ತನ್ನ ಭಾಳ್ ದಿನದ್ ಗೆಳತಿಗೆ ಆತ, ಐಲೌಯು ಅಂತ ಹೇಳಬೇಕು ಅಂದ್ಕೊಂಡಿದ್ನಂತ. ಆದ್ರ ಅವನಿಗೊಂದು ಹುಚ್ಚು. ತಾನು ಐಲೌಯು ಅಂತ ಹೇಳಿದ್ ಕೂಡ್ಲೆ ತನ್ನ ಗೆಳತಿಗೆ ಫುಲ್ ಥ್ರಿಲ್ ಆಗಬೇಕು. ಆಕಿ ಜೀವನದಾಗ ಈ ಘಟನಾ ಮರಿಲಾರದಂತ ಅನುಭವ ಆಗಬೇಕು. ಅಂಥ ಸರ್ಪ್ರೈಜ್ ಕೊಡಬೇಕು ಅನ್ನೋ ಖಯಾಲಿಯೊಳಗ ಒಂದು ಪ್ಲ್ಯಾನ್ ಮಾಡಿದ್ನಂತ. ಐಲೌಯು ಅಂತ ಹೇಳಿದ್ ಕೂಡ್ಲೆ ಮುಂದೇನಾತು ಅನ್ನೋದಾ ಆತ ಮಾಡಿದ ಪ್ಲ್ಯಾನ್ ನ ಕಥಿ ನೋಡ್ರಿ..

ಜೋಡಿಯೊಂದರ ವಿಡಿಯೋ ವೈರಲ್ ಆಗ್ಯೈತಿ. ಈ ವಿಡಿಯೋದಾಗಿನ ದೃಷ್ಯ ನೋಡಿದ್ರ ಒಮ್ಮೆ ನಗು ಬರ್ತೈತಿ, ಮತ್ತೊಮ್ಮ ಅಯ್ಯೋ ಪುಣ್ಯಾತ್ಮ ಹಂಗ ಐಲೌಯು ಅಂತ ಹೇಳಾಕ್ ನಿಂಗೇನ್ ಧಾಡಿ. ಏನ್ಕೇಕನರಾ ಹೆಚ್ಚು ಕಡ್ಮಿ ಆಗಿದ್ರ ಐಲೌಯು ಅಂತ ಹೇಳಿದ್ ನಿನ್ ಮಾತಿಗೆ ಐಟುಲೌಯು ಅಂತ ನಿನ್ನ ಗೆಳತಿ ಹೇಳಿದ ಉತ್ತರ ಕೇಳಾಕ ನೀನಾ ಇರ್ತಿರಲಿಲ್ಲ. ಈಗರಾ ಆಗಿದ್ದೇನು..? ಅಷ್ಟೆಲ್ಲ ಸರ್ಕಸ್  ಮಾಡಿ ಐಲೌಯು ಅಂತ ಹೇಳಿದ್ ಗೆಳೆಯಾಗ ಗೆಳತಿ ಕೊಟ್ಟಿದ್ ಮಾತ್ರ ಒದಕಿ ನೋಡ್ರಿ.

ಅಂದ್ಹಂಗ ಆಕಿಗೆ ಲೌ ಮಾಡಾಕ್ ಇಷ್ಟಾ ಇಲ್ಲಂದ್ರ ಐ ಹೇಟ್ ಯು ಅಂತ ಹೇಳಿಬಿಡಬೇಕಿತ್ತು. ಅದನ್ನ ಬಿಟ್ ಒದಿಯೋ ಕೆಲ್ಸಾ ಯಾಕ್ ಮಾಡಿದ್ಲು ಅಂತ ಭಾಳ್ ಪ್ರೇಮಿಗಳಿಗೆ ಸ್ವಲ್ಪ ನಿರಾಶಾ ಆಗಿರಬಹುದಲ್ಲಾ. ಆದ್ರ ಅಕಿ ಗೆಳೆಯಾನ್ ಪ್ರೀತಿ ಬ್ಯಾಡ ಅಂತ ಒದಿಲಿಲ್ರಿ. ಯಾಕ್ ಒದ್ಲು ಅನ್ನೋದಾ ಭಾಳ್ ಇಂಟರಸ್ಟಿಂಗ್ ನೋಡ್ರಿ.

ಗೆಳೆಯಾ ಪ್ರಪೋಸ್ ಮಾಡಾಕ್ ಕರ್ಕೊಂಡ್ ಹ್ವಾದ್ ಜಾಗ ಹಂಗಿತ್ರಿ. ಭಾಳ್ ಮಂದಿ ಪಾರ್ಕ್ ನ್ಯಾಗ, ಥೇಟರ್ ನ್ಯಾಗ್, ಹೋಟಲ್ ನ್ಯಾಗ, ರೋಡ್ ನ್ಯಾಗ ಹಿಂಗ ಅವ್ರವ್ರ ಅನುಕೂಲಕ್ ತಕ್ಕಂಗ ಅವ್ರವ್ರ ಇಷ್ಟದಂಗ ಪ್ರಪೋಸ್ ಮಾಡ್ತಾರ. ಆದ್ರ ಈ ಯಪ್ಪಾ.., ಹೊಳಿ ನಟ್ಟ ನಡುವ ತಾನೊಂದು ತನ್ನ ಗೆಳತಿಗೊಂದು ಬೋಟ್ ನ್ಯಾಗ ಕರ್ಕೊಂಡು ಹೋಗ್ಯಾನ.

ನಡುವ ಬೋಟ್ ನಿಲ್ಲಿಸಿ ತನ್ನ ಗೆಳತಿಗೆ ಐಲೌಯು ಅಂತ ಹೇಳ್ಯಾನ. ಗೆಳೆಯಾನ್ ಬಾಯಾಗಿಂದ್ ಈ ಮಾತು ಕೇಳಿ ಆಕಿಗೆ ಬಾಳ್ ಖುಷಿ ಆಗೈತಿ. ಆದ್ರ ಹೃದಯದಾಗಿನ ಖುಷಿ ಇನ್ನು ತುಟಿ ಅಂಚಿನೊಳಗ ಅರಳತಿದ್ದಂಗ ಅಲ್ಲಿ ಆಗಿದ್ದ ಬ್ಯಾರೆ..

ಆ ಹೊಳಿ ನಡರಾಕ್ ಅಕಿಯೊಂದು ಬೋಟ್ ನ್ಯಾಗ, ಇಂವಾ ಒಂದು ಬೋಟ್ ನ್ಯಾಗ. ಅಕಿ ಬೋಟ್ ನ್ಯಾಗ ಎದ್ ನಿಲ್ತಾಳ. ಇನ್ನೊಂದು ಬೋಟ್ ನ್ಯಾಗಿಂದ ಅಂವಾ ತನ್ನ ಗೆಳತಿ ಬೋಟ್ ಸಮೀಪ್ ಬಂದು ಆಕಿಗೆ ಏನೋ ಕೊಡ್ತಾನ. ಗೆಳೆಯಾನ್ ಆ ಉಡುಗೋರೆಯಿಂದ ಆಕಿ ಫುಲ್ ಖುಷ್ ಆಗ್ತಾಳ. ಇದ್ರಿಂದ ಥ್ರಿಲ್ ಆದ ಆಕಿ, ತನ್ನ ಗೆಳೆಯಾಗ್ ಮುತ್ತು ಕೊಡಾಕ್ ಎದ್ ನಿಲ್ತಾಳ. ಅಷ್ಟರಾಗ ಅಕಿ ಬೋಟ್ ಮುಂದು ಹೋಗ್ತಿಬಿಡ್ತು.  

ಬೋಟ್ ಮುಂದ್ ಹೋದ್ ಕೂಡ್ಲೆ ಗೆಳೆಯಾಗ್ ಮುತ್ತ ಕೊಡಾಕ್ ಮುಂದಾದ್ ಗೆಳತಿ ಕಾಲ ಜಾರುತ್ತಾ. ಕಾಲ ಜಾರಿದ್ ಭರದಾಗ ಆಕಿ ಬೋಟ್ ನ್ಯಾಗ ಬಿದ್ ಬಿಟ್ಲು. ಬೀಳೊ ವ್ಯಾಳೆದಾ ಕಾಲ್ ಮ್ಯಾಗ್ ಮಾಡಿ ಬಿದ್ದಿದ್ರಿಂದ ಕಾಲ, ಪಾಪ ಪ್ರಪೋಸ್ ಮಾಡಿದ ಗೆಳೆಯಾನ್ ಮುಖಕ್ಕ ಎದಿಗೆ ಬಡಿತ್ ನೋಡ್ರಿ. ಮುತ್ತು ತಗೋಬೇಕು ಅನ್ನೋ ಆತುರದಾಗಿದ್ದ ಗೆಳೆಯಾಗ್ ಕೊನಿಗೂ ಸಿಕ್ಕಿದ್ದು ಒದಿ ಅನ್ನುವಂಗಾತು.

ಏನ ಆಗ್ಲಿ ಇದು ಒಂದ್ ರೀತಿಯಿಂದ ನೋಡಿದವ್ರಿಗೆ ಕೇಳಿದವ್ರಿಗೆ ನಗು ಬರಬಹುದು. ಆದ್ರ ಅಷ್ಟ ಗಂಭೀರ ಐತಿ. ಏನಾದ್ರು ಹೆಚ್ಚು ಕಮ್ಮಿ ಆಗಿದ್ರ ಹ್ಯಾಂಗ್ ಅಂತ. ಆದ್ರ ಇಬ್ಬರಿಗೂ ಏನು ಆಗಿಲ್ಲ ಅನ್ನೋದು ಸಮಾಧಾನದ್ ವಿಷಯಾ ನೋಡ್ರಿ.

https://twitter.com/TheoShantonas/status/1310241716096643078

ಈ ವಿಡಿಯೋ ಈಗ ಸೋಷಿಯಲ್ ಮಿಡಿಯಾದಾಗ ಫುಲ್ ವೈರಲ್ ಆಗೈತಿ. ಇದನ್ನ ನೋಡಿದವ್ರು ಸಿಕ್ಕಾಪಟ್ಟೆ ಕಾಮೆಂಟ್ ಮಾಡ್ಯಾರ.

Leave a Reply

Your email address will not be published. Required fields are marked *

You May Also Like

ಕೋಟೆ ನಾಡಿನ ಪ್ರಕೃತಿ ಸೊಬಗು : ನೋಡ ಬನ್ನಿ ನಿಸರ್ಗದ ಐಸಿರಿ; ಮಲೆನಾಡಿನಂತೆ ಕಂಗೊಳಿಸುತ್ತಿವೆ ಗಜೇಂದ್ರಗಡದ ಬೆಟ್ಟಗಳು

ಐತಿಹಾಸಿಕ ನಗರಿ ಎಂದೇ ಖ್ಯಾತಿ ಪಡೆದ ಗಜೇಂದ್ರಗಡ ಸೇರಿ ಸುತ್ತಲಿನ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹಸಿರಿನ ನಡುವೆ ಮೈ ಮರೆತಷ್ಟು ಹೊಸದಾಗಿ ತೆರೆದುಕೊಳ್ಳುವ ಮಂಜು ಕಂಡು ಭೂ ಲೋಕದ ಸ್ವರ್ಗ ಎಂಬಂತೆ ಭಾಸವಾಗುತ್ತಿತ್ತು. ಇನ್ನು ಬೆಳಗಿನ ವೈಭವ ಮಲೆನಾಡಿನ ಬೆಟ್ಟ ಗುಡ್ಡಗಳಿಗೆ ಕಮ್ಮಿಯಿಲ್ಲ ಎನ್ನುವಷ್ಟು ಮಂಜು ಕವಿದಿತ್ತು.

ಬಿಗ್ ಬಾಸ್ ಮನೆಯಲ್ಲಿ ಕೈಗೆ ರಕ್ತ ಬಂದಿದ್ದಕ್ಕೆ ಬಿಕ್ಕಿ, ಬಿಕ್ಕಿ ಅತ್ತ ದಿವ್ಯಾ!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಟಾಸ್ಕ್ ಒಂದರಲ್ಲಿ ಗ್ಲಾಸ್ ಗೆ ಕೈ ತಗುಲಿದ ಪರಿಣಾ‌ಮ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಬಿಗ್ ಬಾಸ್ ಮನೆಯಲ್ಲೀಗ 10 ಜನರಿದ್ದು, ಈ ಸ್ಪರ್ಧಿಗಳ ನಡುವೆಯೇ ಭಾರೀ ಪೈಪೋಟಿ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಜಕ್ಕಲಿಯಲ್ಲಿ ಹೀಗೊಂದು ವಿಶಿಷ್ಟ ಹೋಳಿ ಹುಣ್ಣಿಮೆ ಆಚರಣೆ

ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣುಮೆ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹೋಳಿ ಒಂದು ಮಹತ್ವಪೂರ್ಣ ಮಹಾಪರ್ವ ಎಂದು ಭಾವಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮಾ.29 ಸೋಮವಾರ ಹೋಳಿ ಹಬ್ಬವನ್ನು ಹಾಗೂ ಕಾಮ ದಹನವನ್ನು ಮಾ.28 ಆಚರಿಸಲಾಗುತ್ತದೆ.

ಪರಿಸರ ತನ್ನನ್ನು ರಕ್ಷಿಸಿಕೊಳ್ಳುತ್ತದೆ ಆದರೆ ನಾವು!?

ಪರಿಸರ ದಿನಾಚರಣೆಯನ್ನು ನಾವು ತುಂಬಾ ವಿಚಿತ್ರವಾಗಿ ಆಚರಿಸುತ್ತೇವೆ,ಈ ಕುರಿತು ಅನೇಕ ಜೋಕುಗಳು,ಟ್ರೋಲುಗಳು ಹುಟ್ಟಿಕೊಳ್ಳುವಷ್ಟು. ಆದರೆ, ಈ ವರ್ಷ ಮನುಷ್ಯ ಕೊಂಚ ಮರಗಳ ಮಹತ್ವ ಅರಿತುಕೊಂಡಿದ್ದಾನೆ. ಲಾಕ್ ಡೌನ್ ಹೊತ್ತಿನಲ್ಲಿ ಏಕಾಗ್ರತೆಯಿಂದ ಆಡುವ ಆಟವೆಂದರೆ ಕೇವಲ ಉಸಿರಾಟ ಮಾತ್ರ.