ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ ಪುಣ್ಯ ಕ್ಷೇತ್ರ ಭಾಯಾಗಡ ಸೂರಗೊಂಡನಕೊಪ್ಪ ದತ್ತ ಬಸವನ ಬಾಗೇವಾಡಿ ಹಾಗು ನಿಡಗುಂದಿ ತಾಲೂಕಿನ ಬಂಜಾರಾ ಸಮಾಜದ ಕುಲ ಬಾಂಧವರ ಪಡೆ ಭಾನುವಾರ ರಾತ್ರಿ ಪಯಣ ಬೆಳೆಸಿತು.

I


ಬಂಜಾರಾ ಸಮಾಜದ ಆರಾಧ್ಯ ಕುಲದೇವರಾದ ಸಂತ ಸೇವಾಲಾಲ್ ಅವರ 283 ನೇ ಜಯಂತಿ ಅಂಗವಾಗಿ ಸೇವಾಲಾಲ್ ದೇವರ ದರ್ಶನ ಪಡೆದು ಪುನೀತ್ ಭಾವ ತಾಳಲು ಸೂರಗೊಂಡನಕೊಪ್ಪ ಕಡೆಗೆ ಅಸಂಖ್ಯ ಭಕ್ತರು ಪ್ರಯಾಣ ಬೆಳೆಸಿದರು.


ಅತ್ತ ತೆರಳುವ ಮುನ್ನ ಈ ಭಾಗದ ರೊಳ್ಳಿ, ಗಣಿ,ಚಿಮ್ಮಲಗಿ, ಬೇನಾಳ,ಆಲಮಟ್ಟಿ, ನಿಡಗುಂದಿ ತಾಂಡಾದ ಬಂಜಾರಾ ಸಮಾಜದ ಅಪಾರ ಸೇವಾಲಾಲ್ ಭಕ್ತರು ಮಾಲೆ ಧರಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದು ಭಕ್ತಿ ಸಮಪಿ೯ಸಿದರು. ತಮ್ಮ ತಮ್ಮ ತಾಂಡಾಗಳಲ್ಲಿ ಐದು ದಿನಗಳ ಕಾಲ ಸೇವಾಲಾಲರ ಪೂಜೆ, ಪುರಸ್ಕಾರ, ಧಾಮಿ೯ಕ ಕೈಂಕರ್ಯ ಕೈಗೊಂಡರು. ಮರಿಯಮ್ಮನ ಗುಡಿ, ಸೇವಾಲಾಲರ ದೇಗುಲದಲ್ಲಿ ಶೃದ್ಧಾಪೂರ್ವಕ ಭಕ್ತಿಯಲ್ಲಿ ಲೀನರಾಗಿ ಪೂಜೆ ಸಲ್ಲಿಸಿದರು.
ಈ ಭಾಗದ ಬಂಜಾರಾ ಭಕ್ತರು ಬಾಗಲಕೋಟೆ ಬಳಿಯ ಶಿರೂರು ತಾಂಡಾಕ್ಕೆ ತೆರಳಿ ಸಮಾಜದ ಕುಮಾರ ಭಗತ್ ಮಹಾರಾಜರಿಂದ ಮಾಲೆ ಧರಿಸಿಕೊಂಡು ಬರುವ ಸಂಪ್ರದಾಯ ಇದೆ. ಆ ಹಿನ್ನೆಲೆಯಲ್ಲಿ ಬಂಜಾರಾ ಭಕ್ತರು ಸೇವಾಲಾಲ್ ಅವರ ಹೆಸರಿನಲ್ಲಿ ಕುಮಾರ ಭಗತ ಅವರಿಂದ ಮಾಲಾಧಾರಿಗಳಾಗಿ ಆರಾಧನಾ ಮಹೋತ್ಸವದಲ್ಲಿ ತನ್ಮಯರಾಗಿ ಭಕ್ತಿಭಾವ ಅಪಿ೯ಸುತ್ತಾರೆ. ಹರಕೆ ಹೊತ್ತ ಭಕ್ತಾದಿಗಳು ಭಯ,ಭಕ್ತಿಯಿಂದ ಸೇವಾಲಾಲ್ ಅವರನ್ನು ತಮ್ಮ ಹೃದಯ ಹಂದರದಲ್ಲಿ ಆರಾಧಿಸಿ ದೈವ ಸಂಕಲ್ಪ ಕಾಣುತ್ತಾರೆ. ವಿಶೇಷ ಆಧ್ಯಾತ್ಮಿಕ ರಂಗದಲ್ಲಿ ಮಿನುಗಿ ಬಂಜಾರಾ ಸಮಾಜದ ಈ ಮಹಾ ಗುರುವಿನ ಸ್ಮರಣೆ ಪ್ರಾಂಜಲ್ಯ ಮನದಿಂದ ಮಾಡುತ್ತಾರೆ. ಮಾರೋ ಭಾಯಾ ಸೇವಾಭಾಯಾ ಅಂತ ಜಯಘೋಷ ಮೊಳಗಿಸಿ ಧನ್ಯತೆ ಮೆರೆಯುತ್ತಾರೆ.
ಸಚಿನ ರಾಠೋಡ, ಅನಿಲ ರಾಠೋಡ, ಮುತ್ತುರಾಜ ಚವ್ಹಾಣ, ಕಾತಿ೯ಕ ರಾಠೋಡ,ರೋಹಿತ ಲಮಾಣಿ, ಸುಪ್ರೀತ ನಾಯಕ, ಸಂಪದ ರಾಠೋಡ, ರವಿ ಲಮಾಣಿ ಸೇರಿದಂತೆ ಬಂಜಾರಾ ಸಮಾಜದ ಅನೇಕ ಯುವಕರ ಪಡೆ ಅತ್ಯೋತ್ಸಾಹದಿಂದ ಮಾಲಾಧಾರಣೆ ಧರಿಸುವುದರೊಂದಿಗೆ ಭಾನುವಾರ ರಾತ್ರಿ ಸೂರಗೊಂಡನಕೊಪ್ಪ ಕಡೆಗೆ ತೆರಳಿದರು. ಅಪಾರ ಸಂಖ್ಯೆಯ ಬಂಜಾರಾ ಸಮಾಜದ ಬಂಧುಗಳು ಸೇವಾಲಾಲ್ ಅವರ ಸನ್ನಿಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪಾವನಭಾವದಿಂದ ನೆಮ್ಮದಿ ಕಂಡುಕೊಳ್ಳುತ್ತಾರೆ.

Leave a Reply

Your email address will not be published. Required fields are marked *

You May Also Like

ಅಧಿಕಾರಿಗಳ ಆತುರ: ನರೆಗಲ್ಲನಲ್ಲಿ ಅನಾಥವಾದ ಉದ್ಯಾನವನ..!

ಗದಗ ಜಿಲ್ಲೆಯ ನರೇಗಲ್ಲ ನಲ್ಲಿ ಅಧಿಕಾರಿಗಳ ಆತುರದ ನಿರ್ಧಾರದಿಂದ ಉದ್ಯಾನವನ ಇದ್ದು ಇಲ್ಲದಂತಾಗಿದೆ.

ಎಷ್ಟು ಜನರಿಗೆ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ..?

ಆಂದ್ರಪ್ರದೇಶ: ಲಾಕ್ ಡೌನ್ ಹಿನ್ನೆಲೆ ಎಲ್ಲ ದೇವಸ್ಥಾನಗಳು ಬಂದ್ ಆಗಿದ್ದವು. ಇದರಿಂದ ಭಕ್ತರಿಗೆ ಒಂದು ಚಿಂತೆಯಾದರೆ,…

ಗಂಡನ ಮನೆಗೆ ಬರುವುದಿಲ್ಲ ಎಂದ ಪತ್ನಿಗೆ ಪತಿ ಮಾಡಿದ್ದೇನು?

ಹಗರಿಬೊಮ್ಮನಹಳ್ಳಿ : ಮನೆಗೆ ಬಾರದ ಪತ್ನಿಯನ್ನು ಕೊಲೆ ಮಾಡಿದ ಪತಿ, ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ಕ್ವಾರಂಟೈನಲ್ಲಿ ಮೊಬೈಲ್ ಸ್ವಿಚ್ ಆಫ್: ಮುಂಡರಗಿಯಲ್ಲಿ 2 ವರ್ಷದ ಮಗುವಿಗೆ ನೋಟಿಸ್!

ಹೋಂ ಕ್ವಾರಂಟೈನ್ನಲ್ಲಿರುವಾಗ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಶಿಕ್ಷಾರ್ಹ. ಮತ್ತೆ ಹೀಗೆ ಮಾಡಬೇಡಿ ಎಂಬ ತಹಸೀಲ್ದಾರ್ ಸೂಚನೆ ಸರಿಯಾಗಿಯೇ ಇದೆ. ಆದರೆ ಅದನ್ನು 2 ವರ್ಷದ ಮಗುವಿನ ಹೆಸರಿಗೆ ಕಳುಹಿಸಿದ್ದಾರೆ.