ಗದಗ: ಕೋವಿಡ್ 19 ಮಾರ್ಗಸೂಚಿಗಳನ್ನು ಹಾಗೂ ಕಾನೂನು ಉಲ್ಲಂಘನೆ ಮಾಡಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ 15 ಜನ ಆರೋಪಿತರಿಗಳನ್ನು ಬಂಧಿಸಿ , ಅವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿ, ಬಂಧಿತರಿಂದ 66400 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಈ ಎಲ್ಲ ಪ್ರಕರಣಗಳು ಗದಗ ಜಿಲ್ಲೆಯ ಗ್ರಾಮೀಣ, ಲಕ್ಷ್ಮೀಶ್ವರ, ಗಜೇಂದ್ರಗಡ, ಶಿರಹಟ್ಟಿ , ಬೆಟಗೇರಿ, ಮುಂಡರಗಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಈ ಬಗ್ಗೆ ಜಿಲ್ಲೆಯಲ್ಲಿ ಬರುವ ದಿನಗಳಲ್ಲಿಯೂ ಸಹ ಈ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ಮೇಲೆ ನಿಗಾವಹಿಸಿ ಸೂಕ್ತ ಕ್ರಮ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

You May Also Like

ಯುವಕರಲ್ಲಿ ಆತ್ಮಸ್ಥೈರ್ಯ ಕುಗ್ಗಿಸಿದ ಬಿಜೆಪಿ : ರಾಮಕೃಷ್ಣ ದೊಡ್ಡಮನಿ

ಈಗಿನ ಯುವಕರಲ್ಲಿ ಆತ್ಮಸ್ಥೆರ್ಯ ಕುಗ್ಗಿಹೋಗಿದೆ. ಅವರಲ್ಲಿ ಆತ್ಮಸ್ಥೆರ್ಯ ತುಂಬಿದರೆ ನೀರುದ್ಯೋಗದ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ಬಿಜೆಪಿಯವರು ಇವು ಯಾವುದೆ ಕೆಲಸ ಮಾಡಿಲ್ಲ ಅನೇಕ ಯುವಕರು ನೀರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಎದುರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಗದಗ ಜಿಲ್ಲೆಯ ಹಳ್ಳಿ ಗಳಲ್ಲಿ ಕೊರೊನಾ ಭಯ..!: ಗುಟಕಾ, ಸಿಗರೇಟ್ ಮಾರಿದ್ರೆ ದಂಡ ಗ್ಯಾರಂಟಿ..!

ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ.…

ಜಿಲ್ಲೆಯಲ್ಲಿಂದು 6 ಪಾಸಿಟಿವ್, ಎರಡಂಕಿ ತಲುಪಿದ ಸಾವಿನ ಸಂಖ್ಯೆ: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ಸೋಮವಾರ ದಿ.13 ರಂದು 6 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ. ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ನಿವಾಸಿ 26 ವರ್ಷದ ಪುರುಷ ಪಿ-38890 ಸೋಂಕು ದೃಢಪಟ್ಟಿದ್ದು ಸೋಂಕು ತಗುಲಿರುವ ಕುರಿತು ಪತ್ತೆ ಕಾರ್ಯ ನಡೆದಿದೆ.

ನಾಳೆ ನಡೆಯುವ ಜನಸಂಪರ್ಕ ಯಾತ್ರೆಗೆ ಬಿಎಸ್‌ವೈ, ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಅನೇಕ…