ಲಕ್ಷ್ಮೇಶ್ವರ: ಈಗಿನ ಯುವಕರಲ್ಲಿ ಆತ್ಮಸ್ಥೆರ್ಯ ಕುಗ್ಗಿಹೋಗಿದೆ. ಅವರಲ್ಲಿ ಆತ್ಮಸ್ಥೆರ್ಯ ತುಂಬಿದರೆ ನೀರುದ್ಯೋಗದ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ಬಿಜೆಪಿಯವರು ಇವು ಯಾವುದೆ ಕೆಲಸ ಮಾಡಿಲ್ಲ ಅನೇಕ ಯುವಕರು ನೀರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಎದುರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಅವರು ಪಟ್ಟಣದ ಚನ್ನಮ್ಮನ ವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿಧಾನ ಪರಿಷತ್‌ನಲ್ಲಿ ಹಲವಾರು ಯೋಜನೆಗಳಿಗೆ ಬಿಲ್‌ಗಳನ್ನು ಮಂಡಿಸುತ್ತಿದ್ದಾರೆ. ಆದರೆ ಯುವಕರಿಗೆ ಯಾವುದೇ ಬಿಲ್‌ಗಳು ಸಹ ಯುವಕರಿಗಾಗಿ ಇಲ್ಲ. ಯುವಕರನ್ನು ಕಡೆಗಣಿಸಿದ ಬಿಜೆಪಿ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡ ಎಸ್.ಪಿ.ಬಳಿಗಾರ ಮಾತನಾಡಿ ಎಷ್ಟೋ ಯುವಕರು ನಿರುದ್ಯೋಗದಿಂದ ಬಳುತ್ತಿದ್ದಾರೆ. ಅವರಿಗೆ ಈವರೆಗೂ ಯಾವುದೇ ಉದ್ಯೋಗ ಸೃಷ್ಠಿಸಿಲ್ಲ. ಯುವಕರನ್ನು ಕಡೆಗಣಿಸಿದ ಸರಕಾರದ ಅಭ್ಯರ್ಥಿ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ರಾಜಣ್ಣ ಕುಂಬಿ, ಸೋಮಣ್ಣ ಬೇಟಗೇರಿ, ಜಯಕ್ಕ ಕಳ್ಳಿ, ವಿರೇಂದ್ರ ಪಾಟೀಲ್, ವಿರುಪಾಕ್ಷಪ್ಪ ನಂದೆಣ್ಣವರ, ಭಾಗ್ಯಶ್ರೀ ಲಮಾಣಿ ಪರಮೇಶ ಲಮಾಣಿ, ಬಾಳೆಸೋರಮಠ, ಅಂಬರೀಶ ತೆಂಬದಮನಿ, ಬಸವರೆಡ್ಡಿ, ಫಕ್ಕಿರೇಶ ಮ್ಯಾಟಣ್ಣವರ, ಸೋಮಣ್ಣ ಯತ್ನಳ್ಳಿ, ಎಸ್.ಎಂ.ಗದಗ, ವಿಜಯ ಕರಡಿ, ರಾಮಣ್ಣ ಲಮಾಣಿ, ಸಿದ್ದಲಿಂಗೇಶ ರಗಟಿ, ಸುರೇಶ ಬೀರಣ್ಣವರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ಪೊಲೀಸ್ ಠಾಣೆಯೇ ದೇವಸ್ಥಾನವಿದ್ದಂತೆ : ಪೂಜೆ ಸಲ್ಲಿಸಿ ಗೌರವ

ಪೊಲೀಸರೆ ದೇವರು, ಪೊಲೀಸ್ ಠಾಣೆಯೇ ದೇವಸ್ಥಾನ ಎನ್ನುವ ಕಲ್ಪನೆಯೊಂದಿದೆ ಪೊಲೀಸ್ ಠಾಣೆಗೆ ಪೂಜೆ ಸಲ್ಲಿಸಿ ಈ ಮೂಲಕ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲಾಯಿತು.

ಬೇಡಜಂಗಮ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ; ಬಿ.ಡಿ. ಹಿರೇಮಠ

ಬೇಡ ಜಂಗಮ ಜಾತಿ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ನಿಲ್ಲದು’ ಎಂದು ಬೇಡಜಂಗಮ ಸಂಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಎಚ್ಚರಿಸಿದರು.

ವಿದ್ಯುತ್ ನಿಲುಗಡೆ

110 ಕೆವ್ಹಿ ಶಿರಹಟ್ಟಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಮಾ.16 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.