ಉತ್ತರಪ್ರಭ ಸುದ್ದಿ

ಗದಗ: ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಪತ್ನಿಯಿಂದಲೇ ಪತಿಯ ಹತ್ಯೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸುರೇಶ ಈರಪ್ಪ ಮಿರ್ಜಿಯೊಂದಿಗೆ ಶೀಲವ್ವ ಸಕ್ರಪ್ಪ ಲಮಾಣಿಯವರು ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯದ ಕುರಿತು ಶೀಲವ್ವ, ಸಕ್ರಪ್ಪ ಹಾಗೂ ಸುರೇಶನೊಂದಿಗೆ ಸೇರಿ ಸಂಚು ಹೂಡಿ ಸಕ್ರಪ್ಪನಿಗೆ ಕೂಲಿ ಕೆಲಸಕ್ಕೆ ತಡಸ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ.

ಅನೈತಿಕ ಸಂಬಂಧದ ಫೋಟೋ

ತಾಲೂಕಿನ ಸುವರ್ಣಗಿರಿ ತಾಂಡಾದ ಸಕ್ರಪ್ಪ ಗಂಗಪ್ಪ ಲಮಾಣಿ (40) ಈತ ಆಗಸ್ಟ್ 23ರಂದು ನಾಪತ್ತೆಯಾಗಿದ್ದಾನೆ ಸ್ವತಃ ಪತ್ನಿಯೇ ಅಕ್ಟೋಬರ್ 4ರಂದು ಲಕ್ಷೇಶ್ವರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಿಸಿದ್ದಳು.ಹಾವೇರಿ ಜಿಲ್ಲೆ ತಡಸ ಪೊಲೀಸ್ ಠಾಣೆ ವ್ಯಾಪ್ತಿಯ ಅಡವಿಸೋಮಾಪುರ ಹದ್ದಿನ ರೈತರೊಬ್ಬರ ಜಮೀನಿನ ಹತ್ತಿರದ ಕಾಲುವೆ ದಂಡೆಯ ಮೇಲೆ ಅರ್ಧಂಬಂರ್ಧ ಸುಟ್ಟ ಅನಾಮಧೇಯ ಶವ ಪತ್ತೆಯಾದ ಬಗ್ಗೆ ತಡಸ ಠಾಣೆಯಲ್ಲಿ ಆ.25ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಹತ್ಯೆಯಾದ ವ್ಯಕ್ತಿ ಲಕ್ಷೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ ನಿವಾಸಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಹತ್ಯೆಯಾದ ಪತಿ

ತನಿಖೆಯಿಂದ ಸತ್ಯ ಬಯಲಿಗೆಳೆದ ಪೊಲೀಸರು ಈ ಕೃತ್ಯದಲ್ಲಿ ಪಾಲ್ಗೊಂಡ ಪತ್ನಿ ಸೇರಿ 7 ಜನರನ್ನು ಶುಕ್ರವಾರ ಬಂಧಿಸಿದ್ದಾರೆ. ಈ ಕುರಿತು ಲಕ್ಷೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಪ್ರಕರಣದ ಕೊಲೆಯಲ್ಲಿ ಅಂತ್ಯವಾಗಿರುವುದು ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸುವರ್ಣಗಿರಿ. ತಾಂಡಾದ ಜನರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: 150 ಸ್ಥಾನ ಗೆಲ್ಲುವ ಗೂರಿ..!

ಉತ್ತರಪ್ರಭಗದಗ: ರಾಜ್ಯಾದ್ಯಂತ 150 ಸ್ಥಾನ ಗೆಲ್ಲುವ ಉದ್ದೇಶದಿಂದ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜನೆ…

ರಕ್ತದಾನ ಮಾಡಿ ಜೀವ ಉಳಿಸಿ

ಆರೋಗ್ಯವಂತ ಯುವಕ ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕೆಂದು ಐಎಂಎ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಆರ್.ಟಿ. ಪವಾಡಶೆಟ್ಟರ್ ಹೇಳಿದರು.

ನರೇಗಲ್, ಹೊಳೆಯಾಲೂರು ಹೋಬಳಿ: ರೈತರಿಂದ ತಾಡಪತ್ರಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆಯಿಂದ ನರೇಗಲ್ ಹಾಗೂ ಹೊಳೆಆಲೂರ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಲಾಟರಿ ಮುಖಾಂತರ ತಾಡಪತ್ರಿಗಳನ್ನು ವಿತರಿಸಲು ಅರ್ಜಿ ಕರೆಯಲಾಗಿದೆ.

ಪಕ್ಷ ವಿರೋದಿ ಚಟುವಟಿಕೆ; ಬಿಜೆಪಿ ಪಕ್ಷದ ನಾಲ್ವರ ಕಾರ್ಯಕರ್ತರ ಉಚ್ಚಾಟನೆ

ಉತ್ತರಪ್ರಭ ಸುದ್ದಿಮುಳಗುಂದ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಾಂತೇಶ ಬಾತಾಖಾನಿ, ಎಂ.ಡಿ.ನರಗುoದ, ಸಿ.ಎಸ್.ಪತ್ರಿ, ಮಂಜುನಾಥ ಮಜ್ಜಿಗುಡ್ಡ…