ದೆಹಲಿ: ಪರಿಸರ ಮತ್ತು ಪ್ರಯಾಣಿಕ ಸ್ನೇಹಿ, ಕಡಿಮೆ ವೆಚ್ಚದಾಯಕದಂತಹ ಹಲವು ಉಪ ಕ್ರಮಗಳಾದ ಬೃಹತ್ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆಯಿಂದ ಹಿಡಿದು ರೈಲ್ವೆ ಹಳಿಗಳಲ್ಲಿ ಪ್ರಾಣಿಗಳು ಗಾಯಗೊಳ್ಳದಂತೆ ಉಳಿಸುವ ಯೋಜನೆಗಳ ಮೂಲಕ  ಹಲವು ಪ್ರಮುಖ ಕ್ರಮಗಳು ಪರಿಸರ ಸ್ನೇಹಿ ಕ್ರಮಗಳನ್ನು ಭಾರತೀಯ ರೈಲ್ವೆ ಕೈಗೊಳ್ಳುತ್ತಿದೆ.

ರೈಲ್ವೆ ವಿದ್ಯುದ್ದೀಕರಣ ಕೈಗೊಂಡಿರುವುದರಿಂದ ಮಾಲಿನ್ಯವು 2014 ರ ನಂತರ ಸುಮಾರು ಹತ್ತು ಪಟ್ಟು ಕಡಿಮೆಯಾಗಿದೆ. ರೈಲ್ವೆ ಇಲಾಖೆಯು 2023ರ ವರೆಗೆ ಬ್ರಾಡ್ ಗೇಜ್​ ಮರ‍್ಗದಲ್ಲಿ ಶೇ.100ರಷ್ಟು ವಿದ್ಯುದೀಕರಣವನ್ನು ಸಾಧಿಸುವ ಮೂಲಕ ಆಥಿ೵ಕ ಉಳಿತಾಯವನ್ನು ಸಾಧಿಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ.

ಕೊವಿಡ್​ನಂತಹ ದುರಿತ ಕಾಲದಲ್ಲಿ ಆಹಾರ, ತರಕಾರಿ, ಹಣ್ಣು ಮುಂತಾದ ಜೀವನಾವಶ್ಯಕ ವಸ್ತುಗಳ ಜತೆ ,ಮೆಡಿಕಲ್ ಆಕ್ಸಿಜನ್ ಸರೆಬರಾಜನ್ನು ಸಹ ಭಾರತೀಯ ರೈಲ್ವೆ ಸಾಗಣೆ ಮಾಡಿದೆ. ಏಪ್ರಿಲ್ 2021ರಿಂದ ಮೇ 2021ರವರೆಗೆ ಭಾರತೀಯ ರೈಲ್ವೆ 73 ಲಕ್ಷ ಟನ್​ಗಳಷ್ಟು ಆಹಾರ ವಸ್ತುಗಳನ್ನು ಭಾರತೀಯ ರೈಲ್ವೆ ರವಾನಿಸಿದೆ. 241 ಮೆಡಿಕಲ್ ಆಕ್ಸಿಜನ್​ ರೈಲುಗಳನ್ನು ಓಡಿಸಿದೆ. 922 ಟ್ಯಾಂಕರ್​ಗಳನ್ನು ಅಗತ್ಯವಿರುವ ಸ್ಥಳಗಳಿಗೆ ರವಾನಿಸಿದೆ. ಒಟ್ಟು 15,046 ಟನ್​ಗಳಷ್ಟು ಮೆಡಿಕಲ್ ಆಕ್ಸಿಜನ್​ಗಳನ್ನು ರವಾನಿಸಿದೆ.

ರಸ್ತೆ ಸಾರಿಗೆಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಸರಕು ಸೇವೆ ಸಾಗಣೆ ಮಾಡಬಲ್ಲ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸಿದೆ. ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದ, ಯುನೈಟೆಡ್ ನೇಶನ್​ನ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿವ೵ಹಣಾ ಯೋಜನೆಗಳಂತಹ ರ‍್ಕಾರದ ಗುರಿಗಳನ್ನು ಸಾಧಿಸಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಸಾವಿರಾರು ಎಂಜಿನಿಯರ್​ಗಳು, ತಂತ್ರಜ್ಞರು ಮತ್ತು ಇಲಾಖೆಯ ಎಲ್ಲ ವಿಭಾಗದ ಸಿಬ್ಬಂದಿ ಭಾರತೀಯ ರೈಲ್ವೆಯನ್ನು ಇನ್ನಷ್ಟು ಪರಿಸರ ಮತ್ತು ಪ್ರಯಾಣಿಕ ಸ್ನೇಹಿಯನ್ನಾಗಿ ಮಾರ೵ಪಡಿಸಲು ಶ್ರಮಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಬರೋಬ್ಬರಿ 11 ಗಂಟೆಗಳ ಕಾಲ ಮಾತುಕತೆ ನಡೆಸಿದ ಭಾರತ, ಚೀನಾ ಸೇನಾಧಿಕಾರಿಗಳು!

ಲಡಾಖ್: ಭಾರತ ಹಾಗೂ ಚೀನಾ ಸೇನಾಧಿಕಾರಿಗಳು ಬರೋಬ್ಬರಿ 11 ಗಂಟೆಗಳ ಕಾಲ ಗಡಿ ಸಂಘರ್ಷದ ಕುರಿತು…

ದೇಹ ಮಾರುವುದಕ್ಕಾಗಿ ಕರೆ ತಂದಿದ್ದ ಅಪ್ರಾಪ್ತೆಯರನ್ನು ರಕ್ಷಿಸಿದ ಪೊಲೀಸರು!

ಜೈಪುರ : ಅಪ್ರಾಪ್ತ ಬಾಲಕಿಯರನ್ನು ದೇಹ ವ್ಯಾಪಾರಕ್ಕೆಂದು ಕರೆ ತಂದಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದ್ದು, 21 ಅಪ್ರಾಪ್ತೆಯರನ್ನು ರಕ್ಷಿಸಿದ್ದಾರೆ.

ಕೋವಿಡ್ ನಿಂದ ಮೃತ ಪಟ್ಟ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ

ಲಖನೌ: ಕೋವಿಡ್-19 ವೇಳೆ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಚೀಟಿ ಎತ್ತುವ ಮೂಲಕ ಹುಡುಗನೊಂದಿಗೆ ಮದುವೆ

ನಾಲ್ವರು ಯುವಕರ ಜೊತೆ ಓಡಿಹೋಗಿದ್ದ ಹುಡುಗಿಯೊಬ್ಬಳು ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.