ತುರ್ತು ವಾಹನ ಸೇವೆ ಒದಗಿಸಿ ಜನರಿಂದ ಸೈ ಎನಿಸಿಕೊಂಡ ಗ್ರಾಪಂ ಸದಸ್ಯ ಜಹೀರ್

ಮುಂಡರಗಿ: ಕೊರೊನಾದ ಈ ಸಂಕಷ್ಟದಲ್ಲಿ ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಮೂಲಕ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಸೇವಾ ಕಾರ್ಯಕ್ಕೆ ಅಣಿಯಾಗಿದ್ದಾರೆ. ಹೌದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ದೀನ್ ಮುಲ್ಲಾ, ಗ್ರಾಮದಲ್ಲಿ ಉಚಿತ ತುರ್ತು ಸೇವಾ ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ. ಜೊತೆಗೆ ಕೊರೊನಾ ಜಾಗೃತಿಗೂ ಅಣಿಯಾಗಿದ್ದಾರೆ.ತುರ್ತು ವಾಹನ ಸೇವೆಗೆ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಕಲಕೇರಿಯಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾದ ಈ ಸಂದಿಗ್ಧತೆಯಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ಧೀನ್ ಮಾತನಾಡಿ, ಉಳ್ಳವರು ಕೈಲಾದಷ್ಟ ಜನರಿಗಾಗಿ ಸೇವೆಗೆ ಮುಂದಾದರೆ ಬಡ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸಂತಸ ಉಂಟಾಗುತ್ತದೆ ಎಂದರು. ಇದೇ ವೇಳೆ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುವವರ ಕಾರ್ಯವನ್ನು ಶ್ಲಾಘಿಸಿದರು.
ಏನೇ ಆಗಲಿ ಜನಪ್ರತಿನಿಧಿಗಳು ಗೆದ್ದ ಮೇಲೆ ಬದಲಾಗ್ತಾರೆ ಅಂತಾರೆ. ಆದರೆ ಗೆದ್ದ ಮೇಲೂ ಇಂಥ ಸೇವಾ ಕಾರ್ಯ ಮಾಡಲು ಮುಂದಾಗಿರುವ ಜಹೀರ್ ಕಾರ್ಯ ಪ್ರಶಂಸನೀಯ.

Exit mobile version