Browsing Tag
ಅಬ್ಬಿಗೇರಿ
2 posts
ಅಬ್ಬಿಗೇರಿ: ಕಠಿಣ ಲಾಕ್ಡೌನ್ ಮನೆ ಮನೆಗೆ ಪಡಿತರ
ನರೇಗಲ್: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ 5 ದಿನದವರೆಗೂ ಕಠಿಣ ಲಾಕ್ಡೌನ್ ವಿಧಿಸಿದ ಪರಿಣಾಮ, ಸಮೀಪದ ಅಬ್ಬಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಡಿತರನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡರು.
ಗ್ರಾಮದಲ್ಲಿನ ಸಂಘದ ಪಡಿತರ ಚೀಟಿ ಇರುವ ಮನೆಮನೆಗೆ ತೆರಳಿ ಗ್ರಾಹಕರ ಪಡಿತರವನ್ನು ಸ್ಥಳದಲ್ಲಿಯೇ ತೂಕ ಮಾಡಿ ಹಂಚಿಕೆ ಮಾಡಲಾಗುತ್ತಿದೆ,ಕಠಿಣ ಲಾಕ್ಡೌನ್ ನಿಂದ ಜನರು ಹೊರಗಡೆ ಬರಲು ಆಗದ ಕಾರಣ ಗ್ರಾಮ ಪಂಚಾಯತಿ ಯವರು ಪಡಿತರವನ್ನು ಮನೆ ಮನೆಗೆ ಹಂಚುತ್ತಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.