ಗದಗ: ಈಗಾಗಲೇ ರಾಜ್ಯದಲ್ಲಿ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮದ್ಯೆ ಗದಗನಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡವನ್ನು ಗದಗ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.

ವಶಪಡಿಸಿಕೊಳ್ಳಲಾದ ರೆಮಿಡಿಸಿವಿರ್ ಇಂಜಕ್ಷನ್

ಅವರು ಗದಗನಲ್ಲಿ ಈ ಕುರಿತು ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಮಹಿಳಾ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಪ್ರಕರಣದಲ್ಲಿ ನರ್ಸ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಬಂಧಿತ ಆರೋಪಿಗಳು 3 ಸಾವಿರ ರೂಪಾಯಿ ಔಷಧವನ್ನು 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಪಿ ಹೇಳಿದ್ದಾರೆ.

ಮಹ್ಮದ್ ಇಸ್ಮಾಯಿಲ್, ಪಿರೋಜ್ ಖಾನ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್ ಗವಿಸಿದ್ದಯ್ಯ, ರಮೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಖಾಸಗಿ ಆಸ್ಪತ್ರೆ ನರ್ಸ್ ಜ್ಯೋತಿ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ.


ಜೀವ ರಕ್ಷಕ ಇಂಜೆಕ್ಷನ್ ಔಷಧಿಯನ್ನು ಇವರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಲಾಗಿತ್ತು. ಸೈಬರ್ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಟಿ, ಅವರ ನೇತೃತ್ವದ ತಂಡ, ಗದಗ – ಮುಳಗುಂದ ರಸ್ತೆಯ ರಾಧಾಕೃಷ್ಣ ನಗರದ ಹತ್ತಿರ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 409, 420 ಸಹ ಕಲಂ- 34, ಐಪಿಸಿ ಮತ್ತು ಕಲಂ – 4,5,6 ಮತ್ತು 13, ಡ್ರಗ್ಸ್ ಕಂಟ್ರೋಲ್ ಕಾಯ್ದೆ -1950ರ ಅಡಿ ಪ್ರಕರಣ ದಾಖಲಾಸಿಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್ಪಿ ಯತೀಶ್ ಎನ್

ಬಂಧಿತರಿಂದ ವಶಪಡಿಸಿಕೊಂಡಿರುವ 14 ರೆಮಿಡಿಸಿವರ್ ನ ಸರ್ಕಾರ ನಿಗದಿಪಡಿಸಿದ ಮೌಲ್ಯ ರೂ. 48,860 ಇದೆ. ಆದರೆ, ಆರೋಪಿತರು ರೂ. 30 ಸಾವಿರದಂತೆ ರೂ. 4,20,000ನ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಸದ್ಯ ಬಂಧಿತರಿಂದ ರೂ. 2,500 ನಗದ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಈ ಪ್ರಕರಣದ ತನಿಖೆಯನ್ನು ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ ಮುಂದುವರೆಸಲಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ ಪೈಲ್ವಾನರ ಮಾಶಾಸನ ಬಿಡುಗಡೆಗೆ ಒತ್ತಾಯ

ಜಿಲ್ಲಾ ಪೈಲ್ವಾನರ ಮಾಶಾಸನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ನೀಡುವ ವೇಳೆ ಜಟಾಪಟಿ ನಡೆದ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಹೆತ್ತವರನ್ನೇ ಹತ್ಯೆಗೈದ ಪಾಪಿ ಮಗ..!

ತಂದೆ ತಾಯಿಯೇ ದೇವರು ಎಂದು ಪೂಜಿಸುವ ಈ ಕಾಲದಲ್ಲಿ ಇಲ್ಲೋಬ್ಬ ಪಾಪಿ ಮಗನೊಬ್ಬ ತನ್ನ ಹೆತ್ತವರನ್ನೇ ಕಬ್ಬಿಣದ ರಾಡ್​​ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಒಮಿಕ್ರಾನ ಭಿತಿ ಇಂದಲ್ಲಾ ನಾಳೆಯಿಂದ ಶುರು..!

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ…

ಇಬ್ರಾಹಿಂ ಸುತಾರ ಅವರಿಗೆ ಶ್ರದ್ಧಾಂಜಲಿ

ಮುಳಗುಂದ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಎಂದೆ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು…