ಜಗತ್ತನ್ನೇ ತಲ್ಲೇನಿಸಿ ಲಕ್ಷಾಂತರ ಜನರ ಪ್ರಾಣವನ್ನೇ ಕಸಿದುಕೊಂಡ ಮಹಾಮಾರಿ ಕೊರೊನ ಇದೀಗ ಮತ್ತೊಂದು ಗಂಡಾತರ ತಂದಿದೆ.
ಅದುವೇ ‘ಕಪ್ಪು ಫಂಗಸ್’ ಇಂಗ್ಲಿಷ್ ನಲ್ಲಿ ಇದಕ್ಕೆ “MUCORMYCOSIS” ಅಂತ ಕರಿಯುತ್ತಾರೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಕಂಡುಹಿಡಿದು ಗುಣಪಡಿಸದಿದ್ದರೆ, ರೋಗಿಗಳ ಪ್ರಾಣಕ್ಕೆ ಹಾನಿಕಾರವಾಗಬಲ್ಲದು. ಇದು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಫಂಗಸ್’ ಒಂದು ಜೀವ – ಪರಾವಲಂಬಿ, ಪರನ್ನಜೀವಿ ಹಾಗೂ ಕೆಟ್ಟಕಳೆ.
ಇದು ಹೆಚ್ಚಾಗಿ ಕೊರೊನದಿಂದ ಗುಣಮುಖವಾಗುತ್ತಿರುವ ಅಥವಾ ಗುಣಮುಖವಾಗಿರುವರಲ್ಲಿ ಕಾಣಬಹುದು.

ಕಾರಣಗಳು:

  • ಇದು ಕೊರೊನಾದ ಸಂಧರ್ಭದಲ್ಲಿ ಕೊಡುವ ಸ್ಟೇರೊಯ್ಡ್ ಔಷದಿಯಿಂದ.
  • ಹತೋಟಿಇಲ್ಲದ ಮಧುಮೇಹ (Uncontrolled Diabetes).
  • ರೋಗ ಪ್ರತಿರೋಧವಿಲ್ಲದ ರೋಗಿಗಳು.
  • ಕೊರೊನ ರೋಗಿಗಳಿಗೆ ಸತತವಾಗಿ ಕೊಡುವ ಶುದ್ಧ ನೀರಿನ ಮುಖಾಂತರ ಕೊಡುವ ಆಕ್ಸಿಜನ್ ನೀರು ಅಶುದ್ಧವಾಗಿದ್ದರೆ.
  • ತಂಪು ಸ್ಥಳ ಯಾವಾಗಲೂ ಫಂಗಸ್’ ಬಹಳ ಬೇಗ ಬೆಳೆಯುವದು.
  • ಒಂದೇ ಮಾಸ್ಕನ್ನು ಪದೇ ಪದೇ ಬಳಸುವದರಿಂದ.


ಕಪ್ಪು ಫಂಗಸ್ ಲಕ್ಷಣಗಳು:

ಮೊದಲು ಇದು ಪ್ರಾರಂಭವಾಗುವುದು ಮೂಗಿನಿಂದ.
ಮೂಗು ಕಣ್ಣು ನೋವು ಮತ್ತು ಕಣ್ಣಿನ ಕೆಳಭಾಗದಲ್ಲಿ ಕೆಂಪಾಗುವುದು.
ಮುಗಿನಿಂದ ದುರ್ವಾಸನೆ, ಉಸಿರಾಡಕ್ಕೆ ತೊಂದರೆ, ಮೂಗಿನ ಹೋಳ್ಳಿಗಳಲ್ಲಿ ಕಪ್ಪು ಪದಾರ್ಥ ಬರುವುದು, ಆಗಾಗ ಮೂಗಿನಿಂದ ರಕ್ತ ಬರುವುದು, ಸೈನಸ್ ತೊಂದರೆ, ಮೂಗಿನಿಂದ ಫಂಗಸ್ ಕಣ್ಣಿಗೆ ಅತಿಕ್ರಮಿಸುವುದು, ಕಣ್ಣು ಬಾವು ಬರುವುದು, ಕಣ್ಣಲ್ಲಿ ನೀರು ಬರುವುದು, ಕಣ್ಣು ಕಾಣಿಸದಿರುವುದು, ಇತ್ಯಾದಿ, ಇಲ್ಲಿ ಇನ್ನು ಚಿಕಿತ್ಸೆ ಪಡೆಯದಿದ್ದರೆ ಇದು ಬಾಯಲ್ಲಿ ಕಾಣಿಸುವುದು ಇದರಿಂದ ವಸಡೇಗಳಿಗೆ ಹಬ್ಬಿ, ಹಲ್ಲುಗಳು ಬೀಳುತ್ತವೆ. ಇನ್ನು ಹೆಚ್ಚಾದರೆ ಇದು ಮಿದುಳಿಗೆ ವ್ಯಾಪಿಸಿ ಕೀವು ಅಥವಾ ರಕ್ತಸ್ರಾನವಾಗಿ ಪ್ರಾಣಕ್ಕೆ ಅಪಾಯತರಬಹುದು.

ಕಪ್ಪು ಫಂಗಸ್ ಬಗ್ಗೆ ವೈದ್ಯರಿಂದಲೆ ತಿಳಿಯಲು ಮೇಲಿನ ವೀಡಿಯೊ ಮೇಲೆ ಕ್ಲಿಕ್ ಮಾಡಿ

ಚಿಕೆತ್ಸಾ ಕ್ರಮ:

  • ಈ ಫಂಗಸ್ಸಿನ ಒಂದು ಗುಣ – ದೇಹದ tissue ಅಂಗಗಳನ್ನು ನಾಶ ಮಾಡುವ ಪ್ರವೃತ್ತಿ ಹೊಂದಿರುತ್ತದೆ.
  • ಅದರಿಂದ ಬೇಗ ಕಂಡುಹಿಡಿದು ಚಿಕಿತ್ಸೆ ಕೊಡುವುದು ಅತೀ ಅವಶ್ಯ.
  • ರೋಗಿಗಳ ನಿಯಮಿತವಾಗಿ ಮೂಗು, ಕಣ್ಣು ಪರೀಕ್ಷೆ.
  • ಮುಗಿನಲ್ಲಿ ಕಪ್ಪು ಹಿಕ್ಕು ಅಥವಾ ದುರ್ವಾಸನೆ ಕಂಡುಬಂದರೆ, ಕೂಡಲೇ ನಿಮ್ಮ ಹತ್ತಿರದ ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ಡಾಕ್ಟರ್ ಸಲಹೆಯನ್ನು ಪಡೆಯಬೇಕು.
  • ನೆನಪಿಡಿ, ನೀವು ಯಾವತ್ತೂ ಈ ರೋಗಕ್ಕೆ ಇಂಟರ್ನೆಟ್ ನೋಡಿ ಅಥವಾ ಬೇರೆ ವಿಧಾನದ ಮೂಲಕ, ಅಂದರೆ ನಿಮ್ಮ ಡಾಕ್ಟರ್ ಸಂಪರ್ಕಿಸದೇ ಯಾವುದೇ ತರಹದ ಔಷಧಿಯನ್ನು ತಗೆದುಕೊಳ್ಳಬಾರದು.
  • ಫಂಗಸ್ ಮುಗಿನಲ್ಲಿ ಹೆಚ್ಚು ವ್ಯಾಪಿಸಿದರೆ, ಕೂಡಲೇ ಕಿವಿ, ಮೂಗು, ಗಂಟಲು ಡಾಕ್ತರನ್ನು ಸಂಪರ್ಕಿಸಿ.
  • “ಎಂಡೊ ಸ್ಕೋಪಿಕ್ ಶಸ್ತ್ರ ಚಿಕಿತ್ಸೆ ” ಇಂದ ತೆಗೆಯುವುದು. ಕಣ್ಣು ಮಿದುಳಿಗೆ ವ್ಯಾಪಿಸದಂತೆ
  • ಎಚ್ಚರವಹಿಸುವುದು. MRI Scan ಹಾಗೂ ಇತರೆ ಪರೀಕ್ಷೆ ಮಾಡುವುದು.

ಎಚ್ಚರ ವಯಸುವ ವಿಧಾನಗಳು:

  • ಮೇಲೆ ಬರೆದ ಯಾವುದೇ ರೋಗ ಲಕ್ಷಣಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು.
  • ನಿಮಗೆ COVID ಆಗಿ ಹೋಗಿ 2 ರಿಂದ 3 ವಾರದ ನಂತರ ಮೂಗು ಕಟ್ಟುವ ಅಥವಾ ತೆಲೆನೋವು, ಕಣ್ಣು ನೋವು ಅಂತಹ ಲಕ್ಷಣಗಳು ಕಂಡರೆ, ಕೂಡಲೇ ವ್ಯದ್ಯರನ್ನು ಸಂಪರ್ಕಿಸಿ.
  • ಯಾವತ್ತೂ Disposable mask ಅನ್ನೇ ಬಳಸಿ.
  • ಮೇಲೆಕಂಡ ಯಾವುದೇ ಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿರ್ಲಕ್ಷ ಮಾಡದೆ ತಕ್ಷಣ ಚಿಕಿತ್ಸೆ ಪಡೆದು ರೋಗ ಮುಕ್ತರಾಗಿರಿ.
  • ಆದುದರಿಂದ ವೈಯಕ್ತಿಕ ಕಾಳಜಿ ಮತ್ತು ಸ್ವಚ್ಛತೆ ಬಹಳ ಮುಖ್ಯ.

ಡಾ.ಚಂದ್ರಶೇಖರ್ ಬಳ್ಳಾರಿ, ಸೇವಾ ಗುಣದ ಸ್ವಭಾವದವರು. ಐವರು ವೈದ್ಯರನ್ನು ಹೊಂದಿರುವ ವೈದ್ಯರ ಈ ಕುಟುಂಬ ಕೋವಿಡ್ ಸಂಕಷ್ಟ ಕಾಲದಲ್ಲಿ ಜನ ಸಾಮಾನ್ಯರಿಗೆ ಇರುವ ಗೊಂದಲ ಹಾಗೂ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ನೀಡುತ್ತಿದ್ದಾರೆ.
ಉಚಿತ ಸೇವೆ ನೀಡುತ್ತಿರುವ ಡಾ.ಚಂದ್ರಶೇಖರ್ ಅವರನ್ನು ನೀವೂ ಕೂಡ ಅವರ ಮೊಬೇಲ್ ಸಂಖ್ಯೆ (9481000005) ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.

ಡಾ.ಚಂದ್ರಶೇಖರ ರಾ. ಬಳ್ಳಾರಿ
ಕಿವಿ, ಮೂಗು, ಗಂಟಲು ತಜ್ಞರು,
ರಾಜರಾಜೇಶ್ವರಿ ಕಿವಿ, ಮೂಗು, ಗಂಟಲು, ಕಣ್ಣು ಹಾಗೂ ದಂತ ಆಸ್ಪತ್ರೆ,
ಮಹಾತ್ಮ ಗಾಂಧಿ ಸರ್ಕಲ್, ಗದಗ. ಮೊ: 9481000005.

Leave a Reply

Your email address will not be published. Required fields are marked *

You May Also Like

ಲಿಂ.ತೋಂಟದ ಸಿದ್ದಲಿಂಗ ಶ್ರೀ ಅಪರೂಪದ ಸಂತ ಇಂಥ ಪೂಜ್ಯರನ್ನು ನಾನೆಂದೂ ಕಾಣೆನು

ಉತ್ತರಪ್ರಭ ಸುದ್ದಿ ಗದಗ: ಅವರೊಬ್ಬ ಅಪ್ಪಟ ಕನ್ನಡಿಗರು. ಕರುನಾಡು,ದೇಶ ಕಂಡ ಅಪರೂಪದ ಮಹಾನ ಕಾವಿಧಾರಿ ಸಂತರು.…

ಗದಗ ಜಿಲ್ಲೆಯಲ್ಲಿ ಬೀಗರ ಬುತ್ತಿಯಿಂದ ಕೊರೊನಾ ಭಯ..!

ಗದಗ: ಕೊರೊನಾ ಹೆಮ್ಮಾರಿ ಪ್ಯಾಟ್ಯಾಗಷ್ಟ ಗಿರಿಕಿ ಹೊಡೆಯುತ್ತಿತ್ತ. ಈಗ ಹಳ್ಳಿಗೂ ಬಂದು ಹಳ್ಳಿ ಜನ್ರಿಗೆ ಹಳಹಳಿ…

ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡಲ್ಲ: ಎಸ್.ಆರ್.ಹಿರೇಮಠ

ಗದಗ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡುವುದಿಲ್ಲ…

ಒಮಿಕ್ರಾನ ಭಿತಿ ಇಂದಲ್ಲಾ ನಾಳೆಯಿಂದ ಶುರು..!

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ…