ಕೊರೋನಾ ಎಲ್ಲಡೆ ತನ್ನ ಕರಿನೆರಳು ಚಾಚುತ್ತಾ ಹೊರಟಿದೆ . ಈ ನಡುವೆಯೂ ಇಲ್ಲಿಯವರೆಗೂ ಪತ್ತೆಯೇ ಇಲ್ಲದ ವೈರಸ್ ಗಳು ದೇಶ ಎಲ್ಲಡೆ ಪಾದಾರ್ಪಣೆ ಮಾಡುತ್ತಿವೆ. ವಿಪರ್ಯಾಸವೆಂದರೆ ನಮ್ಮ ಜನತೆ ಅನುಭವವಾಗದೆ ಎಚ್ಚೆತ್ತುಕೊಳ್ಳೆವು ಎನ್ನುವ ಹಾಗೆ ವರ್ತಿಸುತ್ತಿರುವುದು ವಿಷಾಧನಿಯ. ದೇಶದ ಕಂಟಕಕ್ಕೆ ಕಾರಣಗಳ ನಿಡುತ್ತಾ, ಸರ್ಕಾರದ ನಿಯಮಗಳ ವಿರುದ್ಧವಾಗಿ ಹೊರಟ ಜನರಿಗೆ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ದಂಪತಿಗಳು ಮತ್ತು ಅನ್ ನವನ್ ಕ್ರಿಯೇಶನ್ ತಂಡದ ಸಂಯೋಗದಲ್ಲಿ ಧರ್ಮಸ್ಥಳದ

“ಎಸ್‌ಕೆಡಿಆರ್‌ಡಿಪಿ ಜನನ ವಿಕಾಸ, ಪ್ರಸ್ತುತ ಪಡಿಸಿದ, ನಾವೆಷ್ಟು ಜವಾಬ್ದಾರರು ಎಂಬ ಶೀರ್ಷಿಕೆಯಲ್ಲಿ ಚಿತ್ರಿಸಿದ ಕೊರೋನಾ ಜಾಗೃತಿ ಕಿರು ಚಿತ್ರ, ಅತ್ಯುತ್ತಮವಾಗಿದೆ. ವಾಸ್ತವಕ್ಕಿದು ತಕ್ಕದ್ದಾಗಿದೆ ಎನ್ನುವುದಕ್ಕಿಂತ, ಜನರಿಗೆ ಮನಮುಟ್ಟುವಂತಿದೆ ಎಂದು ನಾವೇ ನಾಮಕರಣ ಮಾಡಬಹುದಂತಿದೆ. ಸರ್ಕಾರದ ನಿಯಮಗಳನ್ನು ಸ್ವಯಂ ಪಾಲಿಸುವುದಕ್ಕೆ ಪ್ರೇರೆಪಿಸುವಂತಿದೆ ಎಂದರೆ ಕಿರು ಚಿತ್ರ ನೋಡಿದವರು ಹೌದು ಹೌದ ಎನ್ನುಬಹುದು.

ಇದೊಂದು ಕೊರೋನಾ ಜಾಗೃತಿ ಮೂಡಿಸುವ ಚಿತ್ರವಾಗಿದ್ದು ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆ ಅಮ್ಮನವರ ಮಡಿಲಿಂದ ನಾಡ ಮಕ್ಕಳು ರಕ್ಷಣೆಯ ನಿಲುವೆನ್ನಬಹುದಾಗಿದೆ. ಈ ಚಿತ್ರ ಸ್ವತಃ ಮಾತೃಶ್ರೀಅಮ್ಮನವರೇ ರಚಿಸಿದ ಕಥೆ ಮತ್ತು ಪರಿಕಲ್ಪನೆಯಾಗಿದೆ. ಈ ಚಿತ್ರದ , ಡಿ ಓ ಪಿ. ದೀಕ್ಷಿತ್ ಧರ್ಮಸ್ಥಳ, ಡೈರೇಕ್ಷನ್ ಮತ್ತು ಸ್ಕ್ರೀನ್ ಪ್ಲೇ ಮನೋಜ್ ಆನಂದ್, ಡೈಲಾಗ್ ರಶ್ಮಿ ಯಾದವ್, ಸಂಗೀತ ಮತ್ತು ಸಂಯೋಜನೆ ಆಂಟೋನಿ, ಸಮರ್ಥನ್‌ರಾವ್ ಮತ್ತು ಚಿತ್ರದ ಎಡಿಟರ್ ಕೀರ್ತನ್‌ರಾವ್ ಚಿತ್ರಕ್ಕೆ ಆಕರ್ಷಣೀಯತೆಯನ್ನು ತುಂಬಿದ್ದಾರೆ.

ಇದು ಪೂಜ್ಯರಾದ ಡಾ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಸಮ್ಮುಖದಲ್ಲಿ ದಿನಾಂಕ 22 ಮೇ 2021 ರಂದು ಶ್ರೀ ಮಂಜುನಾಥೇಶ್ವರ ದೇವರ ಕೃಪಾಶಯದಲ್ಲಿ ಬಿಡುಗಡೆಗೊಂಡಿದೆ. ಈ ಜಾಗೃತಿ ಚಿತ್ರ ಅದೆಷ್ಟೊ ಜನರ ಉತ್ತಮ ಅಭಿಪ್ರಾಯ ಸಂಪಾದಿಸಿದೆ. ಕಾರಣ ಯಾವುದೇ ಒಂದು ಚಿತ್ರ ಒಳಪರದೆಯಿಂದ ತೆರೆಗೆ ಬರಬೇಕಾದರೆ ಆದರಹಿಂದೆ ಅದೆಷ್ಟೋ ಶ್ರಮ, ಶ್ರದ್ಧೆಯಿರುತ್ತದೆ. ಚಿತ್ರದಲ್ಲಿ ರಂಗ ಕಲಾವಿದಾರೂ, ಪ್ರಾಧ್ಯಾಪಕಿ, ವಿಧ್ಯಾರ್ಥಿಗಳನ್ನೊಳಗೊಂಡಿದೆ. ಚಿತ್ರದಲ್ಲಿ ವೈದೇಹಿ ರಂಗ ಕಲಾವಿದೆ ಮತ್ತು ರಾಜೇಂದ್ರದಾಸ್, ಸಂದೇಶ್ ಗೌಡ, ಹರ್ಷಿತ್ ಜೈನ್ ಅಲ್ಲದೆ

ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಇವರೂ ಅಭಿನಂದನಾರ್ಹರು ಸಾಧನಾ, ಸಂಗೀತಾ, ಕವಿತಾ, ಶ್ರೇಯಸ್, ನೇಹಾ ವೃಂಧಾ, ನಾಗಶ್ರೀ, ಚೇತನಾ ಹೀಗೆ ಹತ್ತು ಹಲವರು ಅತ್ಯುತ್ತಮ ಕಲಾವಿದರು, ಮುಖ್ಯವಾಗಿ ತೇಜಾಕ್ಷರವರ ಉತ್ತಮ ಮೇಕ್‌ಅಪ್ ಟಚ್ ನಿಂದ, ನಟನೆ ಮತ್ತು ಚಿತ್ರ ಮೆರಗಿನಿಂದ ಸುಂದರವಾಗಿ ತೆರೆ ಕಂಡಿದೆ ಎಂದರೆ ಬಹುಶಃ ತಪ್ಪಾಗಲಾರದು.

ಚಿತ್ರ ಹೇಳುವಂತೆ ನಮ್ಮ ಜೀವದ ರಕ್ಷಣೆ ನಮ್ಮದು ಅದರೊಂದಿಗೆ ಇಂದಿನ ಪರಿಸ್ಥಿತಿಯಲ್ಲಿ ನಾವು ಅನಾವಶ್ಯ, ಮಾಸ್ಕ, ಹಾಕದೆ ಹೊರ ಹೋಗಿ ನಮ್ಮ ಮತ್ತು ಜನರ ಜೀವವನ್ನು ಸಂಕಷ್ಟಕ್ಕೆ ಸಿಲುಕಿಸುವ ಗೊಡುವಿಗೆ ಹೊಗಬಾರದೆಂಬುದನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಸಾರಿದೆ. ನಮ್ಮ ನಾಡು, ನಮ್ಮ ಜನರ ರಕ್ಷಣೆಗೆ ವೈದ್ಯರು, ಪೋಲಿಸ್ ಸಿಬ್ಬಂದಿಗಳು, ಕಾರ್ಯಕರ್ತರು, ಸ್ವಯಂ ಸೇವಕರು ಹೀಗೆ ಅದೆಷ್ಟೋ ಸಂಘ ಸಂಸ್ಥೆಗಳು ಹಗಲು ರಾತ್ರಿಯನ್ನದೆ ಸೇವೆಯಲ್ಲಿ ನಿರತರಾದವರಿಗೆ ನಾವು ಕೈ ಜೋಡಿಸಬೇಕಿದೆ ರೋಗಗಳನ್ನು ಓಡಿಸಲು ಎಲ್ಲರು ಸರ್ಕಾರದ ನಿಯಮಗಳಿಗೆ ಬದ್ಧರಾಗಬೇಕಿದೆ. ಕಿರುಚಿತ್ರಕ್ಕೊಂದು ನನ್ನ ನಮನ.

 -ಶಿವರಾಜ್ ಎಂ.ಕೆ ಪತ್ರಿಕೋದ್ಯಮ ಎಸ್ಡಿಎಮ್ ಕಾಲೇಜು ಉಜಿರೆ

Leave a Reply

Your email address will not be published. Required fields are marked *

You May Also Like

ಸೇವಾಭಾಯಾ ಮಾಲಾಧಾರಿತ ಬಂಜಾರಾ ಪಡೆ ಭಾಯಾಗಡದತ್ತ ಪಯಣ

ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ…

ಪಾನ ನಿಷೇಧ ಒಂದು ವಿಶ್ಲೇಷಣೆ

ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ಬಗ್ಗೆ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ಮಿಟ್ಟಲಕೊಡ ಅವರ ವಿಶ್ಲೇಷಣೆ ಇಲ್ಲಿದೆ…

ಕೊರೋನಾ ಕಾವ್ಯ-2

ಶಿಕ್ಷಕಿ ಶಿಲ್ಪಾ ಮ್ಯಾಗೇರಿ. ಹವ್ಯಾಸ ಬರಹದ ಮೂಲಕ ಕಾವ್ಯ ಕಟ್ಟುವ ಕಸೂತಿಯನ್ನು ಕರಗತ ಮಾಡಿಕೊಂಡ ಶಿಕ್ಷಕಿ ಶಿಲ್ಪಾ ಎಮ್.ಎ, ಬಿಇಡಿ ಪದವಿ ಪಡೆದಿದ್ದಾರೆ. ಇವರು ಭಾರತಾಂಬೆ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮಾತು ಮೌನದ ನಡುವೆ ಕವನ ಸಂಕಲನ ಹಾಗೂ ಆಕಾಶಕ್ಕೊಂದು ಏಣಿ ಚುಟುಕು ಸಂಕಲನ ಇವರ ಇನ್ನೆರಡು ಸಂಕಲನಗಳು. ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಸಂತ್ರಸ್ತರಿಗೆ ನ್ಯಾಯ ದೊರಕುವುದೇ…?

ನೌಶಾದ್ ಜನ್ನತ್ತ ಮೂಲತಃ ಕೊಡಗಿನವರು. ನೆರೆ ಸಂದರ್ಭದಿಂದ ಈವರೆಗೆ ಕೊಡುಗಿನ ನೋವಿಗೆ ತಮ್ಮ ತಂಡದೊಂದಿದೆ ಧ್ವನಿಯಾಗುತ್ತಿದ್ದಾರೆ. ನೌಶಾದ್ ಬರೆದ ಸಂತ್ರಸ್ತರಿಗೆ ನ್ಯಾಯ ದೊರಕುವುದೇ..? ಎನ್ನುವ ಲೇಖನ ನಿಮ್ಮ ಉತ್ತರಪ್ರಭದ, ಉತ್ತರ ವಿಶೇಷದಲ್ಲಿ….