ಮುಂಡರಗಿ: ಕೊರೊನಾದ ಈ ಸಂಕಷ್ಟದಲ್ಲಿ ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಮೂಲಕ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಸೇವಾ ಕಾರ್ಯಕ್ಕೆ ಅಣಿಯಾಗಿದ್ದಾರೆ. ಹೌದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ದೀನ್ ಮುಲ್ಲಾ, ಗ್ರಾಮದಲ್ಲಿ ಉಚಿತ ತುರ್ತು ಸೇವಾ ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ. ಜೊತೆಗೆ ಕೊರೊನಾ ಜಾಗೃತಿಗೂ ಅಣಿಯಾಗಿದ್ದಾರೆ.ತುರ್ತು ವಾಹನ ಸೇವೆಗೆ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಕಲಕೇರಿಯಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾದ ಈ ಸಂದಿಗ್ಧತೆಯಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ಧೀನ್ ಮಾತನಾಡಿ, ಉಳ್ಳವರು ಕೈಲಾದಷ್ಟ ಜನರಿಗಾಗಿ ಸೇವೆಗೆ ಮುಂದಾದರೆ ಬಡ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸಂತಸ ಉಂಟಾಗುತ್ತದೆ ಎಂದರು. ಇದೇ ವೇಳೆ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುವವರ ಕಾರ್ಯವನ್ನು ಶ್ಲಾಘಿಸಿದರು.
ಏನೇ ಆಗಲಿ ಜನಪ್ರತಿನಿಧಿಗಳು ಗೆದ್ದ ಮೇಲೆ ಬದಲಾಗ್ತಾರೆ ಅಂತಾರೆ. ಆದರೆ ಗೆದ್ದ ಮೇಲೂ ಇಂಥ ಸೇವಾ ಕಾರ್ಯ ಮಾಡಲು ಮುಂದಾಗಿರುವ ಜಹೀರ್ ಕಾರ್ಯ ಪ್ರಶಂಸನೀಯ.

Leave a Reply

Your email address will not be published. Required fields are marked *

You May Also Like

ಹಿಟ್ಲರ್ ಟೀಸರ್ 1 ಮಿಲಿಯನ್ ವೀಕ್ಷಣೆ

ಗಾನ ಮೂವ್ಹೀಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಮಮತಾ ಲೋಹಿತ್ ನಿರ್ಮಿಸುತ್ತಿರುವ ಹಿಟ್ಲರ್ ಕನ್ನಡ ಚಲನಚಿತ್ರದ ಟೀಸರ್ 1.1 ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿದ್ದು ಈ ಸಂದರ್ಭದಲ್ಲಿ ಚಿತ್ರ ತಂಡ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ರೈತರಿಂದ ಗ್ರಾಹಕರಿಗೆ ನೇರ ಮಾರಾಟಕ್ಕೆ ಕ್ರಮ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ

ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆರೆಯಲಾದ ಮಳಿಗೆಗಳ ವಿವರ ಇಲ್ಲಿದೆ ನೋಡಿ

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ: ಸಚಿವ ಸುರೇಶ ಕುಮಾರ್

ನಿರೀಕ್ಷೆಗಿಂತ ಮೊದಲೇ ಪಿಯುಸಿ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.