ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ.
ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ ಗಳು ಹೆಚ್ಚಾಗಲಿವೆ ಎಂದು ಜಾಗತಿಕ ಮಟ್ಟದ ಸಮೀಕ್ಷೆ ಹೇಳಿದೆ. ಆದರೆ, ಸಮೀಕ್ಷೆಯಲ್ಲಿ ದೇಶ ಸರಿಯಾಗಿಯೇ ಇದೆ ಎಂದು ಹೇಳಲಾಗುತ್ತಿದೆ. ಇಪ್ಸೊಸ್ ನಡೆಸಿದ ವಾಟ್ ವರೀಸ್ ದ ವರ್ಲ್ಡ್ ಎಂಬ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಜನರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ಆತಂಕಕ್ಕೆ ಏನು ಕಾರಣಗಳು ಎಂದು ಕೇಳಿದಾಗ ಶೇ. 62ರಷ್ಟು ಜನ ಕೊರೊನಾ ಎಂದು ಹೇಳಿದ್ದಾರೆ. ಶೇಕಡಾ 38ರಷ್ಟು ಜನ ನಿರುದ್ಯೋಗ ಸಮಸ್ಯೆ, ಶೇ. 24ರಷ್ಟು ಜನ ಅಪರಾಧ ಮತ್ತು ಹಿಂಸಾಚಾರ ಮತ್ತು ಶೇ. 21ರಷ್ಟು ಜನ ಬಡತನ ಮತ್ತು ಸಾಮಾಜಿಕ ಅಸಮಾನತೆ ಎಂದಿದ್ದಾರೆ.
ಭಾರತದಲ್ಲಿ ಶೇ. 65ರಷ್ಟು ಜನ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ. ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಗ್ರೇಟ್ ಬ್ರಿಟನ್, ಜರ್ಮನಿ, ಭಾರತ, ಇಸ್ರೇಲ್, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಸ್ಪೈನ್, ಸ್ವೀಡನ್, ಟರ್ಕಿ ಮತ್ತು ಅಮೆರಿಕ ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
Leave a Reply

Your email address will not be published. Required fields are marked *

You May Also Like

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ : ಅವಿರೋಧ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ ಉಳಿದ ಅವಧಿಗೆ…

ಗ್ರಾ.ಪಂ ಸದಸ್ಯರ ಸರ್ವಾಧಿಕಾರ ಖಂಡಿಸಿ ರೈತರ ಆಕ್ರೋಶ

ಉತ್ತರಪ್ರಭ ಮುಳಗುಂದ: ಗ್ರಾಮ ಪಂಚಾಯ್ತಿ ಯಿಂದ ಕೇಂದ್ರ ಸರ್ಕಾರದ ವರೆಗೂ ಕಾರ್ಯವೈಕರಿಯನ್ನ ಪ್ರಶ್ನಿಸುವ ಮತ್ತು ಸೌಲಭ್ಯಗಳನ್ನ…

ಹಿರಿಯರ ಹಗಲು ಯೋಗಕ್ಷೇಮ ಕೇಂದ್ರ ಉದ್ಘಾಟನೆ

ಉತ್ತರಪ್ರಭ ಸುದ್ದಿನರಗುಂದ: ಸ್ನೇಹ ಸಂಜೀವಿನಿ ವಿವಿದೋದ್ದೇಶಗಳ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಇಂದು ಹಿರಿಯ…

ಕೋವಿಡ್ ಸಂಬಂಧ ದಿನಕ್ಕೊಂದು ನಿರ್ಧಾರ ಅಪಾಯಕಾರಿ: ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್-19 ನಿಯಂತ್ರಣದ ವಿಷಯದಲ್ಲಿ ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೈಗೊಳ್ಳುತ್ತಿರುವ ದಿನಕ್ಕೊಂದು ನಿರ್ಧಾರ ಅಪಾಯಕಾರಿಯಾದುದು…