ಚೆನ್ನೈ: ಇಲ್ಲಿಯ ಬೀದಿಯೊಂದರಲ್ಲಿಯೇ ದಾಖಲೆಯ 42 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ವಿಆರ್ ಪಿಲೈ ಬೀದಿಯಲ್ಲಿ ಟಿ, ಕಾಫಿ ಮತ್ತಿತರ ಸ್ನ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಆನಂತರ ಇಡೀ ಬೀದಿಗೆ ಅಂಟಿಕೊಂಡಿದೆ. ಸದ್ಯ ಬರೋಬ್ಬರಿ 42 ಜನರನ್ನು ಅದು ತಲುಪಿದೆ.
ಸೋಂಕಿನ ಮೂಲವೆಂದು ಶಂಕಿಸಲಾಗಿರುವ ಎರಡು ಪ್ರಾಥಮಿಕ ಪ್ರಕರಣಗಳ ವ್ಯಕ್ತಿಗಳು 35 ಮತ್ತು 49 ವಯಸ್ಸಿನವರಾಗಿದ್ದು, ವಿಆರ್ ಪಿಲೈ ಸ್ಟ್ರೀಟ್ ನಿವಾಸಿಯಾಗಿದ್ದಾರೆ. ಬೇಯಿಸಿದ ಆಹಾರ ವಿತರಿಸುವುದನ್ನು ಪಾಲಿಕೆ ತಡೆಗಟ್ಟಿದ್ದರೂ ಇವರಿಬ್ಬರೂ ಒಟ್ಟಾಗಿ ಬೇಯಿಸಿದ ಆಹಾರವನ್ನು ವಿತರಿಸುತ್ತಿದ್ದರು ಎನ್ನಲಾಗಿದೆ.
ಇವರಿಬ್ಬರೂ ಹೇಗೆ ಸೋಂಕಿಗೆ ತುತ್ತಾದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅವರು ಚೆನ್ನೈ ನಗರದಲ್ಲಿ ಸ್ವಲ್ಪ ಅಡ್ಡಾಡಿರುವುದಾಗಿ ತಿಳಿಸಿದ್ದು, ಸದ್ಯ ಎಲ್ಲರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಕಾರ್ಪೋರೇಷನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯಕ್ಕೆ ಬರುವ ಯಾತ್ರಿಗಳಿಗೆ ಮಾರ್ಗಸೂಚಿ ಜಾರಿ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ, ಈ ರಾಜ್ಯಗಳಿಂದ ಬರುವ ಜನರು ನೆಗೆಟಿವ್ ಆರ್ಟಿ-ಪಿಸಿಆರ್ ಪ್ರಮಾಣಪತ್ರವನ್ನು ಕರ್ನಾಟಕ ಕಡ್ಡಾಯಗೊಳಿಸಿದೆ.

ಕೊಪ್ಪಳ ಮೂಲದ ಮಸ್ಕಿ ಕೆನರಾ ಬ್ಯಾಂಕ್ ಉದ್ಯೋಗಿಗೂ ಕೊರೊನಾ..!

ಮಸ್ಕಿ: ಪಟ್ಟಣದ ಬ್ಯಾಂಕಿನ ಉದ್ಯೋಗಿಗೆ ಕೊರೊನಾ ಪಾಸಿಟಿವ್ ದೃಡ ಪಟ್ಟಿರುವ ಹಿನ್ನಲ್ಲೆಯಲ್ಲಿ ಬ್ಯಾಂಕ್ ವನ್ನು ಸಿಲ್…

6 ತಿಂಗಳ ನಂತರವೂ ಕೇಂದ್ರಕ್ಕೆ ಗೊಂದಲವೇ?: ಕವಾಟವಿರುವ ಎನ್-95 ಮಾಸ್ಕ್ ಅಪಾಯಕಾರಿ’

ಕೇಂದ್ರ ಆರೋಗ್ಯ ಸೇವೆಗಳ ಡೈರೆಕ್ಟರ್ ಜನರಲ್ ಹೊರಡಿಸಿದ ಸುತ್ತೋಲೆ ಈಗ ಜನರನ್ನು ಗೊಂದಲಕ್ಕೆ ತಳ್ಳಿದೆ.ಸದ್ಯ ಬಳಕೆಯಲ್ಲಿರುವ ಕವಾಟ ಅಥವಾ ರಂಧ್ರಗಳಿರುವ ಎನ್-95 ಮಾಸ್ಕ್ ಸೋಂಕು ತಡೆಯಲಾರವು.