ರೋಣ: ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯಿಂದ ಕೊರೋನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಈ ವೇಳೆಯಲ್ಲಿ ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆ ಮಾಡಿ, ಯಾರು ಅನಗತ್ಯವಾಗಿ ಹೊರಗಡೆ ಬರಬೇಡಿ, ಅನಿವಾರ್ಯ ಕಾರಣದಿಂದ ಹೊರಗಡೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಹಾಗೂ ಮರಳಿ ಮನೆಗೆ ಹೋದ ತಕ್ಷಣ ಕೈ ಕಾಲುಗಳನ್ನು ಸ್ವಚ್ಛವಾಗಿ ಸೋಪ್ ಬಳಸಿ ತೊಳೆದುಕೊಳ್ಳಿ ಎಂದು ತಿಳಿ ಹೇಳಿದರು. ಅಷ್ಟೇ ಅಲ್ಲದೇ ಧ್ವನಿ ವರ್ಧಕದ ಮುಖಾಂತರ ಜಾಗೃತಿ ಮೂಡಿಸುವದರೊಂದಿಗೆ ಮಹಾಮಾರಿ ಕರೋನ ನಿಯಂತ್ರಣಕ್ಕೆ ಮುಂದಾದರು.

ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಬೇಕು. ಹೋಟೆಲ್ ಗಳು ಬಂದ್ ಮಾಡಬೇಕು. ಯಾರಾದ್ರೂ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನು ಕಟ್ಟೆಗಳ ಮೇಲೆ ಸಾಮಾಜಿಕ ಅಂತರ ಮರೆತು ಯಾರು ಕೂರದಂತೆ ಸುಟ್ಟ ಎಣ್ಣೆಯನ್ನು ಹಾಕಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನೇತ್ರಾ ಕಡಿಯವರ, ಉಪಾಧ್ಯಕ್ಷ ಲಲಿತಾ ಕೊರನವರ, ಸದಸ್ಯರಾದ ಜಿ.ಎಸ್. ಮೊಂಡಸೊಪ್ಪಿ, ಆರ್.ಬಿ.ಗೂಳಪ್ಪನವರ, ಎಮ್.ಎಸ್. ಉಮಚಗಿ, ಬಿ.ಸಿ.ಹಿರೇಕಲ್ಲಪ್ಪನವರ, ಕಾರ್ಯದರ್ಶಿ ಎಮ್.ಎಸ್. ಜಂಗಣ್ಣವರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಎಸ್.ಬಿ.ಪಾಟೀಲ, ಆರೋಗ್ಯ ಸಿಬ್ಬಂದಿ ಯಶೋಧ ಚೆನ್ನಿ, ಬಸವಂತಪ್ಪ ತಳವಾರ, ಅಂಗನವಾಡಿ ಕಾರ್ಯಕರ್ತೆ ಕವಿತಾ ತಳವಾರ್, ನಾಗಮ್ಮ ನವಚಿದ್ರ, ಗುರುಶಾಂತಮ್ಮ ಹಿರೇಮಠ, ಶಾಂತಾ ಪಾಟೀಲ, ಎಎಸ್ಐ ಎಮ್.ಎಫ್. ಹೆರಕಲ್, ಪೊಲೀಸ್ ಪೇದೆ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಭೂ ಕಂಪನ ಅನುಭವ

ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ  ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ  ಸೇರಿದಂತೆ ಮಂಡ್ಯದಲ್ಲಿಯೂ…

ಕಷ್ಟಾ ಮಾಡೋದು ಭಾಳ್ ಕಷ್ಟ ಅಂತ ಕಷ್ಟದ ಅಂಗಡಿನಾ ಬಂದ್ ಮಾಡಿದ ತಿಪ್ಪಾ..!

ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.

ವರ್ಕ್ ಫ್ರಮ್ ಹೋಮ್ ಮಾಡಿದವರ ಪರಿಸ್ಥಿತಿಗೆ ಹೇಗಾಗಿದೆ ಗೊತ್ತಾ?

ನವದೆಹಲಿ : ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಹೀಗಾಗಿ ಕಂಪನಿ…

ಬಿಗ್ ಬಾಸ್ ಮನೆಯಲ್ಲಿ ಕೈಗೆ ರಕ್ತ ಬಂದಿದ್ದಕ್ಕೆ ಬಿಕ್ಕಿ, ಬಿಕ್ಕಿ ಅತ್ತ ದಿವ್ಯಾ!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಟಾಸ್ಕ್ ಒಂದರಲ್ಲಿ ಗ್ಲಾಸ್ ಗೆ ಕೈ ತಗುಲಿದ ಪರಿಣಾ‌ಮ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಬಿಗ್ ಬಾಸ್ ಮನೆಯಲ್ಲೀಗ 10 ಜನರಿದ್ದು, ಈ ಸ್ಪರ್ಧಿಗಳ ನಡುವೆಯೇ ಭಾರೀ ಪೈಪೋಟಿ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.