ಗಜೇಂದ್ರಗಡ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿಯವರನ್ನು ಕಳೆದುಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ಇಂದು ಬಡವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ಎಂ.ಎಸ್.ಹಡಪದ ಹೇಳಿದರು.
ಪಟ್ಟಣದಲ್ಲಿ ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸಂಘಟನೆಗಳ ವತಿಯಿಂದ ನಡೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ, ಗಳಿಸಿದ ಸ್ವಾತಂತ್ರ್ಯದ ಉಳಿವಿಗಾಗಿ ಹಾಗೂ ಸ್ವಾತಂತ್ರ್ಯದ ಆಶಯಗಳಿಗೆ ಧಕ್ಕೆ ಬಂದಾಗಲೆಲ್ಲಾ ಜೀವನದುದ್ದಕ್ಕೂ ಆಳುವ ಸರ್ಕಾರಗಳ ವಿರುದ್ಧ ರಾಜೀರಹಿತ ಹೋರಾಟ ನಡೆಸಿ, ಜನಸಾಮಾನ್ಯರ ಪರ ದ್ವನಿ ಎತ್ತಿದ ದೊರೆಸ್ವಾಮಿಯವರ ಚಿಂತನೆ ಅಮೋಘ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತದ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಕಂಡವರಾಗಿದ್ದರು. ಸರ್ಕಾರಗಳು ಸ್ವಾತಂತ್ರ್ಯ ಯೋಧರಿಗೆ ನೀಡುವ ಹಣಕಾಸು ಸಹಯ, ಸವಲತ್ತುಗಳಿಗೆ, ಗೌರವಗಳಿಗೆ ಕೈಚಾಚಿ ನಿಂತವರಲ್ಲ. ಬದಲಿಗೆ ಯಾವುದೇ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೆ ತಂದಾಗ ಅವರು ಪಕ್ಷ ಬೇದವೆನ್ನದೆ ಜನರ ನಡುವೆ ಬಂದು ಬೀದಿಯಲ್ಲಿ ಕುಳಿತು ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು. ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಡಿವೈಎಫ್‌ಐ ಮುಖಂಡ ಫಯಾಜ್ ತೋಟದ ಮಾತನಾಡಿ, ಮೂಲತಃ ಜಾತ್ಯಾತೀತರು ಹಿಂದುತ್ವ ರಾಜಕಾರಣದ ಕೋಮುವಾದಿ ಪ್ಯಾಸಿಸ್ಟ ಕಾರ್ಯಾಸೂಚಿಯನ್ನು ವಿರೋಧಿಸಿದ್ದರು. ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯಿಂದ ಮೈಲಿದೂರ ಸರಿದು ಕಾಂಗ್ರೆಸ್ ಅಥವಾ ಇತರೆ ಯಾವುದೇ ಪಕ್ಷವಾಗಲೀ ಅವರನ್ನು ತರಾಟೆಗೆ ತೆಗೆದುಕೊಳ್ಳುವುದನ್ನ ಬಿಡುತ್ತರಲಿಲ್ಲ. ದೇಶ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರಿಂದ ದೇಶಕ್ಕೆ ಎರಡನೇಯ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ಅವರು ದೃಡವಾಗಿ ನಂಬಿದವರಾಗಿದ್ದರು. ಹಲವು ತಲೆಮಾರುಗಳ ನಂತರ ಇಂತಹ ಮನುಷ್ಯ ಈ ಭೂಮಿಯ ಮೇಲೆ ಜೀವಂತವಾಗಿ ನಡೆದಾಡಿದ್ದಾನೆ ಎಂಬುದನ್ನು ನಂಬುವುದು ಕಷ್ಟವಾಗಬವುದು. ಆ ರೀತಿಯಲ್ಲಿ ಬದುಕು ಸಾಗಿಸಿದ ಮಹಾನ್ ವ್ಯಕ್ತಿತ್ವ ಅವರದಾಗಿತ್ತು ಎಂದರು.
ಬಾಲು ರಾಠೋಡ, ಮೈಬುಸಾಬ ಹವಾಲ್ದಾರ, ಫೀರು ರಾಠೋಡ ಇದ್ದರು.

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ ಹೆದ್ದಾರಿ ಗುಂಡಿಯಲ್ಲಿ ವಾಹನ ಸವಾರರು ಬಿದ್ದು ನರಳಾಟ

ವರದಿ: ವಿಠಲ ಕೆಳೂತ್ ಮಸ್ಕಿ: ಲಿಂಗಸ್ಗೂರು-ಮಸ್ಕಿ ‌ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಗೆ ಬಿದ್ದು ವಾಹನ…

ಗದಗನಲ್ಲಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮ ಮಾರಾಟ: ನಾಲ್ವರ ಬಂಧನ

ಗದಗ: ಈಗಾಗಲೇ ರಾಜ್ಯದಲ್ಲಿ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮದ್ಯೆ ಗದಗನಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡವನ್ನು ಗದಗ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.

ಮಣ್ಣಿನ ಮಗನ ಹರುಷದ ಹುಣ್ಣಿಮೆ ಕಾರ ಹುಣ್ಣಿಮೆ

ಪ್ರತಿ ವರ್ಷವೂ ಕಾರ ಹುಣ್ಣಿಮೆ ಆಗಮಿಸಿತೆಂದರೆ ಅದು ಮುಂಗಾರಿನ ನಾಂದಿ ಎಂತಲೇ ಅರ್ಥ. ಈ ಕಾರ…

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…