ನವದೆಹಲಿ: ದೇಶದಲ್ಲಿ ರೂಪಾಂತರಿ ಕೊರೊನಾ ಸೋಂಕು ಹೆಚ್ಚು ಸಾಂಕ್ರಾಮಿಕವಾಗಬಹುದು ಎಂದು ಏಮ್ಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಭಾರತದಾದ್ಯಂತ 240 ಹೊಸ ವೈರಸ್ಗಳು ಹರಡಿವೆ. ಕಳೆದ ವಾರದಿಂದ ರಾಜ್ಯದಲ್ಲಿ ಹೊಸದಾಗಿ ಸೋಂಕು ಉತ್ಪತ್ತಿಯಾಗುತ್ತಿದೆ.ಕೇವಲ ಮಹಾರಾಷ್ಟ್ರ ಮಾತ್ರವಲ್ಲದೆ ಕೇರಳ,ಮಧ್ಯಪ್ರದೇಶ,ಪಂಜಾಬ್, ಛತ್ತೀಸ್ಗಢದಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಕಂಡು ಬಂದಿರುವ ಹೊಸ ರೂಪಾಂತರಿ ಕೊರೊನಾ ಸೋಂಕು ಹೆಚ್ಚು ಸಾಂಕ್ರಾಮಿಕವಾಗಬಲ್ಲದು. ಇದು ಹೆಚ್ಚು ಬೇಗ ಹರಡುತ್ತದೆ ಮತ್ತು ಅಪಾಯಕಾರಿಯಾಗಿದೆ. ಹಾಗೆಯೇ ಇದು ಮರು ಸೋಂಕಿಗೂ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಭಾರತದಲ್ಲಿ ಮತ್ತೆ ಮೊದಲಿನಂತೆ ಪರೀಕ್ಷೆಗಳು ನಡೆಯಬೇಕು, ಕಾಂಟ್ಯಾಕ್ಟ್ ಟ್ರೇಸಿಂಗ್, ಚಿಕಿತ್ಸೆಯಂತಹ ಕಾರ್ಯಗಳು ನಡೆಯಬೇಕು. ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ಸೂಚಿಸಿದೆ.

ಈ ಕುರಿತು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ವರದಿ ಮಾಡಿದ್ದು, ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಅಸ್ಟ್ರಾಜೆನೆಕಾ ಲಸಿಕೆಯನ್ನು ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You May Also Like

ಸಂತ್ರಸ್ತೆಯಿಂದ ಪೊಲೀಸ್ ದೂರು : ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಮದುವೆ ಮಾಡಿಕೊಂಡ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಭಾರತ ಜಗ್ಗುವುದಿಲ್ಲ..

ಲಡಾಖ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿದ್ದು, ಇದೀಗ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳದ ಹೊರತು ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಸೇನೆ ತಿಳಿಸಿದೆ.

ಲಾಕ್ ಡೌನ್ ನಲ್ಲಿ ಹುಟ್ಟಿದ ಮಕ್ಕಳಿಗೆ ಕ್ವಾರಂಟೈನ್, ಸ್ಯಾನಿಟೈಸರ್ ಎಂದು ನಾಮಕರಣ!

ಭೋಪಾಲ್: ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಕ್ವಾರಂಟೈನ್ ಹಾಗೂ ಸ್ಯಾನಿಟೈಸರ್ ಎಂದು ಹೆಸರಿಟ್ಟಿರುವ…

ಮಹಿಳಾ ಸಚಿವೆ ಕುರಿತು ಹೇಳಿದ ಹೇಳಿಕೆಗೆ ಮಾಜಿ ಸಿಎಂ ಹೇಳಿದ್ದೇನು?

ಭೋಪಾಲ್ : ಬಿಜೆಪಿ ಜನರು, ಮತದಾರರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮಾಜಿ ಸಿಎಂ ಕಮಲ್ ನಾಥ್ ಪತ್ರ ಬರೆದಿದ್ದಾರೆ.