ಬೆಂಗಳೂರು: 2021-22ನೇ ಸಾಲಿನ ಆಯವ್ಯಯದಲ್ಲಿ ಕಾಲೇಜುಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಉನ್ನತೀಕರಿಸಲು ಹಾಗೂ ನೀರಿನ ಸಂಪರ್ಕ ಒದಗಿಸಲು ಮುಂದಿನ ಎರಡು ವರ್ಷಗಳಲ್ಲಿ 100 ಕೋಟಿ ರೂಗಳನ್ನು ಮೀಸಲಿಡುವುದಾಗಿ ಘೋಷಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ರಾಜ್ಯ ವಲಯ ಮುಂದುವರಿದ ಕಾರ್ಯಕ್ರಮಗಳ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗಾಗಿ ರೂ 3500 ಲಕ್ಷಗಳು ನಿಗದಿಯಾಗಿರುತ್ತದೆ. ಈ ಸಂಬಂಧ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸುವುದು ತುರ್ತು ಅಗತ್ಯತೆ ಇರುತ್ತದೆ. ಈ ಕಾರ್ಯಕ್ರಮವನ್ನು ಹೆಚ್ಚು ಶಾಲೆಗೆ ವಿಸ್ತರಿಸುವುದರ ಮೂಲಕ ಗರಿಷ್ಠ ಪ್ರಮಾಣದ ಶಾಲೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುದಾನವನ್ನು ಒಗ್ಗೂಡಿಸುವಿಕೆಯ ಮೂಲಕ ಅನುಷ್ಠಾನ ಗೊಳಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕ್ರಿಯಾ ಯೋಜನೆಯನ್ನು ತಯಾರಿಸಿ ನಿಗದಿತ ಆವಧಿಯೊಳಗೆ ಈ ಕಛೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಷರತ್ತುಗಳು

  1. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಬಳಸಲು ಯೋಗ್ಯವಿಲ್ಲದ ಹಾಗೂ ದುರಸ್ತಿ ಪಡಿಸಲು ಸಾಧ್ಯವಿಲ್ಲದ ಶೌಚಾಲಯಗಳನ್ನು ಗುರುತಿಸಿ ಆಧ್ಯತೆಯ ಮೇರೆಗೆ ತೆಗೆದುಕೊಳ್ಳುವುದು.
    ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಕೊರತೆ ಇದ್ದಲ್ಲಿ ಇದನ್ನು ಪರಿಗಣಿಸಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸತಕ್ಕದ್ದು.
  2. ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಶೌಚಾಲಯಗಳ ಕೊರತೆ ಇದ್ದಲ್ಲಿ ಅಂತಹ ಶಾಲೆಗಳನ್ನು ಆದ್ಯತೆ ಮೇಲೆ ಪರಿಗಣಿಸುವುದು.

3, ವಿಕಲಚೇತನ ಮಕ್ಕಳು ದಾಖಲಾಗಿರುವ ಶಾಲೆಗಳಲ್ಲಿ ಅವರ ಬಳಕೆಗೆ ವಿಶೇಷಸೌತಶತಿಲ್ಲದೇ ಇದ್ದಲ್ಲಿ , ವಿಶೇಷ ಶೌಚಾಲಯವನ್ನು ನಿರ್ಮಿಸಲು ಕ್ರಿಯಾಯೋಜನೆಯಲ್ಲಿ ಪರಿಗಣಿಸುವುದು.

4, 2017-18ರಿಂದ 2020-21 ನೇ ಸಾಲಿನವರೆಗೂ ಮಹಾತ್ಮ ಗಾಂಧಿ ನರೇಗಾ ಮತ್ತು ಇತರೆ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾದ ಶಾಲೆಗಳನ್ನು ಪುನಃ ಶೌಚಾಲಯ ನಿರ್ಮಾಣಕ್ಕೆ ಪರಿಗಣಿಸತಕ್ಕದ್ದಲ್ಲ.

5, ಶಾಲೆಗಳನ್ನು ಗುರುತಿಸುವಾಗ ಖಾಸಗಿ / ವಿವಾದಿತ ಸ್ಥಳಗಳನ್ನು – ಜಮೀನುಗಳ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಸ್ಥಳವನ್ನು ಯಾವುದೇ ಕಾರಣಕ್ಕೂ ಪರಿಗಣಿಸತಕ್ಕದ್ದಲ್ಲ.

6, ಉದ್ದೇಶಿತ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುದಾನದ ಒಗ್ಗೂಡಿಸುವಿಕೆಯ ಮೂಲಕ ಅನುಷ್ಠಾನಗೊಳಿಸುತ್ತಿರುವುದರಿಂದ ನರೇಗಾ ಯೋಜನೆಯ ಕೂಲಿ ವೆಚ್ಚ, ಸಾಮಗ್ರಿ ವೆಚ್ಚ ಮತ್ತು ಇಲಾಖೆಯ ಅನುದಾನದಿಂದ ಭರಿಸುವ ವಿವರಗಳಿಗೆ ಸಂಬಂಧಿಸಿದ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸುವುದು.
ಕ್ರಿಯಾ ಯೋಜನೆ ಅಂತಿಮಗೊಳಿಸಿ ಸರ್ಕಾರದಿಂದ ಅನುಮೋದನೆ ನಂತರ ಬದಲಾವಣೆಗೆ ಅವಕಾಶವಿರುವುದಿಲ್ಲ.

7, ಮೇಲಿನ ಕಾಮಗಾರಿ ಗುಚ್ಚಗಳ (Shelf of plan) ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ದೃಢೀಕರಣ ಮತ್ತು ಉಪನಿರ್ದೇಶಕರು ( ಆಡಳಿತ ) ದೃಢೀಕರಣದೊಂದಿಗೆ ಜೂನ್ 20 ರೊಳಗೆ ಈ ಕಛೇರಿಗೆ ಸಲ್ಲಿಸುವುದು.

8, ಕ್ರಿಯಾ ಯೋಜನೆ ಸಲ್ಲಿಸುವ ನಮೂನೆಯು ಇದರೊಂದಿಗೆ ಲಗತ್ತಿಸಿದೆ, ವಿವರಗಳನ್ನು ಯುನಿಕೋಡ್‌ನಲ್ಲಿ ದಾಖಲಿಸಿ ಸಲ್ಲಿಸುವುದು ಮತ್ತು ಶಾಲೆಯ ಡೈಸ್ ಕೋಡ್ ಸಂಖ್ಯೆಯನ್ನು ತಪ್ಪಿಲ್ಲದಂತೆ ನಿಖರವಾಗಿ ದಾಖಲಿಸುವುದು.

9, ಮೂಲಭೂತ ಸೌಲಭ್ಯ ಕೊರತೆಯನ್ನಾಧರಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವುದು.

10, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನಿಗದಿಯಾಗಿರುವ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಿರುವ ಅನುದಾನದ ವಿವರವುಳ್ಳ ಪಟ್ಟಿಯನ್ನು ಅನುಬಂಧದಲ್ಲಿ ಲಗತ್ತಿಸಿದೆ. ಈ ಮೊತ್ತಕ್ಕೆ ಅನುಗುಣವಾಗಿ ಆದ್ಯತೆ ಅನುಸಾರ ಕ್ರಿಯಾ ಯೋಜನೆಯನ್ನು ತಯಾರಿಸಿ ನಿಮ್ಮ ವಿಭಾಗದ ಎಲ್ಲಾ ಜಿಲ್ಲೆಗಳ ಮಾಹಿತಿಯನ್ನು ಕ್ರೋಢೀಕರಿಸಿ ಸಲ್ಲಿಸುವದು.

11, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡದ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆ ಅನುಷ್ಠಾನ ವ್ಯಾಪ್ತಿಗೆ ಒಳಪಡದೇ ಇರುವ ಪಟ್ಟಣ ಪಂಚಾಯಿತಿ, ಪುರಸಭೆ ನಗರ ಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿನ ಶಾಲೆಗಳಿಗೆ ಮೇಲ್ಕಂಡ ಸೌಲಭ್ಯ ಅಗತ್ಯತೆ ಇದ್ದಲ್ಲಿ ಪ್ರತ್ಯೇಕ ಪಟ್ಟಿಯನ್ನು ಒದಗಿಸುವುದು ಹಾಗೂ ಈ ಪ್ರಸ್ತಾವನೆಯು ಜಿಲ್ಲೆಗೆ ನಿಗದಿಪಡಿಸಿರುವ ಒಟ್ಟು ಅನುದಾನಕ್ಕೆ ಸೀಮಿತಗೊಂಡಿರಬೇಕು .

Leave a Reply

Your email address will not be published.

You May Also Like

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!

ಗದಗ ಜಿಲ್ಲೆಯಲ್ಲಿ ಅಂಗನವಾಡಿ ಅಕ್ಕಂದಿರ 3 ತಿಂಗಳ ಸಂಬಳಕ್ಕೂ ಲಾಕ್ಡೌನ್!: ಬೆಂಗಳೂರಿಂದ ಪಾಸ್ ವರ್ಡ್ ತಂದರೆ ಲಾಕ್ ಓಪನ್!

ಖಾಲಿ-ಪೀಲಿ ತಾಂತ್ರಿಕ ನೆಪ ಹೇಳುತ್ತಿರುವ ಅಧಿಕಾರಿಗಳು ತಮ್ಮ ಸೋಮಾರಿತನ, ನಿರ್ಲ್ಯಕ್ಷದ ಕಾರಣದಿಂದ ಮುಂಡರಗಿ ತಾಲೂಕಿನ ಅಂಗನವಾಡಿ ಅಕ್ಕಂದಿರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿಂದು 36 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಮತ್ತೆ 36 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಹಳೆ ವಿದ್ಯಾರ್ಥಿಯಿಂದ ಸರಕಾರಿ ಶಾಲೆಗೆ ಆರ್ಥಿಕ ಸಹಾಯ

ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಉಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಮಹಾಂತೇಶ ಜಕ್ಕಲಿ ಹೇಳಿದರು.