮೆದುಳು ಅತ್ಯಂತ ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದೆ ಎನ್ನಲಾಗುತ್ತಿದೆ. ಸಣ್ಣ ಅಥವಾ ಲಘು ಪ್ರಮಾಣದ ತಲೆನೋವು ವೈರಸ್‌ಗೆ ಸಂಬಂಧಿಸಿದಂತಹ ಲಕ್ಷಣಗಳು ಬರಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಜನರು ಸಾಮಾನ್ಯವಾಗಿ ಒತ್ತಡದ ಸಮಯ ಹಾಗೂ ಇನ್ನಿತರ ಕಾರಣಗಳಿಂದ ತಲೆನೋವು ಅನುಭವಿಸುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಈ ಹಿಂದಿನ ಕಾರಣಗಳಿಂದಲೇ ಬರುತ್ತದೆ ಎಂದು ತಿಳಿಯುವುದು ತಪ್ಪು. ಮೆದುಳಿನಲ್ಲಿನ ರಕ್ತನಾಳಗಳು ಹಾಗೂ ಪಲ್ಸ್ ತೀವ್ರಗೊಳ್ಳುವಂತಹ ತಲೆನೋವು ಕಾಣಿಸಿಕೊಳ್ಳುತ್ತಿದ್ದು, ಇದು ತೀವ್ರ ಅಪಾಯಕಾರಿ ಎಂದು ಸಂಶೋಧನೆ ಹೇಳುತ್ತಿದೆ.

ಷಿಕಾಗೋದ ವಿವಿಧ ವೈದ್ಯಕೀಯ ಆಸ್ಪತ್ರೆಗಳಲ್ಲಿ ಸುಮಾರು 509 ಕೊರೊನಾ ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಈ ರೀತಿಯ ಲಕ್ಷಣಗಳನ್ನು ಪತ್ತೆ ಹಚ್ಚಲಾಗಿದೆ. ಅಧ್ಯಯನ ಹೇಳುವಂತೆ ಈ ರೋಗಿಗಳು ಕೊರೊನಾ ಇದ್ದ ದಿನಗಳಲ್ಲಿ ಕೆಲವು ಸಮಯವಾದರೂ ತಲೆನೋವಿನ ಸಮಸ್ಯೆ ಎದುರಿಸಿದ್ದಾರೆ. ಕೊರೊನಾ ಲಕ್ಷಣವಿದ್ದ ಸಂದರ್ಭದಲ್ಲಿ ನರಸಂಬಂಧಿ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ದಟ್ಟವಾಗಿದೆ. ಈ ಸಂದರ್ಭದಲ್ಲಿ ಶೇ. 82ರಷ್ಟು ಜನರು ನರಸಂಬಂಧಿ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಮೆದುಳಿನ ರೋಗಗಳು, ಹಾನಿ ಅಥವಾ ಅಸಮರ್ಪಕ ಚಟುವಟಿಕೆಗಳು ಕೊರೊನಾ ಸಂದರ್ಭದಲ್ಲಿ ಕಂಡು ಬರುತ್ತಿದೆ. ಅನೇಕ ಕೊರೊನಾ ರೋಗಿಗಳ ಮೆದುಳು ತೀವ್ರ ಹಾನಿಯಾಗುತ್ತಿವೆ. ಹೀಗಾಗಿಯೇ ಆಸ್ಪತ್ರೆಗೆ ದಾಖಲಾದ ಹಲವರಲ್ಲಿ ತಲೆ ನೋವು ಸಮಸ್ಯೆ ಕಂಡು ಬರುತ್ತಿದೆ ಎಂದು ಅಧ್ಯಯನ ಹೇಳಿದೆ.

ಅಷ್ಟೇ ಅಲ್ಲದೇ, ಕೊರೊನಾ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ರೋಗಿಗಳು ಮೆದುಳಿನ ಹಾನಿಯ ನೋವು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೇ, ಶೇ. 90ರಷ್ಟು ಜನರಿಗೆ ಈ ಸಮಸ್ಯೆ ಕಾಡಿಲ್ಲ. ಹೀಗಾಗಿ ಕೊರೊನಾ ರೋಗಿಗಳಲ್ಲಿನ ನರಸಂಬಂಧಿ ಸಮಸ್ಯೆಗಳ ತೀವ್ರತೆಯ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಡಿಯಾರವೇ ನಿರ್ಧಾರಗಳ ಬಂಡಿ

ಜೀವನದ ಯಾವ ಹಂತದಲ್ಲಾದರೂ ಸಮಸ್ಯೆಗಳು,ನೋವು,ಹತಾಶೆಗಳು ಬಂದೇ ಬರುತ್ತವೆ.ಬರೀ ನೋವುಗಳಷ್ಟೇ ಅಲ್ಲ ನಲಿವುಗಳೂ ಕೂಡ.ಈ ನೋವು ಸಂತಸಗಳೆಲ್ಲಾ ನಮ್ಮ ಜೀವನದ ಸಮಯ ಜೀವಿಗಳು ಎಂದರೆ ತಪ್ಪಾಗದು.

ಜಗತ್ತಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2.33 ಲಕ್ಷ

ಲಂಡನ್ : ಜಗತ್ತಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಈ ಮಹಾಮಾರಿಗೆ 2.33 ಲಕ್ಷ ಜನ ಬಲಿಯಾಗಿದ್ದಾರೆ.…

ಗದಗ ಜಿಲ್ಲಾಡಳಿತಕ್ಕೆ 40 ಲಕ್ಷ ವೈದ್ಯಕೀಯ ಸಾಮಾಗ್ರಿ ನೆರವು ನೀಡಿದ ಐಪಿಎಸ್ ಅಧಿಕಾರಿ ಸಜ್ಜನ್.

ಗದಗ: ಮೂಲತಃ ಗದಗ ಜಿಲ್ಲೆಯವರಾದ ತೆಲಂಗಾಣ ರಾಜ್ಯದ ಸೈಬರ್ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈಧ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ.

ಬಿಟ್ ಕಾಯಿನ್ ದಂಧೆಯ ಕೈವಾಡ: ಒಬಾಮಾ, ಗೇಟ್ಸ್ ಟ್ವೀಟರ್ ಅಕೌಂಟ್ ಹ್ಯಾಕ್ಡ್!

ಬಿಟ್ ಕಾಯಿನ್ ಹಗರಣವೊಂದನ್ನು ಪ್ರಮೋಟ್ ಮಾಡಲು ಅಮೆರಿಕದ ಖ್ಯಾತನಾಮರ ಟ್ವೀಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದೆ. ಟ್ವೀಟರ್ ಕಂಪನಿ ಈಗ ಆ ಅಕೌಂಟ್ಸ್ ಸ್ಥಗಿತಗೊಳಿಸಿದೆ.