ಬ್ಲಾಕ್ ಫಂಗಸ್ ಯಾರಲ್ಲಿ ಕಂಡು ಬರುತ್ತದೆ? ಡಾ. ಚಂದ್ರಶೇಖರ್ ಬಳ್ಳಾರಿ ನೀಡಿದ ಮಾಹಿತಿ

ಜಗತ್ತನ್ನೇ ತಲ್ಲೇನಿಸಿ ಲಕ್ಷಾಂತರ ಜನರ ಪ್ರಾಣವನ್ನೇ ಕಸಿದುಕೊಂಡ ಮಹಾಮಾರಿ ಕೊರೊನ ಇದೀಗ ಮತ್ತೊಂದು ಗಂಡಾತರ ತಂದಿದೆ. ಅದುವೇ ‘ಕಪ್ಪು ಫಂಗಸ್’ ಇಂಗ್ಲಿಷ್ ನಲ್ಲಿ ಇದಕ್ಕೆ ” MUCORMYCOSIS ” ಅಂತ ಕರಿಯುತ್ತಾರೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಕಂಡುಹಿಡಿದು ಗುಣಪಡಿಸದಿದ್ದರೆ, ರೋಗಿಗಳ ಪ್ರಾಣಕ್ಕೆ ಹಾನಿಕಾರವಾಗಬಲ್ಲದು. ಇದು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಫಂಗಸ್’ ಒಂದು ಜೀವ – ಪರಾವಲಂಬಿ, ಪರನ್ನಜೀವಿ ಹಾಗೂ ಕೆಟ್ಟಕಳೆ. ಇದು ಹೆಚ್ಚಾಗಿ ಕೊರೊನದಿಂದ ಗುಣಮುಖವಾಗುತ್ತಿರುವ ಅಥವಾ ಗುಣಮುಖವಾಗಿರುವರಲ್ಲಿ ಕಾಣಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇವು…..!

ಬೆಂಗಳೂರು : ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಿದೆ.