ಲಕ್ಷ್ಮೇಶ್ವರ: ಶಾಸಕ ರಾಮಣ್ಣ ಲಮಾಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ಬೇಗ ಗುಣಮುಖರಾಗಲೆಂದು ಪೌಷ್ಟಿಕ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ, ರೋಗಿಗಳಿಗೆ ಕಿಟ್ ವಿತರಣೆ ಮಾಡಿ ಮಾತನಾಡಿ, ಈಗಾಗಲೇ ನಗರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೊನಾ ಮಹಾಮಾರಿ ಎರಡನೇ ಅಲೆಯ ಆರ್ಭಟಕ್ಕೆ ಜನರು ತತ್ತರಿಸಿಹೋಗಿದ್ದಾರೆ. ನನ್ನ ಕ್ಷೇತ್ರದ ಬಡ ಕೂಲಿ ಕಾರ್ಮಿಕರಿಗೆ ರೈತರಿಗೆ, ಅನಾಥರಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ, ಬುದ್ಧಿಮಾಂದ್ಯರಿಗೆ ಈ ರೋಗದಿಂದ ಬಳಲುತ್ತಿದ್ದವರು ಭಯ ಪಡಬಾರದು. ಮನೆಯಿಂದ ಹೊರಗೆ ಬರಬಾರದು, ಮನೆಯಲ್ಲಿ ಇರಬೇಕು ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಹೇಳಿದರು.
ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳ ಕಾಲ ಸಂಪೂರ್ಣವಾದ ಆಡಳಿತ ಹಾಗೂ ಎರಡು ವರ್ಷಗಳ ಕಾಲ ಸಂಪೂರ್ಣ ಬಿಜೆಪಿ ಆಡಳಿತ ನೆನಪುಗಳು ನಮ್ಮೆಲ್ಲರ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ, ಬಿಜೆಪಿ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಹಲವಾರು ಜನೋಪಯೋಗಿ ಕೆಲಸಗಳನ್ನು ಇಂದಿಗೂ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಪಿಐ ವಿಕಾಸ್ ಲಮಾಣಿ, ಮುಖಂಡರಾದ ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರಜೆಕಣ್ಣವರ್, ಬಿಜೆಪಿ ಮಂಡಲ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ,ದುಂಡೇಶ ಕೊಟಗಿ, ಪ್ರವೀಣ್ ಭೋಮಲೆ, ಗಂಗಾಧರ್ ಮೆಣಸಿನಕಾಯಿ, ವಿಜಯ್ ಕುಂಬಾರ್, ವಿಶಾಲ್ ಬಟಕುರ್ಕಿ ಪ್ರಕಾಶ್ ಮಾದನೂರು ಮಹೇಶ್ ಮೇಟಿ ಚಂದ್ರು ಹಂಪನ್ನವರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ILI ಲಕ್ಷಣ ವಿರುವವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ- ಸಚಿವ ಡಾ.ಕೆ.ಸುಧಾಕರ್

ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಕುರಿಗಾಹಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪದವಿ ಕಾಲೇಜು ತೆರೆಯಲು ಓಕೆ….ಪಿಯು ಕಾಲೇಜು ಮಾತ್ರ ಸದ್ಯಕ್ಕೆ ಇಲ್ಲ!

ಬೆಂಗಳೂರು : ಕಾಲೇಜುಗಳನ್ನು ಪ್ರಾರಂಭಿಸಲು ದಿನಾಂಕ ನಿಗದಿ ಪಡಿಸಲಾಗಿದ್ದು, ಪಿಯು ಕಾಲೇಜು ಸದ್ಯಕ್ಕೆ ಆರಂಭ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.

ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಸಿ ಸಿದ್ದಾರ್ಥನ್ ಅವಹೇಳನಕ್ಕೆ ಸೋಮು ಲಮಾಣಿ ಖಂಡನೆ..!

ಸೋಮು ಲಮಾಣಿ, ಅಧ್ಯಕ್ಷರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಂಘ, ಕಾರ್ಯಾಧ್ಯಕ್ಷರು ಲಂಬಾಣಿ ಬಂಜಾರಾ ಕಲ್ಯಾಣ ಸಂಘ, ಗದಗ ಹಾಗೂ ಸಂಘಟನಾ ಕಾರ್ಯದರ್ಶಿ ಕಾಂಗ್ರೆಸ್ ಸಮಿತಿ ಗದಗ ಜಿಲ್ಲೆ (ಎಸ್.ಸಿ ಘಟಕ).