ಗದಗ: ಜಿಲ್ಲೆಯಲ್ಲಿ ಸೋಮವಾರ ದಿ.13 ರಂದು 6 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ.
ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ನಿವಾಸಿ 26 ವರ್ಷದ ಪುರುಷ ಪಿ-38890 ಸೋಂಕು ದೃಢಪಟ್ಟಿದ್ದು ಸೋಂಕು ತಗುಲಿರುವ ಕುರಿತು ಪತ್ತೆ ಕಾರ್ಯ ನಡೆದಿದೆ.


ಗದಗ ಜಿಮ್ಸ್ ಆಸ್ಪತ್ರೆಯ 22 ವರ್ಷದ ಮಹಿಳೆ ಪಿ-38892 ಕೆಮ್ಮು ಹಾಗೂ ಜ್ವರ ರೋಗ ಲಕ್ಷಣದಿಂದಾಗಿ ಸೋಂಕು ದೃಢವಾಗಿದೆ.
ಗದಗ ನಗರದ ಕಳಸಾಪುರ ರಸ್ತೆಯ ಬ್ಲೂಸ್ಟಾರ್ ಬಜಾರ್ ಹತ್ತಿರದ ನಿವಾಸಿ 59 ವರ್ಷದ ಮಹಿಳೆ ಪಿ-38894 ಕೆಮ್ಮು ಜ್ವರ ರೋಗ ಲಕ್ಷಣದಿಂದಾಗಿ ಸೋಂಕು ದೃಢವಾಗಿದೆ.
ಗದಗ-ಬೆಟಗೇರಿ ಭಜಂತ್ರಿ ಓಣಿ ನಿವಾಸಿ 31 ವರ್ಷದ ಪುರುಷ ಪಿ-38896 ಇವರಿಗೆ ಪಿ-35948 ಸೋಂಕಿತರ ಸಂಪರ್ಕದಿಂದಾಗಿ ದೃಢವಾಗಿದೆ.
ಗದಗ ಹುಡ್ಕೋ ಕಾಲೋನಿ ನಿವಾಸಿ 14 ವರ್ಷದ ಯುವಕ ಪಿ-38899 ಇವರಿಗೆ ಪಿ-31113 ಸೋಂಕಿತರ ಸಂಪರ್ಕದಿಂದಾಗಿ ದೃಢವಾಗಿದೆ.
ನರಗುಂದ ತಾಲ್ಲೂಕಿನ ದಂಡಾಪುರದ ನಿವಾಸಿ 24 ವರ್ಷದ ಪುರುಷ ಪಿ-38900 ಇವರಿಗೆ ಬೆಂಗಳೂರು ಪ್ರಯಾಣದಿಂದಾಗಿ ಸೋಂಕು ದೃಢವಾಗಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

1 comment
Leave a Reply

Your email address will not be published.

You May Also Like

ಸಾರ್ವಜನಿಕರಿಂದ ಗೃಹ ಮಂಡಳಿ ಅಧಿಕಾರಿ ತರಾಟೆಗೆ

ಗದಗ: ಕರ್ನಾಟಕ ಗೃಹ ಮಂಡಳಿ ಅಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಇಂದು ಗದಗನ ಗೃಹ…

ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಸಾವನ್ನಪ್ಪಿದ ವೈದ್ಯ!

ಹಾಸನ: ಕೊರೊನಾ ವಿರುದ್ಧ ಹೋರಾಡುತ್ತಿದ್ದ ವೈದ್ಯ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಕಿರಣ್…

ಎಲ್.ಪಿ.ಜಿ ಸಿಲಿಂಡರ್‍ಗಳಿಗೆ ಬೆಂಕಿ

ಬೆಂಗಳೂರ:ಇಂದು ಬೆಂಗಳೂರಿನ ಗೋವಿಂದರಾಜನಗರ ವಾರ್ಡ್,ಮೂಡಲಪಾಳ್ಯದ ಸರ್ಕಾರಿ ಶಾಲೆ ಹತ್ತಿರ ಎಲ್.ಪಿ.ಜಿ ಸಿಲಿಂಡರ್‍ಗಳಿಗೆ ಬೆಂಕಿಯಾಗಿದ್ದು, ಕೂಡಲೇ ರಾಜಾಜಿನಗರ…

ಗದಗನಲ್ಲಿ ಅಲ್ಪಸಂಖ್ಯಾತ ನಿಗಮದ ಅಧಿಕಾರಿ ಎಸಿಬಿ ಬಲೆಗೆ

ಗದಗ: ನಗರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹಾಗೂ ಕಂಪ್ಯೂಟರ್ ಆಪರೇಟರ್ ಇಂದು ಎಸಿಬಿ…