ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ದೇಶದಲ್ಲಿ ಸ್ವಾತಂತ್ರ ಬಂದ ಕೆಲವು ವರ್ಷಗಳ ಕಾಲ ಪಾನ ಪ್ರತಿಬಂಧ ಜಾರಿಯಲ್ಲಿತ್ತು. ನಂತರ ಪಾನ ಪ್ರತಿಬಂಧವನ್ನು ತೆಗೆದು ಹಾಕಿ ಸಾರಾಯಿ ಮಾರಾಟವನ್ನು ಸರಕಾರ ಪ್ರಾರಂಭಿಸಿತು.

ಈಗ ಗುಜರಾತ್ ಮತ್ತು ಇನ್ನೂ ಮೂರು ರಾಜ್ಯಗಳಲ್ಲಿ ಮಾತ್ರ ಪಾನ ನಿಷೇಧ ಜಾರಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಚಂದ್ರ ಬಾಬು ನಾಯ್ಡು ಸರಕಾರ ಪಾನ ಪ್ರತಿಬಂಧ 1994ರಲ್ಲಿ ಜಾರಿ ಮಾಡಿ 1997 ರಲ್ಲಿ ಪಾನ ಪ್ರತಿಬಂಧ ತೆಗೆದು ಹಾಕಿತು. ಸಂವಿಧಾನದ ರಾಜ್ಯನೀತಿಯ ನಿರ್ದೇಶಕ ತತ್ವಗಳ ಪ್ರಕಾರ ಪಾನ ಪ್ರತಿಬಂಧವನ್ನ ರಾಜ್ಯ ಸರಕಾರಗಳು ಜಾರಿ ಮಾಡಬೇಕು (ಸಂವಿಧಾನದ ಅನುಚ್ಚೆದ 47) ಆದರೆ ಈವರೆಗೂ ಆಳಿದ ಯಾವುದೇ ಪಕ್ಷಗಳ ಸರಕಾರಗಳೂ ಈ ಪಾನ ಪ್ರತಿಬಂಧ ಮಾಡುವ ನೀತಿಯನ್ನು ಗಂಭೀರವಾಗಿ ಪರಿ ಗಣಿಸಿಲ್ಲ. ಮದ್ಯ ಮಾರಾಟ ಒಂದು ಸರಕಾರದ ಆದಾಯ ಮೂಲ ಎಂದು ಪರಿಗಣಿಸದ ಕಾಲದಲ್ಲಿ ಪಾನ ಪ್ರತಿಬಂಧ ಜಾರಿ ಸುಲಭವಾಗಿತ್ತು. ಆದರೆ ಅದನ್ನು ಮಾಡಲಿಲ್ಲ. ಈ ಬಗ್ಗೆ ಸಾಮಾಜಿಕ ಕಳಕಳಿಯಿಂದ ಯಾವದೇ ಸಂಘಟನೆ ಗಂಭೀರ  ಕಾನೂನು ಅಥವಾ ಸಾಮಾಜಿಕ ಹೋರಾಟ ಮಾಡಿಲ್ಲ. ಇಂದು ಚುನಾಯಿತ ಪ್ರಜಾ ಸರಕಾರ ಮಧ್ಯ ಮಾರಾಟವೂ ಒಂದು ದೊಡ್ಡ ಆದಾಯದ ಮೂಲ ಎಂದು ಪರಿಗಣಿಸಿದೆ. ಕುಡುಕರ ಕೂಗು ಸರಕಾರಕ್ಕೆ ಬೇಗ ತಲುಪುವ ಹಂತ ಮುಟ್ಟಿದೆ. ಸಾರಾಯಿಯಿಂದ ಸಂಸಾರ ಹಾಳಾಗುತ್ತದೆ ಎನ್ನುತ್ತಿದ್ದರು ಮೊದಲು. ಈಗ ಸಾರಾಯಿ ಇಲ್ಲದೇ ಕುಡುಕರು ಸಾಯುತ್ತಾರೆ. ಆಂಧ್ರದಲ್ಲಿ ಸಾರಾಯಿ ನಿಷೇಧ ಮಾಡಿದಾಗ ಅಲ್ಲಿಯ ಕರ್ನಾಟಕ ಗಡಿಭಾಗ ಗಂಡಸರು ಕರ್ನಾಟಕದಲ್ಲಿ ಸಾರಾಯಿ ಕುಡಿಯಲು ಬರುತ್ತಿದ್ದರು. ಇದನ್ನು ನೋಡಿ ಅಲ್ಲಿಯ ಹೆಂಗಸರು ತಮ್ಮ ಗಂಡಂದಿರು ರಾತ್ರಿ ಮನೆಗೆ ಬಾರದೆ ಕರ್ನಾಟದಲ್ಲಿ ಕುಡಿದು ಬೀಳುತ್ತಾರೆ ಆದ ಕಾರಣ ಪಾನಪ್ರತಿಬಂಧ ತೆರವು ಮಾಡಲು ಕೇಳಿದರು.

ಈಗ ರಾಜಕಾರಣಿಗಳಿಗೆ ಕುಡುಕರ ಮತಗಳು ಬಹುಮುಖ್ಯ. ಚುನಾವಣೆಯಲ್ಲಿ ಹೆಂಡ ಹಣ ಹೇಗೆ ಕೆಲಸ ಮಾಡುತ್ತವೆ ಎನ್ನುವದು ಸರ್ವವೇದ್ಯ.ಇದು ಸಾಮಾಜಿಕ, ಸ್ವಾಸ್ಥ ಹಾಳು ಮಾಡುವ ಹವ್ಯಾಸ. ಇದರಿಂದ ಸರಕಾರ ಹಣ ಮಾಡಿಕೊಳ್ಳುವುದು ರಾಜಧರ್ಮ ಆಗದು. ಕುಡುಕರ ಮತಗಳೂ  ಮತ್ತು ರಾಜ್ಯದ ಬೊಕ್ಕಸಕ್ಕೆ ಆದಾಯವೂ ಮುಖ್ಯ ಎನ್ನುವ ರಾಜಕೀಯ. ಕುಡುಕರ ಕಾಟ ದಿಂದ ತೊಂದರೆಗೊಳಗಾಗುವ ಸಮಾಜದ ಗೋಳು ಇವುಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ ಇಂತಹ ಗಂಭೀರವಾದ ವಿಷಯವನ್ನು ಎಲ್ಲ ರಾಜಕೀಯ ಪಕ್ಷಗಳು ರಾಜಧರ್ಮ ಪಾಲಿಸುವ ದಿಕ್ಕಿನಲ್ಲಿ ಸಮಾಲೋಚಿಸಿ ಒಂದು ಪರಿಹಾರ ಕಂಡುಕೊಳ್ಳಬೇಕು.

ಎಸ್.ಎಚ್.ಮಿಟ್ಟಲಕೊಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಧಾರವಾಡ

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ನಿಂದಾಗಿ ಹಣ ಕಳೆದುಕೊಂಡವರಿಗೆ ಸಿಕ್ಕ ನೆಮ್ಮದಿ!

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ರೂ. 10 ಸಾವಿರಗಳನ್ನು ಹಿಂದಿರುಗಿಸುವ ಮೂಲಕ…

ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ಮದುವೆ : ಕೋವಿಡ್ ನಿಯಮಕ್ಕೆ ಡೋಂಟ್ ಕೇರ್..!!

ಹರಪನಹಳ್ಳಿ: ಕೊರೊನಾ ಹಿನ್ನೆಲೆ ಲಾಕ್ ಡೌನ್ ಸಡಿಲಿಸಿದರೂ ಸಾಕಷ್ಟು ಕಟ್ಟುನಿಟ್ಟಿನ ನಿಯಮ ಸರ್ಕಾರ ಸೂಚಿಸಿದೆ. ಆದರೆ…

ಕೃಷ್ಣಾ ಯೋಜನೆ ಜೆಡಿಎಸ್ ಪಾಲು ಶೂನ್ಯ- ಮೊಯ್ಲಿ ಟೀಕೆ

ಉತ್ತರಪ್ರಭಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಕೆಲಸ ಕಾರ್ಯ ಕಾಮಗಾರಿಗಳು ಸಮರ್ಪಕವಾಗಿ, ನಿದಿ೯ಷ್ಟವಾಗಿ ನಡೆಯುತ್ತಿಲ್ಲ. ಅದರಲ್ಲೂ…

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 164. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 2605 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 3248 ಸಕ್ರೀಯ ಪ್ರಕರಣಗಳಿವೆ.