ದೆಹಲಿ: ಪರಿಸರ ಮತ್ತು ಪ್ರಯಾಣಿಕ ಸ್ನೇಹಿ, ಕಡಿಮೆ ವೆಚ್ಚದಾಯಕದಂತಹ ಹಲವು ಉಪ ಕ್ರಮಗಳಾದ ಬೃಹತ್ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆಯಿಂದ ಹಿಡಿದು ರೈಲ್ವೆ ಹಳಿಗಳಲ್ಲಿ ಪ್ರಾಣಿಗಳು ಗಾಯಗೊಳ್ಳದಂತೆ ಉಳಿಸುವ ಯೋಜನೆಗಳ ಮೂಲಕ ಹಲವು ಪ್ರಮುಖ ಕ್ರಮಗಳು ಪರಿಸರ ಸ್ನೇಹಿ ಕ್ರಮಗಳನ್ನು ಭಾರತೀಯ ರೈಲ್ವೆ ಕೈಗೊಳ್ಳುತ್ತಿದೆ.
ರೈಲ್ವೆ ವಿದ್ಯುದ್ದೀಕರಣ ಕೈಗೊಂಡಿರುವುದರಿಂದ ಮಾಲಿನ್ಯವು 2014 ರ ನಂತರ ಸುಮಾರು ಹತ್ತು ಪಟ್ಟು ಕಡಿಮೆಯಾಗಿದೆ. ರೈಲ್ವೆ ಇಲಾಖೆಯು 2023ರ ವರೆಗೆ ಬ್ರಾಡ್ ಗೇಜ್ ಮರ‍್ಗದಲ್ಲಿ ಶೇ.100ರಷ್ಟು ವಿದ್ಯುದೀಕರಣವನ್ನು ಸಾಧಿಸುವ ಮೂಲಕ ಆಥಿಕ ಉಳಿತಾಯವನ್ನು ಸಾಧಿಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ.
ಕೊವಿಡ್ನಂತಹ ದುರಿತ ಕಾಲದಲ್ಲಿ ಆಹಾರ, ತರಕಾರಿ, ಹಣ್ಣು ಮುಂತಾದ ಜೀವನಾವಶ್ಯಕ ವಸ್ತುಗಳ ಜತೆ ,ಮೆಡಿಕಲ್ ಆಕ್ಸಿಜನ್ ಸರೆಬರಾಜನ್ನು ಸಹ ಭಾರತೀಯ ರೈಲ್ವೆ ಸಾಗಣೆ ಮಾಡಿದೆ. ಏಪ್ರಿಲ್ 2021ರಿಂದ ಮೇ 2021ರವರೆಗೆ ಭಾರತೀಯ ರೈಲ್ವೆ 73 ಲಕ್ಷ ಟನ್ಗಳಷ್ಟು ಆಹಾರ ವಸ್ತುಗಳನ್ನು ಭಾರತೀಯ ರೈಲ್ವೆ ರವಾನಿಸಿದೆ. 241 ಮೆಡಿಕಲ್ ಆಕ್ಸಿಜನ್ ರೈಲುಗಳನ್ನು ಓಡಿಸಿದೆ. 922 ಟ್ಯಾಂಕರ್ಗಳನ್ನು ಅಗತ್ಯವಿರುವ ಸ್ಥಳಗಳಿಗೆ ರವಾನಿಸಿದೆ. ಒಟ್ಟು 15,046 ಟನ್ಗಳಷ್ಟು ಮೆಡಿಕಲ್ ಆಕ್ಸಿಜನ್ಗಳನ್ನು ರವಾನಿಸಿದೆ.
ರಸ್ತೆ ಸಾರಿಗೆಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಸರಕು ಸೇವೆ ಸಾಗಣೆ ಮಾಡಬಲ್ಲ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸಿದೆ. ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದ, ಯುನೈಟೆಡ್ ನೇಶನ್ನ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿವಹಣಾ ಯೋಜನೆಗಳಂತಹ ರ‍್ಕಾರದ ಗುರಿಗಳನ್ನು ಸಾಧಿಸಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಸಾವಿರಾರು ಎಂಜಿನಿಯರ್ಗಳು, ತಂತ್ರಜ್ಞರು ಮತ್ತು ಇಲಾಖೆಯ ಎಲ್ಲ ವಿಭಾಗದ ಸಿಬ್ಬಂದಿ ಭಾರತೀಯ ರೈಲ್ವೆಯನ್ನು ಇನ್ನಷ್ಟು ಪರಿಸರ ಮತ್ತು ಪ್ರಯಾಣಿಕ ಸ್ನೇಹಿಯನ್ನಾಗಿ ಮಾರಪಡಿಸಲು ಶ್ರಮಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.