ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಇಂಧನ ದರ ಏರಿಕೆ ಆರಂಭಗೊAಡಿದೆ. ಯಾವುದೇ ಚುನಾವಣೆ ನಂತರ ಇಂಧನ ಬೆಲೆ ಏರಿಸುವದು ಸಾಮಾನ್ಯ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿವೆ.

ಇತ್ತೀಚೆಗೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮೇ.02ರಂದು ಹೊರಬಿದ್ದಿದೆ. ಸೋಲು-ಗೆಲುವು ನಿರ್ಧಾರಗೊಡ ಬಳಿಕ ಇದೀಗ ಇಲ್ಲಿಯವರೆಗೆ ಸುಮಾರು ಹದಿನೈದು ಬಾರಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ ಮತ್ತು ಏರಿಕೆ ಆಗುಯಾಗುತ್ತಿದೆ. ದೇಶದಲ್ಲಿ ಪೆಟ್ರೋಲ್ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಜನರು ದರ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ದೇಶದಲ್ಲಿ ಸಾಮಾನ್ಯ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟುತ್ತಿದೆ, ಇನ್ನು ಪ್ರೀಮಿಯಂ ಪೆಟ್ರೋಲ್ ದರ ಈಗಾಗಲೇ ಕೆಲವು ರಾಜ್ಯಗಳಲ್ಲಿ 100 ರೂ. ಗಡಿ ದಾಟಿದೆ. ಇತ್ತ ಡೀಸೆಲ್ ದರವೂ ಎಲ್ಲಾ ನಗರಗಳಲ್ಲಿ ಗರಿಷ್ಠವಾಗಿದೆ. ಜನರು ದರ ಏರಿಕೆಯಿಂದ ಕಂಗಾಲಾಗಿದ್ದರೆ.

ಪ್ರಧಾನಿಗಳು, ಇಂಧನ ಬೆಲೆ ಹೆಚ್ಚಳಕ್ಕೆ ಹಿಂದಿನ ಸರಕಾರಗಳ ಮೇಲೆ ಹಾಕುತ್ತಿದ್ದಾರೆ. ಈ ಹಿಂದಿನ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ಭಾರತ ತೈಲ ಸ್ವಾವಲಂಬಿ ದೇಶವಾಗುತ್ತಿತ್ತು. ಎನ್ನುತ್ತಿದ್ದಾರೆ. ಹೇಗೆ ಸ್ವಾವಲಂಭಿ ಆಗುತ್ತಿತ್ತು. ಎಂದು ವಿವರಿಸಿಲ್ಲ. ಆದರೆ ಇಂಧನದಲ್ಲಿ ಭಾರತ ಸ್ವಾವಲಂಭನೆ ಯಾವಾಗ ಸಾಧಿಸುತ್ತದೆ. ಎಂಬುದು ಕಾಲವೆ ನಿರ್ಧರಿಸುತ್ತದೆ.

ಇಂಧನ ದರ ಏರಿಕೆಗೆ ಕಾರಣಗಳು:
ಇಂಧನ ದರ ಏರಿಕೆಗೆ ಕಾರಣಗಳೂ ಕೂಡಾ ಬೇರೆ ಬೇರೆಯೇ ಇದೆ. ಇದಕ್ಕೆ ಆಮದೂ ಕಾರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ಕೂಡಾ ಕಾರಣ. ಇದರ ಜೊತೆ ಜೊತೆ ಸರಕಾರದ ತೆರಿಗೆ. ಈ ತೆರಿಗೆಯು ಈಗಿನ ಎಲ್ಲಾ ಕಾರಣಗಳಿಗಿಂತ ಪ್ರಮುಖ ಕಾರಣವಾಗಿದೆ.
ಇಂಧನ ಬೆಲೆ ಹೆಚ್ಚಳ ವಾಗಬೇಕಾದರೆ ಪ್ರಮುಖವಾಗಿ ಎರಡು ಕಾರಣಗಳು ಪ್ರಮುಖವಾಗಿರುತ್ತವೆ. ಒಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಹೆಚ್ಚಾಗಿರಬೇಕು. ಇಲ್ಲ, ರೂಪಾಯಿ ಎದುರು ಡಾಲರ್ ಪ್ರಭಲವಾಗಿರಬೇಕು, ಅಂದಾಗ ಇಂಧನ ಬೆಲೆ ಹೆಚ್ಚಾಗುತ್ತದೆ.ಆದರೆ
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ – ಡಾಲರ್ ದರವು ಹೆಚ್ಚು ಕಡಿಮೆ ಸ್ಥಿರವಾಗಿದೆ. ಆದರೂ ಬೆಲೆ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣ ಸಧ್ಯಕ್ಕೆ ಸರಕಾರದ ತೆರಿಗೆಗಳು.

2014 ಮತ್ತು 2021 ರ ಇಂಧನ ದರ :
ಕ್ರಿಶ 2014 ರಲ್ಲಿ ದೇಶದಲ್ಲಿ ಪೆಟ್ರೋಲ್ ಲೀಟರ್‌ಗೆ 75 ರೂಪಾಯಿಗೆ ಮಾರಾಟವಾಗುತ್ತಿತ್ತು. ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 110 ಡಾಲರ್ ಇತ್ತು. ಆದರೆ ಈಗ ಕಚ್ಚಾತೈಲದ ಬೆಲೆ ಸುಮಾರು 60 ಡಾಲರ್ ಸಮೀಪದಲ್ಲಿದೆ. ಆದರೆ ಪೆಟ್ರೋಲ್ ಬೆಲೆ 96 ರೂ. ದಾಟಿದೆ. ಕಚ್ಚಾ ತೈಲ ದರ ಕಡಿಮೆ ಇದ್ದರೂ 96 ರೂ ಯಾಕೆ ನೀಡಬೇಕಾಗಿದೆ ಎಂದರೆ,ಪೆಟ್ರೋಲ್‌ನ ಮೂಲ ಬೆಲೆಗಿಂತಲೂ ತೆರಿಗೆ ಭಾರವೇ ಜಾಸ್ತಿ ಆಗಿರುವದೇ ಕಾರಣ
ಅಂದರೆ ‘ ಕಚ್ಚಾ ತೈಲ ದರ ಏರಿಳಿತವಾದರೂ ಭಾರತದ ಪೆಟ್ರೋಲ್ ದರದಲ್ಲಿ ಏರಿಳಿತವಾಗುವದು ಶೇ.35 ರಷ್ಟು ಮಾತ್ರ. ಏಕೆಂದರೆ ತೈಲ ಕಂಪನಿಗಳು ಅಂತಾರಾಷ್ಟ್ರೀಯ ತೈಲ ಬೆಲೆಯನ್ನು ಆಧರಿಸಿಯೇ, ಇಂಧನ ಬೆಲೆಯನ್ನು ಪರಿಷ್ಕರಿಸುತ್ತವೆ. ಆದರೆ ಇಂಧನದ ಬೆಲೆ ಶೇ.40 ರಷ್ಟು ಮಾತ್ರ ಮೂಲ ಬೆಲೆ ಉಳಿದದ್ದು ಶೇ.60 ರಷ್ಟು ತೆರಿಗೆ.ಇದು ಬದಲಾಗುವುದಿಲ್ಲ.
ಸರಳವಾಗಿ ಹೇಳುವುದಾದರೆ, 100 ರೂಪಾಯಿ ಇಂಧನ ಖರೀದಿಸಿದರೆ, ಸರಕಾರಕ್ಕೆ ಪರೋಕ್ಷವಾಗಿ 60 ರೂಪಾಯಿ ತೆರಿಗೆ ಪಾವತಿಯಾಗಿರುತ್ತದೆ.
ಇನ್ನೂ ಸರಳವಾಗಿ ಹೇಳಬೇಕೆಂದರೆ, ಯಾವ ದೇಶದಿಂದ ಇಂಧನ ತರಿಸಿಕೊಳ್ಳುವೆವೊ ಅವರು ಉಚಿತವಾಗಿ ಭಾರತಕ್ಕೆ ಇಂಧನ ತಂದುಕೊಟ್ಟರೂ, ಸರಕಾರ ತೆರಿಗೆಯನ್ನು ಹಿಂದಕ್ಕೆ ಪಡೆಯದಿದ್ದರೆ ನಾವು 60 ರೂ ಹಣ ಕೊಡಲೇ ಬೇಕು. ಏಕೆಂದರೆ ಅದು ತೆರಿಗೆಯಾಗಿದೆ.

ರಾಜ್ಯದಿಂದ ರಾಜ್ಯಕ್ಕೆ ಬೆಲೆ ವ್ಯತ್ಯಾಸ:
ಇತ್ತೀಚೆಗೆ ತೆರಿಗೆಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ಕೇಂದ್ರ ಬದಲಾಯಿಸಿದ್ದು, ಹೆಚ್ಚಿನ ಪಾಲು ಕೇಂದ್ರ ಸರಕಾರಕ್ಕೆ ಸಿಕ್ಕಿದರೆ ರಾಜ್ಯಗಳ ಪಾಲು ಕಡಿಮೆಯಾಗಿದೆ.ಈ ಹಿಂದೆ ಕೇಂದ್ರ ಸರಕಾರವು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಎಕ್ಸೈಸ್ ಸುಂಕವನ್ನು ಪೆಟ್ರೋಲ್ ಮೇಲೆ ಹೆಚ್ಚಾಗಿ ಹಾಕುತ್ತಿತ್ತು. ಆದರೆ ಈಗ ಸೆಸ್‌ನ್ನು ಹೆಚ್ಚು ಹಾಕಲಾಗುತ್ತಿದೆ. ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಿಲ್ಲ.ಇದರಿAದ ಹೆಚ್ಚೆಚ್ಚು ತೆರಿಗೆ ಕೇಂದ್ರದ ಪಾಲಾಗುತ್ತಿದೆ. ರಾಜ್ಯಗಳ ಪಾಲಿಗೆ ಕಡಿಮೆ ತೆರಿಗೆ ಸಿಗುತ್ತಿದೆ.
ಇದರಿಂದ ಉಂಟಾಗುವ ನಷ್ಟವನ್ನು ತುಂಬಿಕೊಳ್ಳಲು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ಎಕ್ಸೈಸ್ ತೆರಿಗೆ ಹೇರುತ್ತಿವೆ ಇದರಿಂದ ಇಂಧನ ಬೆಲೆ ಮತ್ತೆ ಏರುತ್ತದೆ. ಈ ತೆರಿಗೆ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಬರಲಾಗುವುದರಿಂದ ಇಂಧನದ ಬೆಲೆಯೂ ಕೂಡಾ ರಾಜ್ಯದಿಂದ ರಾಜ್ಯಕ್ಕೆ ಬದಲಾಗಿರುತ್ತದೆ.

ಹಣದ ಮೌಲ್ಯ :
ಇಂಧನದ ಬೆಲೆ ಕಡಿಮೆ ಆಗಬೇಕಾದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದ ಮೌಲ್ಯ ಹೆಚ್ಚಾಗ ಬೇಕು. ಹಣದ ಮೌಲ್ಯ ಅಂದರೆ, ಹಣವು ಸರಕು ಮತ್ತು ಸೇವೆಗಳನ್ನು ಕೊಂಡುಕೊಳ್ಳುವ ಮೌಲ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಹಣದ ಮೌಲ್ಯ ನಿರ್ಧಾರವಾಗುವುದು ದೇಶದ ಆಮದು ಮತ್ತು ರಪ್ತುಗಳಿಂದ . ಆಮದು ಹೆಚ್ಚಾಗಿದ್ದು ರಪ್ತು ಕಡಿಮೆ ಇದರೆ, ಹಣದ ಮೌಲ್ಯ ಕಡಿಮೆ ಇರುತ್ತದೆ. ಅದೆ ‘ರಪ್ತು ಹೆಚ್ಚಾಗಿದ್ದು ಆಮದು ಕಡಿಮೆ ಇದ್ದರೆ ಹಣದ ಮೌಲ್ಯ ಹೆಚ್ಚಾಗಿರುತ್ತದೆ. ಅಂತರಾಷ್ಟ್ರೀಯ ಮಾರಕಟ್ಟೆಯಲ್ಲಿ ಹಣದ ಮೌಲ್ಯ ಹೆಚ್ಚಾಗಿರುವಾಗ ಇಂಧನ ಕಡಿಮೆ ದರದಲ್ಲಿ ದೊರೆಯುತ್ತದೆ.
ಅದೇ ದೇಶೀಯ ಮಾರುಕಟ್ಟೆಯಲ್ಲಿ ಹಣದ ಮೌಲ್ಯ ನಿರ್ಧಾರವಾಗುವದು ‘ಸರಕು ಸೇವೆಗಳ ಬೆಲೆಗಳಿಂದ . ಸರಕು ಸೇವೆಗಳ ಬೆಲೆಗಳು ಹೆಚ್ಚಾಗಿದ್ದಾಗ ಹಣದ ಮೌಲ್ಯ ಕಡಿಮೆ ಇರುತ್ತದೆ. ಅದೆ ಸರಕು ಸೇವೆಗಳ ಬೆಲೆಗಳು ಕಡಿಮೆ ಇದ್ದಾಗ ಹಣದ ಮೌಲ್ಯ ಹೆಚ್ಚಾಗಿರುತ್ತದೆ. ಹೀಗೆ ಬೆಲೆಗಳಿಗೂ ಮತ್ತು ಹಣದ ಮೌಲ್ಯಕ್ಕೂ ವಿರುದ್ಧ ಸಂಬAಧವಿದೆ.
ಆದ್ದರಿAದ ಇಂಧನ ಬೆಲೆಗಳಿಗೂ ಮತ್ತು ಹಣದ ಮೌಲ್ಯಕ್ಕೂ ಸಂಬoಧವಿದೆ. ಹೇಗೆಂದರೆ, ಇಂಧನವಿಲ್ಲದೆ ಆರ್ಥಿಕ ವ್ಯವಸ್ಥೆ ನಡೆಯದು. ಇದನ್ನು ಅವಲಂಬಿಸಿದ ಪ್ರತಿ ಕ್ಷೇತ್ರವು ಇಂಧನ ಬೆಲೆ ಏರಿಕೆಯಿಂದಗಿ,ಎಲ್ಲಾ ಕ್ಷೇತ್ರಗಳು ಬೆಲೆಗಳನ್ನು ಏರಿಸುತ್ತವೆ. ಇದರಿಂದ ಎಲ್ಲಾ ವಸ್ತುಗಳ ಬೆಲೆಗಳು ಏರುತ್ತವೆ. ಬೆಲೆ ಏರಿದರೆ ಹಣದ ಮೌಲ್ಯ ಕಡಿಮೆಯಾಗುತ್ತದೆ. ಮತ್ತು ಹಣದ ಮೌಲ್ಯ ಕಡಿಮೆ ಆದರೆ ಮತ್ತೆ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಾಗುತ್ತದೆ. ಇಂಧನ ಇಲ್ಲದೆ ನಾವಿಲ್ಲ, ನಮಗಲ್ಲದ ಇಂಧನವೂ ಇಲ್ಲ. ಇಂಧನದ ಬೆಲೆ ಏರಿಕೆಯಿಂದ ವಸ್ತುಗಳ ಬೆಲೆಗಳು ಏರುತ್ತವೆ. ವಸ್ತುಗಳ ಬೆಲೆಗಳು ಏರಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶೀಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತದೆ. ಇದರಿಂದ ರಪ್ತು ಕಡಿಮೆ ಆಗುತ್ತದೆ. ಆಗ ರಪ್ತು ಕಡಿಮೆ ಆಗಿ ಆಮದು ಹೆಚ್ಚಾಗಿ, ಹಣದ ಮೌಲ್ಯ ಕಡಿಮೆ ಆಗುತ್ತದೆ. ಹೀಗೆ ಒಂದು ಚಕ್ರದ ಹಾಗೆ ಸುತ್ತುತ್ತ ಸುತ್ತುತ್ತ ಪ್ರಪಾತದತ್ತಲೆ ಸಾಗುತ್ತದೆ. ಅಷ್ಟಕ್ಕೂ ಇಂಧನ ಬೆಲೆ ಮತ್ತು ಹಣದ ಮೌಲ್ಯಗಳನ್ನು ನಿಯಂತ್ರಿಸಬೇಕೆನ್ನುವವರೂ ಅಪರೂಪ.
ಅಲ್ಲವೆ?

ಬಸವರಾಜ ಪಲ್ಲೇದ, ಉಪನ್ಯಾಸಕರು,ಅಬ್ಬಿಗೇರಿ
Leave a Reply

Your email address will not be published. Required fields are marked *

You May Also Like

ಗೋಧ್ರಾ ಹತ್ಯಾಕಾಂಡ: 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಗೋಧ್ರಾ ರೈಲು ಹತ್ಯಾಕಾಂಡದ ಪ್ರಮುಖ ಆರೋಪಿಯನ್ನು 19 ವರ್ಷಗಳ ಬಳಿಕ ಬಂಧಿಸಲಾಗಿದೆ. ಗೋಧ್ರಾ ನಗರದ ರಫೀಕ್ ಹುಸೇನ್ ಭಾತುಕ್ ಬಂಧಿತ ಆರೋಪಿ. ಈತನೇ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ತಿಳಿಸಿದ್ದಾರೆ.

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್!

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್! ಬಾಗಲಕೋಟೆ : ಬಾದಾಮಿ ಮೂಲದ…

ಸೇವಾಭಾಯಾ ಮಾಲಾಧಾರಿತ ಬಂಜಾರಾ ಪಡೆ ಭಾಯಾಗಡದತ್ತ ಪಯಣ

ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ…

ಸಾಮಾಜಿಕ ಜಾಲತಾಣಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್

ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಮತ್ತು ಫೇಸ್ ಬುಕ್, ವಾಟ್ಸ್ ಆಯಪ್ ಮುಂತಾದ ಸಾಮಾಜಿಕ ಜಾಲತಾಣಗಳು ನೆಲದ ನಿಯಮವನ್ನು ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಹರಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.