ಮುಂಬಯಿ : ಒಬ್ಬನನ್ನು ಕೊಲ್ಲಲು ನೂರು ಜನ ಲಾಂಗ್ ಹಿಡಿದುಕೊಂಡು ಬಂದಿದ್ದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ಪುಣೆಯ ನೆಹರು ನಗರದಲಲ್ ನಡೆದಿದೆ. ಈ ದುಷ್ಕರ್ಮಿಗಳು 35 ವರ್ಷದ ನೀಲೇಶ್ ಜಾಧವ್ ಎಂಬ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಸಾಲು ಸಾಲು ಬೈಕ್ ಗಳಲ್ಲಿ ಸಾಲು ಸಾಲಾಗಿ ಹೋಗಿದ್ದಾರೆ. ಅಷ್ಟೇ ಅಲ್ಲದೇ, ದುಷ್ಕರ್ಮಿಗಳು ಸ್ಥಳದಲ್ಲಿಯೇ 10ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ್ದಾರೆ.

ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸುಭಾಷ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಆಶೀಷ್ ಜಗಧನೆ (31), ಇರ್ಫಾನ್ ಶೇಖ್ (30), ಜೀತೇಶ್ ಮಂಜುಲೆ (28), ಜಾವೇದ್ ಔಟಿ (29), ಆಕಾಶ್ ಹಜಾರೆ (30) ಸೇರಿದಂತೆ ನೂರು ಜನರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ರಾತ್ರಿ ಹೊತ್ತು ಬೈಕ್ ಗಳಲ್ಲಿ ಬಂದಿದ್ದ ನೂರು ಜನರ ಗ್ಯಾಂಗ್ ನೀಲೇಶ್ ನನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಮಚ್ಚು, ಲಾಂಗು, ದೊಣ್ಣೆ, ಕಲ್ಲು, ಇಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳನ್ನ ತಮ್ಮ ಜೊತೆಯಲ್ಲಿ ತಂದಿದ್ದರು. ಹಲ್ಲೆ ವೇಳೆ ಆರೋಪಿಗಳು, ಕೊಂದು ಬಿಡಿ, ಹೊಡೆದಾಕಿ ಎಂದು ಜೋರಾಗಿ ಕೂಗಿದ್ದಾರೆ.

ದುಷ್ಕರ್ಮಿಗಳ ಗ್ಯಾಂಗ್ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನೀಲೇಶ್, ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ಆ ನಂತರ ಸ್ಥಳೀಯರನ್ನು ಹೆದರಿಸಿದ್ದಾರೆ. ಆದರೆ, ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ನೀಲೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Leave a Reply

Your email address will not be published. Required fields are marked *

You May Also Like

ದೇಶದ ಜನತೆಯನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ!

ಫೋರ್ಬೆಸ್ ಗಂಜ್ : ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶಾಂತಿಯಿಂದ ನಡೆದಿದ್ದು, ದೇಶದ ಜನತೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಇನ್ನೇನು ಊರು ತಲುಪಬಹುದು ಎನ್ನುವಷ್ಟರಲ್ಲಿಯೇ 200 ಕಿ.ಮೀ ನಡೆದ ಮಹಿಳೆ ಸಾವು!

ಲಾಕ್ ಡೌನ್ ನಿಂದಾಗಿ ಹಲವರು ಊರು ತಲುಪಲು ಇನ್ನೂ ಹೆಣಗಾಡುತ್ತಿದ್ದಾರೆ. ಹೀಗೆ ಊರು ತಲುಪಲು ಕಾಲ್ನಡಿಗೆಯಲ್ಲಿಯೇ ತೆರಳಿದ್ದ ಮಹಿಳೆಯೊಬ್ಬರು ಬರೋಬ್ಬರಿ 200 ಕಿ.ಮೀ ನಡೆದು ಸಾವನ್ನಪ್ಪಿದ್ದಾರೆ.

ಪಿಸ್ತೂಲ್, ಮೂರು ಜೀವಂತ ಗುಂಡುಗಳೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದವರಲ್ಲಿ ಗದಗ ಜಿಲ್ಲೆಯವನೂ ಇದ್ದಾನೆ!

ಬೆಳಗಾವಿ : ನಾಡ ಪಿಸ್ತೂಲ್ ಸಮೇತ ಮೂರು ಜೀವಂತ ಗುಂಡುಗಳು ಸುಕ್ಕಿರುವ ಘಟನೆ ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್ ಬಳಿ ನಡೆದಿದೆ.

ಬ್ಯಾಂಕಿನಲ್ಲಿಟ್ಟ ಠೇವಣಿಯ ಬಡ್ಡಿದರ ಇಳಿಕೆ..!

ತಾವು ಇಟ್ಟ ಹಣಕ್ಕೆ ಬಡ್ಡಿಯಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದು ಸಹಜ. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಡೆಪಾಸಿಟ್ ಮೇಲಿನ ಬಡ್ಡಿ ಹಣವನ್ನೇ ಇಳಿಕೆ ಮಾಡಿದೆ.